NIT Karnataka Recruitment 2023: ಸುರತ್ಕಲ್‌ನಲ್ಲಿ ಉದ್ಯೋಗ ಖಾಲಿ ಇದೆ
ಬೆಂಗಳೂರು, ನವೆಂಬರ್ 29: ಕರ್ನಾಟಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT Karnataka) ಸಂಸ್ಥೆ ತನ್ನಲ್ಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅಭ್ಯರ್ಥಿಗಳು ನವೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು.
ಕರ್ನಾಟಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಒಟ್ಟು 2 ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆ ಆಗುವವರಿಗೆ ಮಂಗಳೂರಿನ ಸುರತ್ಕಲ್‌ನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯಥಿಗಳು ಇಲ್ಲಿ ಕೊಡಲಾಗಿರುವ ಹುದ್ದೆಗಳ ಮಾಹಿತಿ, ಶೈಕ್ಷಣಿಕ ಅರ್ಹತೆ ಇನ್ನಿತರ ಮಾಹಿತಿ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕರ್ನಾಟಕ,
ಹುದ್ದೆ ಹೆಸರು: ಜೂನಿಯರ್ ರಿಸರ್ಚ್ ಫೆಲೋ
ಖಾಲಿ ಹುದ್ದೆ ಸಂಖ್ಯ: ಎರಡು
ವೇತನ: ನಿಗದಿ ಮಾಡಿಲ್ಲ
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 30
ವಿದ್ಯಾರ್ಹತೆ ಏನಿರಬೇಕು?
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್/ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್, ಎಂಇ/ಎಂ.ಟೆಕ್ ಪದವಿ ಪಡೆದಿರಬೇಕು ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ತಿಳಿಸಿದೆ.
ವಯೋಮಿತಿ
ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಉದ್ಯೋಗದ ಸ್ಥಳ
ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಿದೆ. ಬಳಿಕ ಇಲ್ಲಿ ಆಯ್ಕೆ ಆಗುವವರಿಗೆ ಸುರತ್ಕಲ್‌ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ವೇತನ ಸದ್ಯ ನಿಗದಿ ಮಾಡಿಲ್ಲ. ಅಭ್ಯರ್ಥಿಗಳ ಅನುಭವ ಹಾಗೂ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಸೂಕ್ತ ದಾಖಲೆಗಳೊಂದಿಗೆ ನೀಡಲಾಗಿರುವ ಇ-ಮೇಲ್ ಐಡಿ [email protected] ಗೆ ನಿಗದಿತ ದಿನಾಂಕದೊಳಗಾಗಿ ಕಳುಹಿಸಬೇಕು.
ನೆನಪಿಡಬೇಕಾದ ದಿನಾಂಕ
ಅಧಿಸೂಚನೆ ಬಿಡುಗಡೆ ದಿನ: 03/11/2023
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 30












Click it and Unblock the Notifications