KPSC; ಗ್ರೂಪ್ 'ಬಿ' ಮತ್ತು 'ಸಿ' ಲಿಖಿತ ಪರೀಕ್ಷೆ ದಿನಾಂಕ ಪ್ರಕಟ
ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಬಿ ಮತ್ತು ಗ್ರೂಪ್ ಸಿ ವೃಂದದ ಹುದ್ದೆಗಳ ಲಿಖಿತ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ.
ಬೆಂಗಳೂರು, ಫೆಬ್ರವರಿ 06; ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ವೃಂದದ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಪರೀಕ್ಷೆ ತಯಾರಿ ನಡೆಸಿದ್ದರು.
ಕೆಪಿಎಸ್‌ಸಿ ಗ್ರೂಪ್ 'ಬಿ' ಮತ್ತು 'ಸಿ' ವೃಂದದ ಅಧಿಸೂಚನೆ ಹೊರಡಿಸಿದ ಹುದ್ದೆಗಳಿಗೆ ಸ್ಪರ್ಧಾತ್ಮಕ ಮತ್ತು ಕನ್ನಡ ಭಾಷಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗ ಪ್ರಕಟಿಸಿದೆ. ಕೆಪಿಎಸ್‌ಸಿಯ ಕಾರ್ಯದರ್ಶಿಗಳು ಈ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ.
ಗ್ರೂಪ್ 'ಬಿ' ವೃಂದದ ಪರೀಕ್ಷೆಗಳು 11/4/2023 ರಿಂದ ಆರಂಭಗೊಂಡು 4/6/2023ರ ತನಕ ವಿವಿಧ ಹುದ್ದೆಗಳಿಗೆ ನಡೆಯಲಿದೆ. ಗ್ರೂಪ್ 'ಸಿ' ವೃಂದದ ಸ್ಪರ್ಧಾತ್ಮಕ ಮತ್ತು ಕನ್ನಡ ಭಾಷಾ ಪರೀಕ್ಷೆಗಳು 18/3/2023 ರಿಂದ ಆರಂಭಗೊಂಡು 30/4/2023ರ ತನಕ ನಡೆಯಲಿದೆ.

ಪರೀಕ್ಷಾ ದಿನಾಂಕ, ಅಧಿಸೂಚನೆ ಸಂಖ್ಯೆ, ಸಮಯ, ಹುದ್ದೆಯ ಪದನಾಮ, ವಿಷಯ/ ಪತ್ರಿಕೆ ಮಾದರಿಯಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಯಾವ ಇಲಾಖೆಯ ಹುದ್ದೆಗೆ ಅರ್ಜಿ ಹಾಕಿದ್ದಾರೆಯೋ ಆ ದಿನಾಂಕ ನೋಡಿಕೊಂಡು ಪರೀಕ್ಷೆ ಬರೆಯಬಹುದಾಗಿದೆ.
ಯಾವ-ಯಾವ ಹುದ್ದೆಗಳು; ಗ್ರೂಪ್ 'ಸಿ' ವೃಂದದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯ ಸಾಂಖ್ಯಿಕ ಅಧಿಕಾರಿ 5 (ಹೈ. ಕ.). ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು 6 (ಹೈ. ಕ.). ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ 55+3 (ಬ್ಯಾ. ಲಾ.) (ಉ, ಮೂ. ವೃ). ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು 20 (ಉ. ಮೂ. ವೃ) ಹುದ್ದೆಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರು 105 (ಉ. ಮೂ. ವೃ). ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ಮೆಕಾನಿಕಲ್) 166 (ಸಿವಿಲ್) 3 (ಮೆಕಾನಿಕಲ್ ಹೈ. ಕ.). ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ 13 (ಹೈ. ಕ.) ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ.

ಇನ್ನು ಗ್ರೂಪ್ 'ಬಿ' ವೃಂದದಲ್ಲಿ ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು 2, ಭಾಷಾಂತರ ನಿರ್ದೇಶನನಾಲಯದಲ್ಲಿ ಭಾಷಾಂತರಕಾರರು 8 ಹುದ್ದೆಗಳು. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ-ನಗರ ಯೋಜಕರು 18+05 (ಹೈ. ಕ.) ಹುದ್ದೆಗಳಿಗೆ ವೇಳಾಪಟ್ಟಿ ಪ್ರಕಟವಾಗಿದೆ.
ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು/ ಭಾಷಾಂತರ ನಿರ್ದೇಶನಾಲಯದಲ್ಲಿ ಭಾಷಾಂತರಕಾರರು/ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ-ನಗರ ಯೋಜಕರ ಹುದ್ದೆಗೆ ವೇಳಾಪಟ್ಟಿ ಪ್ರಕಟಗೊಂಡಿದೆ.
ಉಳಿದಂತೆ ಮುಖ್ಯ ವಿದ್ಯುತ್ ಪರಿವೀಕ್ಷಣಾಲಯ ಸಹಾಯಕ ವಿದ್ಯುತ್ ಪರಿವೀಕ್ಷಕರು 2 (ಹೈ. ಕ.), ಮುಖ್ಯ ವಿದ್ಯುತ್ ಪರಿವೀಕ್ಷಣಾಲಯ ಸಹಾಯಕ ವಿದ್ಯುತ್ ಪರಿವೀಕ್ಷಕರು 30 (ಉಳಿಕೆ ಮೂಲ ವೃಂದ) ಹುದ್ದೆಗಳಿಗೆ ಕನ್ನಡ ಮತ್ತು ಸ್ಮರ್ಧಾತ್ಮಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಕೆಪಿಎಸ್‌ಸಿಯ https://kpsc.kar.nic.in/ ವೆಬ್‌ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications