KEA Exams: ಡಿಸೆಂಬರ್, ಜನವರಿಯಲ್ಲಿ ವಿವಿಧ ನೇಮಕಾತಿಗಳ ಲಿಖಿತ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ
KEA Exams Schedule Release: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನವೆಂಬರ್‌ನಲ್ಲಿ ಹೊರಡಿಸಿದ್ದ ವಿವಿಧ ಇಲಾಖೆಗಳ ನೇಮಕಾತಿ ಅಧಿಸೂಚನೆಗಳಿಗೆ ಪರೀಕ್ಷೆ ನಡೆಸಲಿದೆ. ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆಯ ಹೊರಡಿಸಿತ್ತು. ಕೆಲವು ಪರೀಕ್ಷೆಗಳು ಡಿಸೆಂಬರ್ ಮತ್ತೆ ಕೆಲವು ಪರೀಕ್ಷೆಗಳು 2026ರ ಜನರಿಯಲ್ಲಿ ನಡೆಯಲಿವೆ.
2026 ಜನವರಿ 10 ಶನಿವಾರ ಮಧ್ಯಾಹ್ನ 03ಗಂಟೆಯಿಂದ 05 ಗಂಟೆವರೆಗೆ "ನಿರ್ದಿಷ್ಟ ಪತ್ರಿಕೆ-2' ನಡೆಯಲಿದೆ. ಇದು "ಕೆ.ಎಸ್.ಡಿ.ಎಲ್., ಕೃಷಿ ಮಾರಾಟ ಇಲಾಖೆ, ಬಿ.ಡಬ್ಲ್ಯೂಎಸ್.ಎಸ್.ಬಿ, ಕೃಷಿ ಮಾರಾಟ ಇಲಾಖೆ/ಸಂಸ್ಥೆಗಳಿಗೆ ಸಂಬಂಧಿಸಿದ ಕಿರಿಯ ಅಧಿಕಾರಿ (ಕ್ಯೂ&ಡಿ)ಕಿರಿಯ ಅಭಿಯಂತರರು (ಸಿವಿಲ್) (ಗ್ರೂಪ್ -ಸಿ), ಕಿರಿಯ ಅಭಿಯಂತರರು (ಎಲೆಕ್ನಿಕಲ್), ಕಿರಿಯ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್-ಸಿ)ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳಿಗೆ ಸಂಬಂಧಿಸಿದ್ದಾಗಿದೆ. ಅಭ್ಯರ್ಥಿಗಳು ದಿನಾಂಕ ಗಮನಿಸಬೇಕು.

2026 ಜನವರಿ 11 ಭಾನುವಾರದಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ "ಸಾಮಾನ್ಯ ಜ್ಞಾನ ಪತ್ರಿಕೆ-1' ಪರೀಕ್ಷೆ ನಡೆಯಲಿದೆ. ಬಿಡಿಎ, ತಾಂತ್ರಿಕ ಶಿಕ್ಷಣ ಇಲಾಖೆ, ಕೃಷಿ ಮಾರಾಟ ಇಲಾಖೆ, ಆರ್‌ಜಿಯುಎಚ್‌ಎಸ್, BWSSB, ಕೆಕೆಆರ್‌ಟಿಸಿ, ಕೆಎಸ್‌ಎಸ್ಐಡಿಸಿ, ಕೆಎಸ್‌ಡಿಎಲ್, ಶಾಲಾ ಶಿಕ್ಷಣ ಇಲಾಖೆಗಳಿಗೆ ಸಂಬಂಧಿಸಿದ "ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್ /ರೆವಿನ್ಯೂ ಇನ್ಸ್ ಪೆಕ್ಟರ್), ಪ್ರಥಮ ದರ್ಜೆ ಸಹಾಯಕರು) ಸಹಾಯಕ, ಸಹಾಯಕ ಗ್ರಂಥಪಾಲಕ, ಸಹಾಯಕ ಲೆಕ್ಕಿಗ, ಒರಿಯ ಸವಾಯಕರು ಹುದ್ದೆಗಳಿಗೆ ಸಂಬಂಧಿಸಿದ ಪರೀಕ್ಷೆ ಆಗಿದ್ದು ಅಭ್ಯರ್ಥಿಗಳು ಗಮನಿಸುವಂತೆ ಪ್ರಾಧಿಕಾರ ತಿಳಿಸಿದೆ.
