ಪಂಜಾಬ್ ಅಂಡ್ ಸಿಂದ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜುಲೈ 25 : ಪಿಎಸ್‌ಬಿ 27 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 9, 2018 ಕೊನೆಯ ದಿನವಾಗಿದೆ.
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ ಮ್ಯಾನೇಜರ್, ಚೀಫ್ ಟೆಕ್ನಾಲಜಿ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಮ್ಯಾನೇಜರ್ ಹುದ್ದೆಗೆ ಕಾನೂನಿನಲ್ಲಿ ಪದವಿಯನ್ನು (3 ಅಥವ 5 ವರ್ಷ) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.

ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಎಲೆಕ್ಟ್ರಾನಿಕ್ಸ್/ಐಟಿ ಇಂಜಿನಿಯರಿಂಗ್/ಐಟಿ ಸಿಸ್ಟಮ್ಸ್ ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್/ಎಂಸಿಎಯನ್ನು ಪ್ರಥಮ ದರ್ಜೆಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿ : ಮ್ಯಾನೇಜರ್ ಹುದ್ದೆಗೆ 25 ರಿಂದ 35 ವರ್ಷದ ವಯೋಮಿತಿ ನಿಗದಿಗೊಳಿಸಲಾಗಿದೆ. ಜೂನ್ 30 2018ಕ್ಕೆ ಅನ್ವಯವಾಗುವಂತೆ. ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ 42 ರಿಂದ 52 ವರ್ಷದ ವಯೋಮಿತಿ ಏಪ್ರಿಲ್ 30, 2018ಕ್ಕೆ ಅನ್ವಯವಾಗುವಂತೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕದ ವಿವರ
ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 150 ರೂ. ಮತ್ತು ಜಿಎಸ್‌ಟಿ ಶುಲ್ಕ
ಉಳಿದ ಅಭ್ಯರ್ಥಿಗಳಿಗೆ ಮ್ಯಾನೇಜರ್ ಹುದ್ದೆಗೆ 600 ರೂ. ಮತ್ತು ಜಿಎಸ್‌ಟಿ ಶುಲ್ಕ
ಟೆಕ್ನಾಲಜಿ ಆಫೀಸರ್ ಹುದ್ದೆಗೆ 700 ರೂ. ಮತ್ತು ಜಿಎಸ್‌ಟಿ ಶುಲ್ಕ
ವೇತನ ಶ್ರೇಣಿ ಮ್ಯಾನೇಜರ್ ಹುದ್ದೆಗೆ 31705 - 45950 ರೂ. ವಯೋಮಿತಿ ನಿಗದಿ ಮಾಡಲಾಗಿದೆ. ಟೆಕ್ನಾಲಜಿ ಅಫೀಸರ್ ಹುದ್ದೆಗೆ 68680 ರಿಂದ 76520 ರೂ. ವೇತನ ನಿಗದಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications