NWKRTC Recruitment 2022 : ಮಾಸಿಕ ವೇತನ 10 ಸಾವಿರ ರೂ.

ಹುಬ್ಬಳ್ಳಿ, ಮಾರ್ಚ್ 24; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಗೋಕುಲ ರಸ್ತೆ ಹುಬ್ಬಳ್ಳಿ ಗೌರವ ಸಂಭಾವನೆ ಮೇಲೆ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆದಿದೆ. ಅರ್ಜಿಗಳನ್ನು ಖುದ್ದಾಗಿ ಅಥವ ಇ-ಮೇಲ್ ಮೂಲಕ ಸಲ್ಲಿಕೆ ಮಾಡಲು 31/3/2022 ಕೊನೆಯ ದಿನವಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಸ್ಪತ್ರೆಗೆ ಕಿರಿಯ ಲ್ಯಾಬ್ ಟೆಕ್ನಿಶಿಯನ್ ನೇಮಕ ಮಾಡಲಾಗುತ್ತಿದೆ. ಅರೇಕಾಲಿಕ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ 1 ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.

ಕಿರಿಯ ಲ್ಯಾಬ್ ಟೆಕ್ನಿಶಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರವನ್ನು ಒಂದು ವಿಷಯವನ್ನಾಗಿ ಪಡೆದು ಉತ್ತೀರ್ಣರಾಗಿರಬೇಕು & 12 ತಿಂಗಳು ಲ್ಯಾಬೋಲೆಟರಿ ಟೆಕ್ನಿಶಿಯನ್ ಟ್ರೈನಿಂಗ್ ಅನ್ನು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ಸಂಸ್ಥೆಯಲ್ಲಿ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು.

NWKRTC Recruitment 2022 Apply For Junior Lab Technician Post

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವ ಸಂಭಾವನೆ ರೂ. 10 ಸಾವಿರ ನೀಡಲಾಗುತ್ತದೆ. ಇದರ ಹೊರತಾಗಿ ಇತರೇ ಯಾವುದೇ ಭತ್ಯೆಗೆ ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಅರೇಕಾಲಿಕ ನೇಮಕವು ಯಾವುದೇ ರೀತಿಯ ಖಾಯಂ ನೇಮಕಾತಿಯನ್ನು ಅಥವ ಸಂಸ್ಥೆಯಲ್ಲಿ ಸೇವಾ ಪ್ರಯೋಜನೆಯನ್ನು ಪಡೆಯುವ ಅಭ್ಯರ್ಥನದ ಹಕ್ಕನ್ನು ನೀಡುವುದಿಲ್ಲ.

ಈ ನಿಯೋಜನೆ ತಾತ್ಕಾಲಿಕವಾಗಿದ್ದು, ಸಂಸ್ಥೆಯ ವತಿಯಿಂದ ಪೂರ್ಣಾವಧಿ ಕಿರಿಯ ಲ್ಯಾಬ್ ಟೆಕ್ನಿಶಿಯನ್ ನೇಮಕಾತಿಗೊಳಿಸಿದ ನಂತರ ಅಥವ ಅಸಮರ್ಪಕ ಸೇವೆ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡಲಾರದೇ ರದ್ದುಗೊಳಿಸಬಹುದಾಗಿರುತ್ತದೆ.

ಕಿರಿಯ ಲ್ಯಾಬ್ ಟೆಕ್ನಿಶಿಯನ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ವೈದ್ಯರು ಸೂಚಿಸುವ ತಪಾಸಣೆಗೊಳಪಡಿಸಿ ವೈದ್ಯಕೀಯ ಸಲಹೆ ಮತ್ತು ಶುಶ್ರೂಷೆ ನೀಡುವುದು.

ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯ ನಿಗದಿತ ಕೆಲಸದ ಅವಧಿಯಲ್ಲಿ ಪ್ರತಿನಿತ್ಯ ಆಸ್ಪತ್ರೆಯ ಕಚೇರಿಯ ಅವಧಿಯಲ್ಲಿ ಕಾರ್ಯ ನಿರ್ವಹಣೆ ಮಾಡುವುದು. ವೈದ್ಯರು ಸೂಚಿಸುವ ಅವಶ್ಯಕ ತಪಾಸಣೆಗಳನ್ನು ಮಾಡಿ ಅಗತ್ಯ ಸಲಹೆ, ಸೂಚನೆಗಳನ್ನು ಚಿಕಿತ್ಸೆಗೆ ಸಂಬಂಧಿಸಿದಂತೆ ನೀಡುವುದು.