ಅದೇ ದಿನ 2026 ಜನವರಿ 11ರ ಭಾನುವಾರ ಮಧ್ಯಾಹ್ನ 2.30ರಿಂದ 4.30ರಿಂದ ಮತ್ತೊಂದು ಪರೀಕ್ಷೆ "ಇಂಗ್ಲಿಷ್, ಕನ್ನಡ ಮತ್ತು ಕಂಪ್ಯೂಟರ್ ಜ್ಞಾನ ಪರೀಕ್ಷೆ -2' ಪರೀಕ್ಷೆ ನಡೆಯಲಿದೆ. ಬಿಡಿಎ-ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್/ರೆವಿನ್ಯೂ ಇನ್ಸ್‌ಪೆಕ್ಟರ್) ಹುದ್ದೆ, ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಕೃಷಿ ಮಾರಾಟ ಇಲಾಖೆ - ಪ್ರಥಮ ದರ್ಜೆ ಸಹಾಯಕರು, ಆರ್.ಜಿ.ಯು.ಹೆಚ್.ಎಸ್ ಮತ್ತು BWSSB- ಸಹಾಯಕ ಹುದ್ದೆ, ಆರ್‌ಜಿಯುಎಚವವೆಸ್ ಸಂಸ್ಥೆಯಲ್ಲಿನ - ಸಹಾಯಕ ಗ್ರಂಥಪಾಲಕ ಹುದ್ದೆ, ಕೆ.ಕೆ.ಆರ್.ಟಿ.ಸಿ- ಸಹಾಯಕ ಲೆಕ್ಕಿಗ ಹುದ್ದೆ, ಕೆ.ಎಸ್.ಐ.ಡಿ.ಸಿ- ಹಿರಿಯ ಸಹಾಯಕರು ಹಾಗೂ ಶಾಲಾ ಶಿಕ್ಷಣ ಇಲಾಖೆ - ಗ್ರಂಥಪಾಲಕ ಹುದ್ದೆಗಳಿಗೆ ನಡೆಯುವ ಪರೀಕ್ಷೆ ಇದಾಗಿದೆ.
2026 ಜನವರಿ 25 ರಂದು ಭಾನುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಸಾಮಾನ್ಯ ಜ್ಞಾನ ಪರೀಕ್ಷೆಯು ಈ ಮುಂದಿನ ಇಲಾಖೆ/ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ನಡೆಯಲಿದೆ. ಬಿಡಿಎ ಮತ್ತು ಕೃಷಿ ಮಾರಾಟ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕ, ಬಿಡಬ್ಲುಎಸ್‌ಎಸ್‌ಬಿ ಮತ್ತು ಕೆಎಸ್‌ಎಸ್ಐಡಿಸಿ ಒಳಗಿನ ಕಿರಿಯ ಸಹಾಯಕ ಹುದ್ದೆ,
ಎನ್.ಡಬ್ಲ್ಯೂ.ಆರ್.ಟಿ.ಸಿ- ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳು ಮತ್ತು ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) (ಹಿಂಬಾಕಿ), ಕೆ.ಕೆ.ಆರ್.ಟಿ.ಸಿಯಲ್ಲಿನ ನಿರ್ವಾಹಕ ಹುದ್ದೆ, ಕೃಷಿ ಮಾರಾಟ ಇಲಾಖೆಯಲ್ಲಿ ಮಾರಾಟ ಸಹಾಯಕ, ಬಿ.ಡಬ್ಲ್ಯೂ.ಎಸ್.ಎಸ್.ಬಿಯಲ್ಲಿನ ಮಾಪನ ಓದುಗ ಮತ್ತು ಎರಡನೇ ದರ್ಜೆ ಉಗ್ರಾಣ ಪಾಲಕ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕ ಕಡಿತವಿರುತ್ತದೆ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications