ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KVAFSU Recruitment 2023: ಖಾಲಿ ಇರುವ 25 ಹುದ್ದೆಗಳಿಗೆ ಫೆ. 24 ರೊಳಗೆ ಅರ್ಜಿ ಸಲ್ಲಿಕೆ, ವಿಧಾನ ತಿಳಿಯಿರಿ

ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಖಾಲಿ ಇರುವ 25 ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಿದೆ. ಈ ಸಂಬಂದ ಅರ್ಹರಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

|
Google Oneindia Kannada News

ಬೆಂಗಳೂರು, ಜನವರಿ 30: ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಖಾಲಿ ಇರುವ 25 ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಿದೆ. ಈ ಸಂಬಂದ ಅರ್ಹರಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ನಲ್ಲಿ ಖಾಲಿ ಇರುವ 25 ಪ್ರೊಫೇಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಫೆಬ್ರುವರಿ 24ರೊಳಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.

Indian Post Recruitment 2023: ಇಲಾಖೆಯ 40,889 ಖಾಲಿ ಹುದ್ದೆಗಳಿಗೆ ಫೆ.16 ರೊಳಗೆ ಅರ್ಜಿ ಸಲ್ಲಿಸಿIndian Post Recruitment 2023: ಇಲಾಖೆಯ 40,889 ಖಾಲಿ ಹುದ್ದೆಗಳಿಗೆ ಫೆ.16 ರೊಳಗೆ ಅರ್ಜಿ ಸಲ್ಲಿಸಿ

ಈ ನೇಮಕಾತಿ ಕುರಿತಂತೆ ಅರ್ಜಿ ಸಲ್ಲಿಕೆಯ ವಿಧಾನ, ಶುಲ್ಕ, ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ವಯಸ್ಸು ಎಷ್ಟಿರಬೇಕು ಎಂಬೆಲ್ಲ ಮಾಹಿತಿ ಇಲ್ಲಿ ತಿಳಿಯಿರಿ.

KVAFSU Recruitment 2023: KVAF Dept invtes application for 25 posts, apply by Feb 24

ಹುದ್ದೆಗಳ ಮಾಹಿತಿ

ಇಲಾಖೆ - ರಾಜ್ಯ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ.

ಹುದ್ದೆ ಹೆಸರು - ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್.

ಒಟ್ಟು ಹುದ್ದೆ - 30

ಪ್ರೊಫೆಸರ್ ಹುದ್ದೆ- 05

ಅ.ಪ್ರೊಫೆಸರ್ ಹುದ್ದೆ- 20

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸ್ನಾತಕೊತ್ತರ ಪದವಿ ಮತ್ತು ಪದವಿ ಪಡೆದಿದ್ದು, ಅದರಲ್ಲಿ ಕನಿಷ್ಠ ಶೇಕಡಾ 55ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಂತವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

KVAFSU Recruitment 2023: KVAF Dept invtes application for 25 posts, apply by Feb 24

ವಯಸ್ಸಿನ ಮಿತಿ

ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕ (ಫೆ.24)ಕ್ಕೆ ಕನಿಷ್ಠ 18 ವರ್ಷ ವಯಸ್ಸು ಹೊಂದಿದ್ದು, ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.

ಮಾಸಿಕ ವೇತನ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 1,31,400 ರೂ.ನಿಂದ 2,17,000 ರೂಪಾಯಿವರೆಗೆ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ- ಆಯ್ಕೆ ವಿಧಾನ

ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲ ವರ್ಗ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಟ್ಟು 1,000/- ರೂಪಾಯಿ ಶುಲ್ಕ ಪಾವತಿಸಬೇಕಿದೆ. ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು http://www.kvafsu.edu.in./recruitment.html ಸಂಸ್ಥೆಯ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

English summary
KVAFSU Recruitment 2023: Karnataka Veterinary, Animal and Fisheries Sciences University (KVAFSU) invites application for 25 posts, apply by February 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X