KSSFCL Recruitment: ಬೆಂಗಳೂರಲ್ಲಿ ಸರ್ಕಾರಿ ಉದ್ಯೋಗವಕಾಶ, 39 ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟಂಬರ್ 05: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (KSSFCL) ತನ್ನಲ್ಲಿರುವ ಹಲವು ಖಾಲಿ ಉದ್ಯೋಗಗಳ ಭರ್ತಿಗೆ ನಿರ್ಧರಿಸಿರುವ ಸಂಸ್ಥೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಕೆ ಕೊನೆ ದಿನ ಸೆಪ್ಟೆಂಬರ್ 9ರವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (KSSFCL) ನಲ್ಲಿ ಒಟ್ಟು 39 ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳು ಇವೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲ್ಲಿ ನೀಡಲಾಗಿರುವ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಮಾಸಿಕ ವೇತನ ಇನ್ನಿತರ ಮಾಹಿತಿ ತಿಳಿದುಕೊಳ್ಳಬಹುದು.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್
ಉದ್ಯೋಗ ಹೆಸರು: ಜೂನಿಯರ್ ಅಸಿಸ್ಟೆಂಟ್, ಡ್ರೈವರ್
ಒಟ್ಟು ಹುದ್ದೆಗಳು: 39
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ: ಆಫ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನ: ಸೆಪ್ಟಂಬರ್ 09
ವಯಸ್ಸಿನ ಮಿತಿ: ಕನಿಷ್ಠ 30ರಿಂದ 35
ಪೋಸ್ಟಿಂಗ್: ಬೆಂಗಳೂರು
ಶೈಕ್ಷಣಿಕ ಅರ್ಹತೆ
ಸಂಸ್ಥೆಯಲ್ಲಿ ಖಾಲಿ ಇರುವ ಚಾರ್ಟರ್ಡ್ ಅಕೌಂಟೆಂಟ್, ಲಾ ಆಫೀಸರ್, ಎಚ್‌ಆರ್ ಆಫೀಸರ್, ಟ್ರೈನಿಂಗ್ ಆಫೀಸರ್,
ಫ್ರೆಂಡ್ಲಿ ಡೆವಲಪ್ಮೆಂಟ್ ಆಫೀಸರ್, ಅಸಿಸ್ಟೆಂಟ್ ಹೀಗೆ ಒಟ್ಟು 39 ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಅರ್ಜಿ ಸಲ್ಲಿಸುವವರು ಸಿಎ, ಸಿಎಸ್, ICWA, ಕಾನೂನಿನಲ್ಲಿ ಲಾ, ಎಲ್ಎಲ್ಬಿ, ಎಚ್‌ಆರ್‌ನಲ್ಲಿ ಎಂಬಿಎ, ಎಂಎ, ಎಂಎಸ್‌ಡಬ್ಲು,ಪದವಿ, 12ನೇ ತರಗತಿ ಉತ್ತೀರ್ಣವಾಗಿರಬೇಕು.
ವಯಸ್ಸಿನ ಮಿತಿ, ಸಡಿಲಿಕೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 30ರಿಂದ 35 ಇರಬೇಕು. ಜಾತಿ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಮಾಸಿಕ ವೇತನ ಮಾಹಿತಿ
ಟ್ರೈನಿಂಗ್ ಆಫೀಸರ್ : ₹35,000-38,000
ಫ್ರೆಂಡ್ಲಿ ಡೆವಲಪ್ಮೆಂಟ್ ಆಫೀಸರ್ : ₹ 28,000-30,000
ಅಸಿಸ್ಟೆಂಟ್ : ₹ 20,000-22,000
ಚಾರ್ಟರ್ಡ್ ಅಕೌಂಟೆಂಟ್: ₹60,000-70,000
ಲಾ ಆಫೀಸರ್: ₹35,000-38,000
ಟೈಪಿಸ್ಟ್ ಮತ್ತು ಸ್ಟೆನೋ: ₹20,000-22,000
ಜೂನಿಯರ್ ಅಸಿಸ್ಟೆಂಟ್ : ₹13,000-15,000
ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಆಫೀಸರ್: ₹13,000-15,000
ಎಚ್ ಆಫೀಸರ್: ₹ 35,000-38,000
ಅರ್ಜಿ ಶುಲ್ಕ ಎಷ್ಟಿದೆ
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾಗಿ 500/- ರೂಪಾಯಿ ಅಜಿ ಶುಲ್ಕ ನಿಗದಿ ಮಾಡಲಾಗಿದೆ. ಈ ಪೈಕಿ ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ರೂ.300/ ನಿಗದಿ ಮಾಡಲಾಗಿದೆ. ಈ ಹಣವನ್ನು ನೀವು ಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಆಯ್ಕೆ ಆಗುವವರಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಳಾಸ
ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಸೂಕ್ತ ದಾಖಲಾತಿಗಳ ಸಮೇತ 'ಸೌಹಾರ್ದ ಸಹಕಾರಿ ಸೌಧ', #68, ಮೊದಲನೇ ಮಹಡಿ
18ನೇ ಅಡ್ಡ ರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055 ಇಲ್ಲಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications