ಕರ್ನಾಟಕ ಪೊಲೀಸ್ ನೇಮಕಾತಿ; 4 ಸಾವಿರ ಹುದ್ದೆ ಭರ್ತಿಗೆ ಒಪ್ಪಿಗೆ

ಬೆಂಗಳೂರು, ಮಾರ್ಚ್ 03 : ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್‌ಐ ಮತ್ತು ಆರ್‌ಎಸ್‌ಐ ಹುದ್ದೆಗಳ ನೇರ ನೇಮಕಾತಿಗೆ ಒಪ್ಪಿಗೆ ನೀಡಿದೆ. 2020-21ನೇ ಸಾಲಿನಲ್ಲಿ 512 ಪಿಎಸ್‌ಐ ಹಾಗೂ 80 ಆರ್‌ಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

Police Sub Inspector (PSI) ಮತ್ತು Reserve Sub-Inspector of Police (RSI) ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ. ಕಮೀಷನರೇಟ್ ಮತ್ತು ಜಿಲ್ಲೆಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, 2020-21ನೇ ಸಾಲಿನ ನೇಮಕಾತಿಯನ್ನು ಆರಂಭಿಸಲು ಸೂಚನೆ ನೀಡಲಾಗಿದೆ.

ಕೆಎಸ್ಆರ್‌ಪಿ ಘಟಕದ 1000 ಆರ್‌ಪಿಸಿ ಹುದ್ದೆಗಳ ಜೊತೆ ಈ ಹಿಂದಿನ ಅಧಿಸೂಚನೆಯಲ್ಲಿ ಅಧಿಸೂಚಿಸಿ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಭರ್ತಿಯಾಗದೆ ಉಳಿದಂತಹ ಹುದ್ದೆಗಳನ್ನು ಸೇರ್ಪಡೆಗೊಳಿಸಬೇಕು ಎಂದು ಸೂಚನೆ ಕೊಡಲಾಗಿದೆ.

Karnataka Police Recruitment 4000 Posts

512 ಪಿಎಸ್‌ಐ, 80 ಆರ್‌ಎಸ್‌ಐ ಮತ್ತು 2000 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹಾಗೂ 1000 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಕೊಡಲಾಗಿದೆ.

ಕಮೀಷನರೇಟ್ ವ್ಯಾಪ್ತಿಯಲ್ಲಿ ಹಂಚಿಕೆಯಾದ ಹುದ್ದೆಗಳ ವಿವರ

* ಬೆಂಗಳೂರು ನಗರ : 74 ಪಿಎಸ್‌ಐ (ಸಿವಿಲ್) =, 1 ಆರ್‌ಎಸ್‌ಐ
* ಮೈಸೂರು ನಗರ : 3 ಆರ್‌ಎಸ್‌ಐ
* ಹುಬ್ಬಳ್ಳಿ-ಧಾರವಾಡ ನಗರ : 2 ಆರ್‌ಎಸ್‌ಐ
* ಬೆಳಗಾವಿ ನಗರ : 19 ಪಿಎಸ್‌ಐ (ಸಿವಿಲ್), 3 ಆರ್‌ಎಸ್‌ಐ

ವಲಯವಾರು ಹುದ್ದೆಗಳ ವರ್ಗೀಕರಣ

* ಕೇಂದ್ರ ವಲಯ, ಬೆಂಗಳೂರು : 92 ಪಿಎಸ್‌ಐ (ಸಿವಿಲ್), 2 ಆರ್‌ಎಸ್‌ಐ
* ಪೂರ್ವ ವಲಯ, ದಾವಣಗೆರೆ : 40 ಪಿಎಸ್‌ಐ (ಸಿವಿಲ್), 10 ಆರ್‌ಎಸ್‌ಐ
* ಪಶ್ಚಿಮ ವಲಯ, ಮಂಗಳೂರು : 39 ಪಿಎಸ್‌ಐ (ಸಿವಿಲ್), 2 ಆರ್‌ಎಸ್‌ಐ
* ಉತ್ತರ ವಲಯ, ಬೆಳಗಾವಿ :74 ಪಿಎಸ್‌ಐ (ಸಿವಿಲ್), 10 ಆರ್‌ಎಸ್‌ಐ
* ದಕ್ಷಿಣ ವಲಯ, ಮೈಸೂರು : 93 ಪಿಎಸ್‌ಐ (ಸಿವಿಲ್), 7 ಆರ್‌ಎಸ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+