ಸಂಸ್ಥೆಯ ಚಿಕಿತ್ಸಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಬಾರದು. ಸಂಸ್ಥೆಯ ಅಧಿಕಾರಿ/ ನೌಕರರ ಹಾಗೂ ಅವರ ಅವಲಂಬಿತರ ಚಿಕಿತ್ಸಾ ಮಾಹಿತಿಯನ್ನು ವೈದ್ಯರ ಅನುಮತಿ ಇಲ್ಲದೇ ಅನ್ಯರಿಗೆ ನೀಡಬಾರದು.

ಈ ಮೇಲಿನ ಷರತ್ತು ಮತ್ತು ನಿಬಂಧನೆಗಳಿಗೆ ಒಪ್ಪಿದಲ್ಲಿ ಲಿಖಿತ ರೂಪದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರ, ವಿದ್ಯಾರ್ಹತೆ, ಅನುಭವ, ಜನ್ಮ ದಿನಾಂಕ, ಇತರ ಮಾಹಿತಿಯೊಂದಿಗೆ ಅರ್ಜಿಯನ್ನು ದಾಖಲೆಗಳ ನಕಲು ಪ್ರತಿಯೊಂದಿಗೆ ಸಲ್ಲಿಸಬೇಕು.

ಅರ್ಜಿಗಳನ್ನು 31/3/2022ರೊಳಗೆ ಕಚೇರಿಯ ಸಮಯದಲ್ಲಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ, ಗೋಕುಲ ರಸ್ತೆ, ಹುಬ್ಬಳ್ಳಿ 58030 ಸಲ್ಲಿಸಬೇಕು. ಇ-ಮೇಲ್ ಮೂಲಕ ಕಳಿಸಲು ವಿಳಾಸ [email protected]

ಮಡಿಕೇರಿಯಲ್ಲಿ ಕೆಲಸ ಖಾಲಿ ಇದೆ; ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹುದ್ದೆಗಳು ಖಾಲಿ ಇದ್ದು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಜಿ ಸಲ್ಲಿಸಲು ಏಪ್ರಿಲ್ 23 ಕೊನೆಯ ದಿನ.

ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಮಾಸಿಕ ಗೌರವಧನ 6 ಸಾವಿರ ರೂ. ನಿಗದಿ ಮಾಡಲಾಗಿದೆ. ಈ ಎರಡು ಹುದ್ದೆಗಳಿಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ/ ಅನುತ್ತೀರ್ಣಗೊಂಡವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರಿಗೆ ವಿಕಲಚೇತನತೆ ಪ್ರಮಾಣ ಶೇ 40 ಕ್ಕಿಂತ ಮೇಲ್ಪಟ್ಟು ಶೇ 75ಕ್ಕಿಂತ ಕಡಿಮೆ ಇರಬೇಕು. ಅಭ್ಯರ್ಥಿಗಳಿಗೆ 18 ರಿಂದ 45 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಹುದ್ದೆಗಳು ನಗರಸಭೆ ಮಡಿಕೇರಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ವಿರಾಜಪೇಟೆ ಪಟ್ಟಣ ಪಂಚಾಯಿತಿ. ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ, ಚೆಂಬು, ಕುಂಜಿಲ, ಕೊಣಂಜಗೇರಿ ಸೋಮವಾರಪೇಟೆ ತಾಲ್ಲೂಕಿನ ಬೇಳೂರು, ಚೆಟ್ಟಳ್ಳಿ, ದುಂಡಳ್ಳಿ, ಹಂಡ್ಲಿ, ನೇರುಗಳಲೆ, ಆಲೂರು ಸಿದ್ದಾಪುರ. ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ, ಬಿರುನಾಣಿ, ದೇವರಪುರ, ಗೋಣಿಕೊಪ್ಪ, ಹಾಲುಗುಂದ, ನಿಟ್ಟೂರು, ನಾಲ್ಕೇರಿ, ಪೊನ್ನಪ್ಪಸಂತೆ, ಕದನೂರು, ಕೆ.ಬಾಡಗ, ಕಿರುಗೂರು, ಪಾಲಿಬೆಟ್ಟ, ತಿತಿಮತಿ, ಶ್ರೀಮಂಗಲದಲ್ಲಿ ಖಾಲಿ ಇವೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಸಂಬಂಧಿಸಿದ ತಾಲ್ಲೂಕಿನ ಎಂಆರ್‌ಡಬ್ಲ್ಯುಗಳಿಂದ ಉಚಿತವಾಗಿ ಪಡೆದು ಏಪ್ರಿಲ್ 23 ರೊಳಗೆ ಭರ್ತಿ ಮಾಡಿ ಕಚೇರಿಗೆ ಸಲ್ಲಿಸಬೇಕು.

Recommended Video

      IPL ಅಭ್ಯಾಸ ಪಂದ್ಯದಲ್ಲೇ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟ Venkatesh Iyer | Oneindia

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+