ಮೈಸೂರು; ಮಿನಿ ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿ
ಮೈಸೂರು, ಆಗಸ್ಟ್ 20; ಕೌಶಲ್ಯ ಮಾಸ ಆಚರಣೆಯ ಅಂಗವಾಗಿ ಮೈಸೂರಿನಲ್ಲಿ ಆಗಸ್ಟ್ 30ರಂದು ಬೆಳಗ್ಗೆ 9 ರಿಂದ 4 ರವರೆಗೆ ದಸರಾ ವಸ್ತು ಪ್ರದರ್ಶನ ಆವರಣ ದೊಡ್ಡಕೆರೆ ಮೈದಾನದಲ್ಲಿ ಒಂದು ದಿನದ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಆಸಕ್ತರು ಹೆಸರನ್ನು ನೋಂದಾವಣೆ ಮಾಡಿಸಿಕೊಳ್ಳಬೇಕು.
ಮೈಸೂರು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮೈಸೂರು ಹಾಗೂ ಜಿಲ್ಲಾ ಉದ್ಯೋಗ ವಿಮೆಯ ಕಛೇರಿ ಸಹಯೋಗದಲ್ಲಿ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಮೈಸೂರು ಹಾಗೂ ಬೆಂಗಳೂರು ಮೂಲದ ಖಾಸಗಿ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.
7ನೇ ತರಗತಿಯಿಂದ ಎಸ್. ಎಸ್. ಎಲ್. ಸಿ., ಪಿಯುಸಿ, ಎಲ್ಲಾ ಪದವಿ, ಐಟಿಐ (ಮೆಕ್ಯಾನಿಕಲ್, ಫಿಟ್ಟರ್) ಹಾಗೂ ಡಿಪ್ಲೊಮಾ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಮತ್ತು ನರ್ಸಿಂಗ್ (ANM & GNM) ವಿದ್ಯಾರ್ಹತೆ ಹೊಂದಿರುವವರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರದ ಪ್ರತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಉದ್ಯೋಗಮೇಳದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಈ ಕೆಳಗಿನ ಲಿಂಕ್ tinyurl.com/RegistrationJobFairMysuru ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು.
ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಪಾವಧಿ ಉಚಿತ ತರಬೇತಿ; ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ವತಿಯಿಂದ ಅಲ್ಪಾವಧಿ ಉಚಿತ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಬಡ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ, ಪಿಯುಸಿ, ಡಿಪ್ಲೊಮಾ ಮತ್ತು ಬಿಇ (ಮೆಕ್ಯಾನಿಕಲ್ ವರ್ಗ) ಪಾಸದ ಅಭ್ಯರ್ಥಿಗಳಿಗೆ ಟರ್ನರ್, ಮಿಲ್ಲರ್, ಗ್ರೈಂಡರ್, ಫಿಟ್ಟರ್ ಮೆಕ್ಯಾನಿಕಲ್ ಅಸ್ಸೆಂಬ್ಲಿ, ಮಿಲ್ಲಿಂಗ್, ಗ್ರೈಂಡಿಂಗ್, ಮತ್ತು ಡಿಸೈನರ್ ಮೆಕ್ಯಾನಿಕಲ್-ಕ್ಯಾಟಿಯ, ಟೂಲ್ ರೂಂ ಮೆಷಿನಿಸ್ಟ್ IOT, PDV, CAD-CAM, Mechatronics, RPT, Robotics & Renewable Energy courseಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು http://www.kaushalkar.com ವೆಬ್‍ಸೈಟ್‍ನಲ್ಲಿ ಸೆಪ್ಟೆಂಬರ್ 16 ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 16-45 ವರ್ಷ ವಯೋಮಿತಿ, ಇತರೆ ಅಭ್ಯರ್ಥಿಗಳು 16 - 35 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ವಿದ್ಯಾಭ್ಯಾಸದ ಪ್ರಮಾಣ ಪತ್ರ ಇತರೆ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಪ್ರತಿ ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಕರ್ಷಕ ಶಿಷ್ಯ ವೇತನ ನೀಡಲಾಗುವುದು. ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗದ ಉಚಿತ ಮಾರ್ಗದರ್ಶನವನ್ನು ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ 125 ರೂ. ಆಗಿದ್ದು, ಇತರೆ ವರ್ಗದ ಅಭ್ಯರ್ಥಿಗಳಿಗೆ 250 ರೂ. ಇರುತ್ತದೆ. ಹೆಚ್ಹಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ.93, 94 ಬೆಳಗೋಳ ಕೈಗಾರಿಕಾ ಪ್ರದೇಶ, ಕೆ.ಅರ್.ಎಸ್ ರೋಡ್ ಮೈಸೂರು-570016 ಇವರನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications