ಕರ್ನಾಟಕ ಪೊಲೀಸ್ ನೇಮಕಾತಿ : 23 ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ

ಬೆಂಗಳೂರು, ಜೂನ್ 07 : ಕರ್ನಾಟಕ ಪೊಲೀಸ್ 23 ವಿವಿಧ ಶ್ರೇಣಿಯ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 24/6/2019 ಕೊನೆಯ ದಿನವಾಗಿದೆ.

ಪೊಲೀಸ್ ಇಲಾಖೆ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಎಲ್), ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್ (ಸಿಎಆರ್/ಡಿಎಆರ್) ಹಾಗೂ ಸಬ್ ಇನ್ಸ್‌ಪೆಕ್ಟರ್ (ಐಆರ್‌ಬಿ) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಈ ಕೆಳಕಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿವಿಧ ವೃಂದದ (ಪುರುಷ/ಮಹಿಳಾ) ಸೇವೆಯಲ್ಲಿರುವವರ ಹುದ್ದೆಗಳಿಗೆ ಅಧಿಸೂಚನೆ ಅನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು 7/6/2019 ರಿಂದ 24/6/2019ರ ಸಂಜೆ 6 ಗಂಟೆಯ ತನಕ ಸಲ್ಲಿಸಬಹುದು. ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿ ಮಾಡಲು 27/6/2019 ಕೊನೆಯ ದಿನವಾಗಿದೆ.....

ಹುದ್ದೆಗಳ ವಿವರ

ಹುದ್ದೆಗಳ ವಿವರ

ಕರ್ನಾಟಕ ಪೊಲೀಸ್ ಅರ್ಜಿ ಆಹ್ವಾನಿಸಿರುವ ಹುದ್ದೆಗಳ ವಿವರ ಕೆಳಗಿನಂತಿದೆ....

* ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಎಲ್) ಪುರುಷ/ಮಹಿಳೆ/ಸೇವೆಯಲ್ಲಿರುವವರು 12 ಹುದ್ದೆ
* ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿಎಆರ್/ಡಿಎಆರ್) (ಪುರುಷ) 4 ಹುದ್ದೆ
* ಸಬ್ ಇನ್ಸ್‌ಪೆಕ್ಟರ್ (ಐಆರ್‌ಬಿ) ಪುರುಷ/ ಸೇವೆಯಲ್ಲಿರುವವರು 7 ಹುದ್ದೆ

ವಿದ್ಯಾರ್ಹತೆ ವಿವರಗಳು

ವಿದ್ಯಾರ್ಹತೆ ವಿವರಗಳು

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಯುಜಿಸಿ ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವ ತತ್ಸಮಾನ ಪದವಿಯನ್ನು ಪಡೆದಿರಬೇಕು.

ವಯೋಮಿತಿ ವಿವರಗಳು

ವಯೋಮಿತಿ ವಿವರಗಳು

ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಕೆಳಕಂಡ ವಯಸ್ಸು ಮೀರಿರಬಾರದು.

* ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಎಲ್) 28 ವರ್ಷ, ಪ.ಜಾ/ಪ.ಪಂ/ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ

* ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿಎಆರ್/ಡಿಎಆರ್) 26 ವರ್ಷ, ಪ.ಜಾ/ಪ.ಪಂ/ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 28 ವರ್ಷ

* ಸಬ್ ಇನ್ಸ್‌ಪೆಕ್ಟರ್ (ಐಆರ್‌ಬಿ) 26 ವರ್ಷ, ಪ.ಜಾ/ಪ.ಪಂ/ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 28 ವರ್ಷ

* ಸೇವಾ ನಿರತರಿಗೆ 35 ವರ್ಷ, ಪ.ಜಾ/ಪ.ಪಂ/ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ

ಅರ್ಜಿ ಶುಲ್ಕಗಳು

ಅರ್ಜಿ ಶುಲ್ಕಗಳು

ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ, ಪ್ರವರ್ಗ 2(ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+