Karnataka Govt Jobs: ಕಂದಾಯ ಇಲಾಖೆಯಲ್ಲಿವೆ 500 ಖಾಲಿ ಹುದ್ದೆಗಳು, ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಅಕ್ಟೋಬರ್ 14: ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ ಬಯಸುತ್ತಿದ್ದ ಆಕಾಂಕ್ಷಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯ ಕಂದಾಯ ಇಲಾಖೆಯು ಪ್ರಸ್ತಕ 2025ನೇ ಸಾಲಿನಲ್ಲಿ ತನ್ನಲ್ಲಿ ಖಾಲಿ ಇರುವ ನೂರಾರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಗ್ರಾಮ ಲೆಕ್ಕಿಗ (Village Accountant) ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕದಲ್ಲಿ ಸರ್ಕಾರಿ ಹುದ್ದೆ ಸೇರಬಯಸಿದವರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು. ಕಂದಾಯ ಇಲಾಖೆಯಲ್ಲಿ 500 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ. ಕನಿಷ್ಠ ವಿದ್ಯಾರ್ಹತೆ ಮುಗಿಸಿದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ನೇಮಕಾತಿ ಹೆಚ್ಚಿನ ವಿವರ, ವಯೋಮಿತಿ, ಅರ್ಹತೆ, ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.

ಉದ್ಯೋಗ ನೇಮಕಾತಿ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಕಂದಾಯ ಇಲಾಖೆ
ಹುದ್ದೆಗಳ ವಿವರ: ಗ್ರಾಮ ಲೆಕ್ಕಿಗ (Village Accountant) ಹುದ್ದೆಗಳ
ಒಟ್ಟು ಹುದ್ದೆಗಳು: 500
ಪೋಸ್ಟಿಂಗ್: ಕರ್ನಾಟಕ
ಅರ್ಜಿ ಸಲ್ಲಿಕೆ ದಿನಾಂಕ: ಶೀಘ್ರವೇ ಪ್ರಕಟ
ಅರ್ಜಿ ಸಲ್ಲಿಕೆ ಕೊನೆ ದಿನ: ಶೀಘ್ರವೇ ಪ್ರಕಟ
ಅಭ್ಯರ್ಥಿಗಳ ಗರಿಷ್ಠ ವಯಸ್ಸು: 38
ವಿದ್ಯಾರ್ಹತೆ ಏನಿರಬೇಕು?
ಕಂದಾಯ ಇಲಾಖೆಯ ನೇಮಕಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣವಾಗಿರಬೇಕು. ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ಇಲಾಖೆ ತಿಳಿಸಿದೆ.
ವಯೋಮಿತಿ ವಿವರ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವಯಸ್ಸು ಮತ್ತು ಗರಿಷ್ಠ ವಯಸ್ಸು 38 ಇರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ಸಿಗುತ್ತದೆ. 2ಎ 2ಬಿ 3ಎ 3ಬಿ ವರ್ಗ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡ ಅಭ್ಯರ್ಥಿಗಳಿಗೆ 5 ವರ್ಷ ವಯೋ ಸಡಿಲಿಕೆ ಸಿಗಲಿದೆ ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಮಾಸಿಕ ವೇತನ
ಅರ್ಜಿ ಸಲ್ಲಿಸಿದ ಬಳಿಕದ ಅಭ್ಯರ್ಥಿಗಳಿಗೆ 200 ಅಂಕಗಳ ಲಿಖಿತ ಎರಡು ಪರೀಕ್ಷೆ ಇರುತ್ತದೆ. ಇದರೊಂದಿಗೆ ಒಂದು ಕಡ್ಡಾಯ ಕನ್ನಡ ಪತ್ರಿಕೆ ಸಹ ಇರುತ್ತದೆ. ಋಣಾತ್ಮಕ ಅಂಕಗಳು ಇರುತವೆ. ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆ ಆದವರಿಗೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನಗಳು ತಿಳಿಯಿರಿ
* ಅಭ್ಯರ್ಥಿಗಳು ಮೊದಲು ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ https://kandaya.karnataka.gov.in/en ಗೆ ಭೇಟಿ ನೀಡಬೇಕು.
* ಅಲ್ಲಿ ತೆರೆದುಕೊಳ್ಳುವ ಪರದೆಯಲ್ಲಿ ನಿಮಗೆ ಅಗತ್ಯವಾದ Karnataka Revenue Department ವಿಭಾಗ ಆಯ್ಕೆ ಮಾಡಿಕೊಳ್ಳಬೇಕು.
* ಅಲ್ಲಿ ಸಿಗುವ ಅಧಿಸೂಚನೆ ಪರಿಶೀಲಿಸಬೇಕು. ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.
* ನಂತರ ಆನ್ಲೈನ್ ಲಿಂಕ್ ಮೂಲಕ ಅರ್ಜಿ ನಮೂನೆ ಕ್ಲಿಕ್ ಮಾಡಿ.
* ಅಲ್ಲಿ ಕೇಳಲಾಗುವ ಎಲ್ಲ ಅಗತ್ಯ ವಿವರ ನಮೂದಿಸಿ
* ಶುಲ್ಕ ಪಾವತಿ ಮಾಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
* ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಒಂದು ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.












Click it and Unblock the Notifications