ರೈಲ್ವೇ ನೇಮಕಾತಿ : 14033 ಹುದ್ದೆಗಳಿಗೆ ಜ.2ರಿಂದ ಅರ್ಜಿ ಹಾಕಿ

ಬೆಂಗಳೂರು, ಜನವರಿ 01 : ರೈಲ್ವೇ ನೇಮಕಾತಿ ಮಂಡಳಿ 14033 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜನವರಿ 2 ರಿಂದ 31ರ ತನಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಜ್ಯೂನಿಯರ್ ಇಂಜಿನಿಯರ್ 13034, ಜ್ಯೂನಿಯರ್ ಇಂಜಿನಿಯರ್ (information technology) 49, Depot material superintendent 456, Chemical and metallurgical assistant 494 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1/1/2019ಕ್ಕೆ ಅನ್ವಯವಾಗುವಂತೆ.

Railway Recruitment Board notification for 14033 post

ವೇತನ ಶ್ರೇಣಿ : 35,400 (ಲೆವಲ್ 6 ಆಫ್ 7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್). ಅಭ್ಯರ್ಥಿಗಳನ್ನು ಎರಡು ಹಂತದ ಕಂಪ್ಯೂಟರ್ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ? : ಅಭ್ಯರ್ಥಿಗಳು ರೈಲ್ವೇ ನೇಮಕಾತಿ ಮಂಡಳಿ ಅಧಿಕೃತ ವೆಬ್‌ಸೈಟ್ ಮೂಲಕ ಜನವರಿ 2 ರಿಂದ 31ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಸಾಮಾನ್ಯ ವರ್ಗದವರಿಗೆ 500 ರೂ., ಎಸ್‌ಸಿ/ಎಸ್‌ಟಿ/ಓಬಿಸಿ/ಅಂಗವಿಕಲ/ಮಾಜಿ ಸೈನಿಕರಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ.

ರೈಲ್ವೇ ನೇಮಕಾತಿ ಮಂಡಳಿ ಪಾರದರ್ಶಕವಾಗಿ ಕಂಪ್ಯೂಟರ್ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ. ಯಾವುದೇ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+