ಒಎನ್ ಜಿಸಿ 721 ಹುದ್ದೆಗಳಿಗೆ ಅರ್ಜಿ ಆಹ್ವಾನ, ಏ.27ಕೊನೆ ದಿನ
ಖಾಲಿ ಇರುವ ಗ್ರಾಜುಯೇಟ್ ಟ್ರೈನಿ 721 ಹುದ್ದೆಗಳಿಗೆ ಒಎನ್ ಜಿಸಿ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಏಪ್ರಿಲ್ 27 ಕೊನೆ ದಿನವಾಗಿದೆ.
ಬೆಂಗಳೂರು, ಏಪ್ರಿಲ್ 14 : ಕೇಂದ್ರ ಸರಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಲಿಮಿಟೆಡ್ (ಒಎನ್ ಜಿಸಿ) ನಲ್ಲಿ ಖಾಲಿ ಇರುವ 721 ಗ್ರಾಜುಯೇಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಒಎನ್ ಜಿಸಿ ಕಚೇರಿಯ ವೆಬ್ ಸೈಟ್ ಮೂಲಕ ದಿನಾಂಕ ಏಪ್ರಿಲ್ 27ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳು: 721 ( Graduate Trainee Posts)
ವಯೋಮಿತಿ: ಗರಿಷ್ಠ 63 ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದು.
ವೇತನ: 75000 ರು (ತಿಂಗಳಿಗೆ)
ವಿದ್ಯಾರ್ಹತೆ: ಗ್ರಾಜುಯೇಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು. ಅಥವಾ ಪದವಿಯಲ್ಲಿ ಶೇ 60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ: ಮೊದಲ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಂತರ ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಬಗ್ಗೆ ಹೆಚ್ಚಿನ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications