7 ವರ್ಷದ ಬಳಿಕ ಕೆಎಎಸ್ ನೇಮಕಾತಿ: ವಯೋಮಿತಿ ಸಡಿಲಿಕೆ

ಬೆಂಗಳೂರು, ಮಾರ್ಚ್ 04: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊನೆಷನರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. 4/3/2024 ರಿಂದ 5/5/2024ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿವಿಧ ಇಲಾಖೆಗಳ ಗ್ರೂಪ್-ಎ ನಲ್ಲಿ 159 ಮತ್ತು ಗ್ರೂಪ್-ಬಿನಲ್ಲಿ 225 ಸೇರಿ ಒಟ್ಟು 384 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಕೆಎಎಸ್ ಅಧಿಕಾರಿಗಳ ನೇಮಕಾತಿ ನಡೆಯದ ಕಾರಣ ಈ ಬಾರಿ ಅರ್ಜಿ ಸಲ್ಲಿಕೆ ಮಾಡುವವರಿಗೆ ಮೂರು ವರ್ಷದ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

KAS 384 Post Recruitment 3 Years Of Age Relaxation

1997ರಲ್ಲಿ ಕೆಎಎಸ್ ಅಧಿಕಾರಿಗಳ ನೇಮಕಾತಿ ನಡೆದಿತ್ತು. ಬಳಿಕ ಕೆಎಎಸ್ ಹುದ್ದೆಗಳ ನೇಮಕಾತಿ ವಿವಿಧ ಕಾರಣಗಳಿಂದ ಆಗಿರಲಿಲ್ಲ. ಆದ್ದರಿಂದ ಈ ಬಾರಿ 384 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ವಯೋಮಿತಿ ಸಡಿಲಿಕೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಅನುಮೋದನೆ ನೀಡಲಾಗಿದೆ.

ವಯೋಮಿತಿಯ ಮಾಹಿತಿ: ಗ್ರೂಪ್ ಎ ಮತ್ತು ಬಿ ಶ್ರೇಣಿಯ ಕೆಎಎಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದ್ದು, ಸೋಮವಾರದಿಂದ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ದಿನಾಂಕವನ್ನು 5/5/2024 ಎಂದು ನಿಗದಿ ಮಾಡಲಾಗಿದೆ.

ನೇಮಕಾತಿ ಅಧಿಸೂಚನೆ ಪ್ರಕಾರ ಸಾಮಾನ್ಯ ವರ್ಗಕ್ಕೆ 38, ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 41 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷದ ವಯೋಮಿತಿ ಎಂದು ಅಧಿಸೂಚನೆ ಹೇಳಿದೆ. ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ವಯೋಮತಿ ಹೆಚ್ಚಳ ಮಾಡಲಾಗಿದೆ.

384 ಹುದ್ದೆಗಳ ಪೈಕಿ ಗ್ರೂಪ್‌-'ಎ' ನಲ್ಲಿ ಸಹಾಯಕ ಆಯುಕ್ತರು 40, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು 41, ಸಹಾಯಕ ನಿರ್ದೇಶಕರು 2, ಕಾರ್ಯ ನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ 40, ಡಿವೈಎಸ್‌ಪಿ 9, ಸಹಾಯಕ ನಿರ್ದೇಶಕರು ಗ್ರೇಡ್-1 20, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು 7 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಗ್ರೂಪ್-'ಬಿ' ತಹಶೀಲ್ದಾರ್‌ (ಗ್ರೇಡ್-2) 51, ವಾಣಿಜ್ಯ ತೆರಿಗೆ ಅಧಿಕಾರಿ 59, ಕಾರ್ಮಿಕ ಅಧಿಕಾರಿ 4, ಸಹಾಯಕ ಅಧೀಕ್ಷಕರು 3, ಸಹಾಯಕ ಅಧೀಕ್ಷಕರು 3, ಸಹಕಾರ ಸಂಘಗಳ ಸಹಾಯಕ ನಿಬಂಧಕರು 12, ಸಹಾಯಕ ನಿರ್ದೇಶಕರು 9, ಅಬಕಾರಿ ಉಪ ಅಧೀಕ್ಷಕರು 10, ಉದ್ಯೋಗಾಧಿಕಾರಿ 3, ಸಹಾಯಕ ನಿರ್ದೇಶಕರು 4, ಮುಖ್ಯಾಧಿಕಾರಿ (ಗ್ರೇಡ್-1) 1, ಸಹಾಯಕ ಖಜಾನಾಧಿಕಾರಿ 46, ಸಹಾಯಕ ನಿರ್ದೇಶಕರು 9, ಸಹಾಯಕ ನಿರ್ದೇಶಕರು 2, ಶಾಖಾಧಿಕಾರಿ 5, ಸಹಾಯಕ ನಿರ್ದೇಶಕರು (ಗ್ರೇಡ್-2) 7 ಹುದ್ದೆಗಳನ್ನು ತುಂಬಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+