Government Job Alert: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ವಿವಿಧ ಹುದ್ದೆಗಳ ನೇಮಕಾತಿ
ಬೆಂಗಳೂರು, ನವೆಂಬರ್ 15: ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ ಪಡೆಯಬೇಕೆನ್ನುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಉತ್ತಮ ಅವಕಾಶ ಸಿಕ್ಕಿದೆ. ಹೌದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ತನ್ನಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಜಿಲ್ಲೆ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಭರ್ಜರಿ ಸುದ್ದಿಯಾಗಿದೆ.
ಆಸಕ್ತರ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳದಲ್ಲಿ ಖಾಲಿ ಇರುವ ನರ್ಸಿಂಗ್ ಅಧಿಕಾರಿ, ಫಾರ್ಮಸಿಸ್ಟ್ ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತರು ನವೆಂಬರ್ 26ರ ಒಳಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಮಾಸಿಕ ವೇತನ, ವಿದ್ಯಾರ್ಹತೆ ಇತರ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ
ಹುದ್ದೆಗಳ ಹೆಸರು: ನರ್ಸಿಂಗ್ ಅಧಿಕಾರಿ, ಫಾರ್ಮಸಿಸ್ಟ್
ಒಟ್ಟು ಹುದ್ದೆಗಳು: ಮೂರು
ಪೋಸ್ಟಿಂಗ್: ಕೊಪ್ಪಳ
ಅರ್ಜಿ ಸಲ್ಲಿಕೆ ಅಂತಿಮ ದಿನ: ನವೆಂಬರ್ 26
ಅರ್ಜಿ ಸಲ್ಲಿಕೆ : ಆನ್‌ಲೈನ್
ವಿದ್ಯಾರ್ಹತೆ ವಿವರ
ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ಮಂಡಳಿ ಹಾಗೂ ವಿದ್ಯಾವಿದ್ಯಾಲಯಗಳಲ್ಲಿ ಪದವಿ, ಎಂಬಿಬಿಎಸ್ ಪಡೆದಿರಬೇಕು. ದಾಖಲಾತಿ ಮತ್ತು ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವಯೋಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ತಿಳಿಸಿರುವಂತೆ ಗರಿಷ್ಠ 45 ವರ್ಷ ಒಳಗೆ ಇರಬೇಕು. ಕನಿಷ್ಠ 18 ವರ್ಷ ಎನ್ನಲಾಗಿದೆ. ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಜಿಲ್ಲಾ ಸಲಹೆಗಾರರ ಗುಣಮಟ್ಟದ ಭರವಸೆ ಘಟಕ ಒಂದು ಹುದ್ದೆ (ಮಾಸಿಕ ವೇತನ- 42,500 ರೂಪಾಯಿ), ಜಿಲ್ಲಾಸ್ಪತ್ರೆ ಗುಣಮಟ್ಟದ ವ್ಯವಸ್ಥಾಪಕರು ಒಂದು ಹುದ್ದೆ (ಮಾಸಿಕ ವೇತನ 35,000 ರೂಪಾಯಿ) ಹಾಗೂ ಆಡಳಿತ ಕಾರ್ಯಕ್ರಮ ವ್ಯವಸ್ಥಾಪಕ ಒಂದು ಹುದ್ದೆ (ಮಾಸಿಕ ವೇತನ 15,939 ರೂ.) ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಕೆ ಹೇಗೆ, ವಿಧಾನಗಳು
ಅಭ್ಯರ್ಥಿಗಳು ಮೊದಲು ಅಧಿಸೂಚನೆ ಓದಿಕೊಳ್ಳಬೇಕು. ಬಳಿಕ ಅಧಿಕೃತ ವೆಬ್‌ಸೈಟ್‌ಗೆ https://sevasindhuservices.karnataka.gov.in/error.do ಭೇಟಿ ನೀಡಬೇಕು. ಲಾಗಿನ್ ಆಗಿ. ನರ್ಸಿಂಗ್ ಆಫಿಸರ್, ಫಾರ್ಮಸಿಸ್ಟ್ ಹುದ್ದೆಗೆ ಕೇಳುವ ಎಲ್ಲ ಅಗತ್ಯ ವಿವರ ಭರ್ತಿ ಮಾಡಬೇಕು. ಅಗತ್ಯ ಪ್ರಮಾಣ ಪತ್ರ ಸ್ಕ್ಯಾನ್ ಮಾಡಿ ಪ್ರತಿಗಳನ್ನು ನಿಮ್ಮ ಇತ್ತೀಚಿನ ಫೋಟೋ ಸಮೇತ ಅಪ್ಲೋಡ್ ಮಾಡಬೇಕು. ಆಯಾ ಜಾತಿ ಅಭ್ಯರ್ಥಿಗಳಿಗೆ ತಮಗೆ ನಿಗದಿಪಡಿಸಿ ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ ಅದರ ಅಪ್ಲಿಕೇಷನ್ ಪ್ರತಿ ಹಾಗೂ ಶುಲ್ಕ ಪಾವತಿ ರಶೀದಿ, ದಾಖಲೆ ಡೌನ್‌ಲೋಡ್ ಮಾಡಿಕೊಳ್ಳಬೇಕು.












Click it and Unblock the Notifications