Get Updates
Get notified of breaking news, exclusive insights, and must-see stories!

ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ನಿಗದಿ; ಯಾರಿಗೆ ಎಷ್ಟು ಸಂಬಳ?

ಬೆಂಗಳೂರು, ಸೆಪ್ಟೆಂಬರ್ 14; ಕರ್ನಾಟಕ ಸರ್ಕಾರ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಈ ವೇತನ ಪರಿಷ್ಕರಣೆ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಕರ್ನಾಟಕ ಸರ್ಕಾರವು ಕರಡು ಪ್ರಸ್ತಾವನೆ ಸಿದ್ಧಪಡಿಸಿ, ಆಕ್ಷೇಪಣೆ ಆಹ್ವಾನಿಸಿತ್ತು.

ಕರ್ನಾಟಕ ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿಯ ಸಭೆಯಲ್ಲಿ ಸ್ವೀಕೃತವಾದ ಸಲಹೆ/ ಆಕ್ಷೇಪಣೆಗಳ ಕುರಿತು ಚರ್ಚೆ ನಡೆಸಲಾಗಿದೆ. ಸಭೆಯ ನಡಾವಳಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಪ್ರದತ್ತಾವಾದ ಅಧಿಕಾರವನ್ನು ಚಲಾಯಿಸಿ ಮತ್ತು ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿದೆ. ಈ ವೇತನ ಪರಿಷ್ಕರಣೆ ಆದೇಶ ಹೊರಡಿಸಲಾಗಿದೆ.

1948ರ ಕನಿಷ್ಠ ವೇತನ ಕಾಯ್ದೆ ಅನ್ವಯ ಕರ್ನಾಟಕ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1), ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು, ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಈ ಕನಿಷ್ಠ ವೇತನ ಜಾರಿಯಾಗಲಿದೆ.

ಎಲ್ಲಿ, ಎಷ್ಟು ಕನಿಷ್ಠ ವೇತನ?

ಎಲ್ಲಿ, ಎಷ್ಟು ಕನಿಷ್ಠ ವೇತನ?

ಕೆಮಿಸ್ಟ್, ಸೂಪರ್ ವೈಸರ್ (ಸ್ಯಾನಿಟರಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 17,955.52 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 17,471.52 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 16,999.62 ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 16,382.52 ರೂ.ಗಳು.

ಗುಮಾಸ್ತ, ಕ್ಲರ್ಕ್, ಕಂಪ್ಯೂಟರ್ ಆಪರೇಟರ್, ಡಾಡಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ಎಲೆಕ್ಟ್ರಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಸಹಾಯಕ ಗ್ರಂಥಪಾಲಕ ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 16,564.02 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 16,116.32 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 15,729.12 ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 15,196.72 ರೂ.ಗಳು.

ಯಾರಿಗೆ ಸಿಗಲಿದೆ ಎಷ್ಟು ವೇತನ?

ಯಾರಿಗೆ ಸಿಗಲಿದೆ ಎಷ್ಟು ವೇತನ?

ಚಾಲಕರು ಕಂ ಆಪರೇಟರ್ಸ್, ಯುಜಿಡಿ ಜೆಸಿಪಿ, ಕಾಂಪಾಕ್ಟ್‌ ಮಷಿನ್, ಸ್ವೀಪಿಂಗ್ ಮಷಿನ್. ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 15,777.52 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 15,354.02 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 14,991.02 ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 14,446.52 ರೂ.ಗಳು.

ಚಾಲಕರು ಲಾರಿ/ ಬಸ್/ ಟ್ರಾಕ್ಟರ್/ ಜೀಪು/ ಕಾರು ಹಾಗೂ ಕ್ಲೀನರ್ಸ್‌ ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 13,974.62 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 13,660.02 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 13,345.42 ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 12,873.52 ರೂ.ಗಳು.

ಕನಿಷ್ಠ ವೇತನ ನಿಗದಿ ಮಾಡಲಾಗಿದೆ

ಕನಿಷ್ಠ ವೇತನ ನಿಗದಿ ಮಾಡಲಾಗಿದೆ

ಪಂಪ್ ಆಪರೇಟರ್, ಮೆಕಾನಿಕ್, ಬಾಲವಾಡಿ ಕಾರ್ಯಕರ್ತರು, ಪ್ಲಂಬರ್, ಹಾರ್ಟಿಕಲ್ಚರ್ ಅಸಿಸ್ಟೆಂಟ್, ಪಂಪು ರಿಪೇರಿ ಮಾಡುವವರು, ವಾಟರ್ ಮ್ಯಾನ್ (ನೀರು ಗಂಟಿ), ವಾಲ್ಟ್ ಮ್ಯಾನ್ (ನೀರು ಸರಬರಾಜು).

ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 14,657.72 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 14,325.52 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 13,993.32, ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 13,509.32 ರೂ.ಗಳು.

ಯಾವ ಸಿಬ್ಬಂದಿಗೆ ಎಷ್ಟು ವೇತನ?

ಯಾವ ಸಿಬ್ಬಂದಿಗೆ ಎಷ್ಟು ವೇತನ?

ಜವಾನರು, ಅಟೆಂಡರ್, ಗಾರ್ಡನರ್, ದಫೆದಾರ್, ಸ್ಮಶಾನ ಕಾವಲುಗಾರ, ಕಾವಲುಗಾರ, ಕಚೇರಿ ಮತ್ತು ಆವರಣ ಸ್ವಚ್ಛತೆಗಾರ/ ಶುಚಿಗೊಳಿಸುವುದು, ಕರಕುಶರಲ್ಲದ ಇತರೆ ವರ್ಗಗಳು. ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 13,974.62 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 13,660.02 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 13,345.42 ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 12,873.52 ರೂ.ಗಳು.

ರಸ್ತೆಗಳನ್ನು ಗುಡಿಸುವುದು, ಯಂತ್ರಗಳ ಸಹಾಯದಿಂದ ಒಳಗೊಂಡಂತೆ ಶುಚಿತ್ವಗೊಳಿಸುವುದನ್ನು ಒಳಗೊಂಡಂತೆ ಒಳಚರಂಡಿ, ಸ್ನಾನಗೃಹ ಮತ್ತು ಶೌಚಾಲಯಗಳನ್ನು ಸ್ವಚ್ಚಗೊಳಿಸುವುದು. ಕಸ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿ ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಕೆಲಸಗಾರರು. ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು 17,306.52 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1) 16,877.52 ರೂ. ಹಾಗೂ ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್‌-2) ಹಾಗೂ ಪುರಸಭೆಗಳು 16,448.52 ರೂ.ಗಳು. ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು 16,019.52 ರೂ.ಗಳು.

ತುಟ್ಟಿಭತ್ಯೆಯ ವ್ಯತ್ಯಾಸಗಳು

ತುಟ್ಟಿಭತ್ಯೆಯ ವ್ಯತ್ಯಾಸಗಳು

ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+