ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯಲ್ಲಿ ವಾಕ್ ಇನ್ ಸಂದರ್ಶನ
ಹೊಸಪೇಟೆ, ಆಗಸ್ಟ್ 13: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) 2021-22ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 23, 2021ರಂದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಸಂಸ್ಥೆ ಹೆಸರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)
ಒಟ್ಟು ಹುದ್ದೆಗಳು: ವಿವಿಧ
ಹೆಸರು: ಸರ್ವೇಯರ್, ಸಹಾಯಕ ಸರ್ವೇಯರ್
ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್ 23, 2021.
ವಿದ್ಯಾರ್ಹತೆ: ಅರ್ಜಿದಾರರು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಬಿ.ಇ ಹಾಗೂ ಬಿ.ಟೆಕ್ ಪದವಿ. ಸಿವಿಲ್ ಇಂಜಿನಿಯರಿಂಗ್, ಪದವಿ ನಂತರ 2 ವರ್ಷಗಳ ಅನುಭವ, ಅಥವಾ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಜೊತೆಗೆ 4 ವರ್ಷಗಳ ಅನುಭವ ಹೊಂದಿದ್ದರೆ ಆದ್ಯತೆ. ಇದಲ್ಲದೆ ಮಾನ್ಯತೆ ಪಡೆದ ತಾಂತ್ರಿಕೇತರ ವಿಶ್ವ ವಿದ್ಯಾಲಯದಿಂದ ಶೇ 60ರಷ್ಟು ಅಂಕಗಳೊಂದಿಗೆ ಪದವಿ ಜೊತೆಗೆ 7 ವರ್ಷಗಳ ಕಾರ್ಯ ಕ್ಷೇತ್ರಗಳ ಅನುಭವ ಹೊಂದಿದ್ದರೂ ಆದ್ಯತೆ ಸಿಗಲಿದೆ.

ಇದರ ಜೊತೆಗೆ ಗಣಿಗಾರಿಕೆ ಸರ್ವೇಯರ್ ಬಗ್ಗೆ ಜ್ಞಾನ, ಆಟೋ ಕ್ಯಾಡ್ ಬಗ್ಗೆ ತಿಳುವಳಿಕೆ, ಸ್ಥಳೀಯ ಭಾಷಾ ಜ್ಞಾನ ಇರುವವರಿಗೆ ಆದ್ಯತೆ.
ಸಂಬಳ ವಿವರ: 40,000 ರಿಂದ 50,000/-ರು ಪ್ರತಿ ತಿಂಗಳು.
ಸರ್ವೇಯರ್: 50,000ರು
ಸಹಾಯಕ ಸರ್ವೇಯರ್: 40, 000ರು
ವಯೋಮಿತಿ: ಗರಿಷ್ಠ ವಯಸ್ಸು 35 ವರ್ಷ(ಜೂನ್ 30, 2021ರಂತೆ)
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಎಸ್ ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ತನಕ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ವರ್ಷಗಳ ಗುತ್ತಿಗೆ ಆಧಾರಿತ ನೇಮಕಾತಿಗೆ ಸಹಿ ಹಾಕಬೇಕಾಗುತ್ತದೆ.
ಪ್ರಮುಖ ದಿನಾಂಕ:
ವಾಕ್ ಇನ್ ಸಂದರ್ಶನ ದಿನಾಂಕ: 23/08/2021.
ಸಮಯ: ಬೆಳಗ್ಗೆ 9.30 ರಿಂದ 10.30 ರ ವೇಳೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಸಂದರ್ಶನಕ್ಕೆ ಆಗಮಿಸುವುದಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಹಾಜರಾಗತಕ್ಕದ್ದು.
ಹೋಟೆಲ್ ಪಿಬಿಎಸ್ ಗ್ರ್ಯಾಂಡ್,
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಎದುರು
ಪಟೇಲ್ ನಗರ
ಹೊಸಪೇಟೆ- 583201
ಭರ್ತಿ ಮಾಡಿದ ಆರ್ಜಿಯ ಪ್ರತಿ, ಎರಡು ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತೆಯ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ವೇತನ ಪತ್ರ, ಆಧಾರ್ ಮುಂತಾದ ಗುರುತಿನ ಚೀಟಿ ತಂದಿರತಕ್ಕದ್ದು. ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ಸಿಗುವುದಿಲ್ಲ.
ಕೋವಿಡ್ 19 ಮಾರ್ಗಸೂಚಿ: ಅಂತರ್ ಜಿಲ್ಲಾ ಅಭ್ಯರ್ಥಿಗಳು ಸರ್ಕಾರ ವಿಧಿಸಿರುವ ಕೋವಿಡ್ 19 ಮಾರ್ಗಸೂಚಿ ಅನ್ವಯ ಪರೀಕ್ಷೆ/ ಪ್ರಮಾಣ ಪತ್ರ ಹೊಂದಿರಬೇಕು. ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆ ಎದುರಾಗಿದ್ದರೆ ವಾಕ್ ಇನ್ ಸಂದರ್ಶನ ತೆಗೆದುಕೊಳ್ಳುವಂತಿಲ್ಲ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮಾರ್ಗಸೂಚಿಯನ್ನು ಪಾಲಿಸತಕ್ಕದ್ದು.
ಕೆಐಒಸಿಎಲ್: ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಕುದುರೆಮುಖದಲ್ಲಿ ಅದಿರಿನ ಗಣಿಗಾರಿಕೆ ನಡೆಯುತ್ತಿತು. ಗಣಿಗಾರಿಕೆ ಅದಿರನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ 110 ಕಿಮೀ ಕೊಳವೆ ಮಾರ್ಗದ ಮೂಲಕ ಹೊಸ ಮಂಗಳೂರು ಪಕ್ಕದಲ್ಲಿರುವ ಪಣಂಬೂರು ಬಂದರಿಗೆ ಸಾಗಿಸಲಾಗುತ್ತಿತು. ಗಣಿಗಾರಿಕೆ ಗುತ್ತಿಗೆಯನ್ನು 25 ವರ್ಷಗಳ ಕಾಲ ಕೆಐಒಸಿಎಲ್‌ಗೆ ನೀಡಲಾಯಿತು ಮತ್ತು ಅದನ್ನು ಡಿಸೆಂಬರ್ 2001 ರೊಳಗೆ ಮುಚ್ಚಬೇಕಾಯಿತು. ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಕರ್ನಾಟಕ ಸರ್ಕಾರ 2017ರಲ್ಲಿ ಅನುಮತಿ ನೀಡಿದೆ. ಬಳ್ಳಾರಿಯ ದೇವಾದ್ರಿ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಸಿಕ್ಕಿದೆ. ಡಿಸೆಂಬರ್ 2005ರ ನಂತರ ಮತ್ತೊಮ್ಮೆ ಗಣಿಗಾರಿಕೆಯತ್ತ ಕೆಐಒಸಿಎಲ್ ಮುಖ ಮಾಡಿತ್ತು.












Click it and Unblock the Notifications