NWKRTC Recruitment: ವಾಯುವ್ಯ ಸಾರಿಗೆ ನಿಗಮದಿಂದ 400 ಸಿಬ್ಬಂದಿ ನೇಮಕಾತಿ

ಹುಬ್ಬಳ್ಳಿ, ಅಕ್ಟೋಬರ್ 10: ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಅತ್ಯುತ್ತಮ ಸೇವೆ ನೀಡುತ್ತಿರುವ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈ ಮಧ್ಯೆ ಪ್ರಯಾಣಿಕರಿಂದ ಹೆಚ್ಚು ಬಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶಕ್ತಿ ಯೋಜನೆ ಬಳಿಕ ಬಸ್ ಪ್ರಯಾಣ ತುಸು ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಸದ್ಯ ನಿಗಮವು ಸಿಬ್ಬಂಧಿ ನೇಮಕಾತಿಗೆ ನಿರ್ಧರಿಸಿದೆ.

ಹೌದು, ವಾಯುವ್ಯ ಸಾರಿಗೆ ಬಸ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಬಹುದಿನಗಳಿಂದ ಉಂಟಾಗಿದ್ದ ಸಾರಿಗೆ ಸಿಬ್ಬಂದಿ ಸಮಸ್ಯೆಗೆ ತಾತ್ಕಾಲಿಕವಾಗಿ ಮುಕ್ತಿ ಹಾಡಲು ನಿಮಗದ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಹೊರಗುತ್ತಿಗೆ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದಲ್ಲಿ 1,000 ಬಸ್ ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಲಾಗಿದೆ. ಈ ನೇಮಕಾತಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

NWKRTC Will Be Recruitment 400 Staff for Contract Based from Agency Soon

ಈ ಗುತ್ತಿಗೆ ಆಧಾರದ ನೇಮಕಾತಿಯು ಗರಿಷ್ಠ 11 ತಿಂಗಳ ಅವಧಿಗೆ ಸಿಮೀತವಾಗಿರುವಂತೆ ಸಿಬ್ಬಂದಿ ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ಖಾಯಂ ನೌಕರರನ್ನು ವಜಾಗೊಳಿಸಿದರೆ ಅಂತಹ ಸಂದರ್ಭದಲ್ಲಿ ಹೊರಗುತ್ತಿಗೆ ಚಾಲಕರನ್ನು ನೇಮಿಸಿಕೊಳ್ಳಲು ಪ್ಲಾನ್ ಮಾಡಲಾಗಿದೆ. ಅಲ್ಲದೇ, ಚಾಲಕರು ಹುಬ್ಬಳ್ಳಿಯಲ್ಲಿ ತರಬೇತಿ ಪಡೆದಿದ್ದಾರೆ.

ಹುಬ್ಬಳ್ಳಿಯ ಎನ್‌ಡಬ್ಲ್ಯುಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ ಅವರು ಈ ಕುರಿತು ಮಾತನಾಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಏಜೆನ್ಸಿಯ ಮೂಲಕ 400 ಚಾಲಕರ ನಿಗಮಕ್ಕೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ಟೆಂಡರ್ ಮೂಲಕ ಏಜೆನ್ಸಿನಿಂದ ನೇಮಕಾತಿ ನಡೆಯುತ್ತಿದೆ. ಕೆಲ ಜಿಲ್ಲೆಗಳಲ್ಲಿ ಸಾಕಷ್ಟು ಯುವಕರು ಸಿಗದ ಕಾರಣ ನೇಮಕಾತಿಗೆ ಭರ್ಜರಿ ಪ್ರಚಾರ ನಡೆದಿದೆ. ಆದ್ದರಿಂದ ಸಿಬ್ಬಂದಿ ನೇಮಕ ವಿಳಂಬ ವಾಗುತ್ತಿದೆ. 2,000 ಸಿಬ್ಬಂದಿ ಮೊದಲ ಹಂತದಲ್ಲಿ 400 ಮಂದಿಯನ್ನು ಕೆಎಸ್‌ಆರ್‌ಟಿಸಿ ನೇಮಿಸಿಕೊಂಡಿದೆ. NWKRTC 120 ಚಾಲಕರನ್ನು ನೇಮಿಸಿಕೊಂಡಿದೆ. ಒಟ್ಟು 280 ಸಿಬ್ಬಂದಿಗೆ ಹೆವಿ ವೆಹಿಕಲ್ ಲೈಸೆನ್ಸ್, ಬ್ಯಾಡ್ಜ್‌ಗಳು, ಫಿಟ್‌ನೆಸ್‌ಗಳನ್ನು ಪರಿಶೀಲಿಲಾಗುತ್ತಿದೆ. ಅಗತ್ಯ ತರಬೇತಿ ಸಹ ಒದಗಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ NWKRTC ಅನ್ನು ಖಾಸಗೀಕರಣ ಮಾಡಲಾಗುತ್ತಿದೆಯೆ ಎಂಬ ಅನುಮತಿವನ್ನು ಕೆಲವು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ತಿಂಗಳು ಸಿಬ್ಬಂದಿ ನಿವೃತ್ತವಾಗುತ್ತಿದ್ದಾರೆ. ಈ ಕಾರಣದಿಂದ ಸಿಬ್ಬಂದಿ ಕೊರತೆ ಆಗದಂತೆ ಸದ್ಯ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಎಂಡಿ ತಿಳಿಸಿದ್ದಾರೆ.

ಈ ಸಾರಿಗೆ ನಿಮಗವು ಏಜೆನ್ಸಿ ಜೊತೆಗೆ ಈ ನೇಮಕಾತಿಗಾಗಿ ಮಾಡಿಕೊಂಡು ಒಪ್ಪಂದವು ಗರಿಷ್ಠ 11 ತಿಂಗಳವರೆಗೆ ಜಾರಿಯಲ್ಲಿದೆ. ಯಾವಾಗ ಬೇಕಿದ್ದರೂ ಒಪ್ಪಂದ ಅಂತ್ಯಗೊಳಿಸಲು ಅವಕಾಶ ಇದೆ. ಸದ್ಯಕ್ಕೆ 1,000 ಸಿಬ್ಬಂದಿಯ ನೇಮಕಾತಿಗೆ ತೀರ್ಮಾನಿಸಿದ್ದೇವೆ, ಅದು ಪ್ರಗತಿಯಲ್ಲಿದೆ ಎಂದು ನಿಗಮದ ಮುಖ್ಯಸ್ಥರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+