ಕಾರವಾರದಲ್ಲಿ ಕೆಲಸ ಖಾಲಿ ಇದೆ; ಡಿ.26ರಂದು ನೇರ ಸಂದರ್ಶನ
ಬೆಂಗಳೂರು, ಡಿಸೆಂಬರ್ 19 : ಕಾರವಾರ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 26/12/2019ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕಾರವಾರದ ಕಿಮ್ಸ್‌ನಲ್ಲಿ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಸೀನಿಯರ್ ರೆಸಿಡೆಂಟ್, ಜ್ಯೂನಿಯರ್ ರೆಸಿಡೆಂಟ್ ಸೇರಿದಂತೆ 116 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದವರು ಕಾರವಾರದಲ್ಲಿ ಕೆಲಸ ಮಾಡಬೇಕಿದೆ.
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಯೋಮಿತಿ, ವಿದ್ಯಾರ್ಹತೆಯ ವಿವರಕ್ಕಾಗಿ ನೇಮಕಾತಿ ಅಧಿಸೂಚನೆಯನ್ನು ವೀಕ್ಷಿಸಬಹುದಾಗಿದೆ.

ವಿವಿಧ ಹುದ್ದೆಗಳ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವವರು 500 ರೂ. ಡಿಡಿಯನ್ನು Director, Karwar Institute of Medical Sciences, Karwar ಹೆಸರಿನಲ್ಲಿ ಪಡೆದು ನೀಡಬೇಕು.
ಡಿಸೆಂಬರ್ 26ರಂದು ಎಲ್ಲಾ ಹುದ್ದೆಗಳಿಗೆ ನೇರ ಸಂದರ್ಶನ ಕಾರವಾರ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ಹೇಳಿದೆ.
ವಾಕ್ ಇನ್ ಇಂಟರ್ ವ್ಯೂನಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications