Govt Job alert: ಕರ್ನಾಟಕ ಗೃಹ ಇಲಾಖೆಯ 5987 ಹುದ್ದೆಗಳು ಭರ್ತಿ ಶೀಘ್ರ, ಅಧಿಸೂಚನೆ ಮಾಹಿತಿ
ಬೆಂಗಳೂರು, ಜುಲೈ 27: ಕರ್ನಾಟಕದಲ್ಲಿ ವಿಧಾನಮಂಡಲ ಅಧಿವೇಶನ ಕೊನೆಗೊಂಡಿದೆ. ಈ ವೇಳೆ ವಿವಿಧ ವಿಷಯಗಳು ಚರ್ಚೆ ಆಗಿದ್ದು, ಈ ಪೈಕಿ ಸರ್ಕಾರಿ ಹುದ್ದೆಗಳ ನೇಮಕಾತಿ ಯಾವುದೆಲ್ಲ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಆಯಿತು. ಈ ವೇಳೆ ಕರ್ನಾಟಕ ಗೃಹ ಇಲಾಖೆಯ ಒಂದಷ್ಟು ಹುದ್ದೆಗಳ ನೇಮಕಾತಿಗಾಗಿ ಅನುಮೋದನೆ ದೊರಕಿವೆ.
ಕರ್ನಾಟಕ ರಾಜ್ಯ ಗೃಹ ಇಲಾಖೆ ವ್ಯಾಪ್ತಿಯಲ್ಲಿ ಯಾವೇಲ್ಲ ಹುದ್ದೆಗಳು ಹಾಗೂ ಎಷ್ಟು ಹುದ್ದೆಗಳಿಗೆ ನೇಮಕಾತಿಗಾಗಿ ರಾಜ್ಯ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ ಎಂಬ ಮಾಹಿತಿ ನಿಮ್ಮ ಮುಂದಿದೆ. ಸದ್ಯ ಅನುಮೋದನೆ ಸಿಕ್ಕಿದ್ದು, ಅಧಿಕೃತ ಅಧಿಸೂಚನೆ ಹೊರ ಬೀಳಬೇಕಿದೆ. ಈ ಕುರಿತು ಅಪ್ಡೇಟ್ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಈಗಾಗಲೇ ಒಂದಷ್ಟು ಗೃಹ ಇಲಾಖೆ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅವುಗಳನ್ನು ಹೊರತುಪಡಿಸಿದರೆ, ಹೊಸದಾಗಿ ಪೊಲೀಸ್ ಇಲಾಖೆ 4,115 ಕಾನ್ಟೇಬಲ್, PSI ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಗೃಹ ಇಲಾಖೆ ಇತರ 1,872 ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ. ಒಟ್ಟು ಇಲಾಖೆ ವ್ಯಾಪ್ತಿಯಲ್ಲಿ 5,987 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಬೇಕಿದ್ದು, ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಪ್ರಕ್ರಿಯೆ ಆರಂಭವಾಗಲಿದೆ.
ಆರ್ಥಿಕ ಇಲಾಖೆ ಯಾವೆಲ್ಲ ನೇಮಕಾತಿಗೆ ಅನುಮೋದನೆ ನೀಡಿದೆ?
* ವಿಶೇಷ ತನಿಖಾಧಿಕಾರಿ - 15
* ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (2022-23)- 300 ಹುದ್ದೆಗಳು
* ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (2023-24)- 300 ಹುದ್ದೆಗಳು
* ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್)- 2000 ಹುದ್ದೆಗಳು
* ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (ಕೆಎಸ್‌ಆರ್‌ಪಿ)- 1500 ಹುದ್ದೆಗಳು
(ಈ ಮೇಲಿನ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ ಆಗಬೇಕಿದೆ)

ಅಗ್ನಿಶಾಮಕ- ತುರ್ತು ಸೇವೆಗಳ ಇಲಾಖೆ ಹುದ್ದೆಗಳು ಪಟ್ಟಿ
ಆರ್ಥಿಕ ಇಲಾಖೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಈ ಕೆಳಗಿನ ಹುದ್ದೆಗಳ ಭರ್ತಿಗೆ 2020ರ ಜೂನ್ ತಿಂಗಳ 10 ರಂದು ಒಪ್ಪಿಗೆ ನೀಡಿತ್ತು.
* ಅಗ್ನಿಶಾಮಕ ಚಾಲಕ: 227 ಹುದ್ದೆಗಳು ಭರ್ತಿ ಆಗಬೇಕಿದೆ
* ಅಗ್ನಿಶಾಮಕ: 1222 ಹುದ್ದೆಗಳು ಭರ್ತಿ ಆಗಬೇಕಿದೆ
* ಅಗ್ನಿಶಾಮಕ ಠಾಣಾಧಿಕಾರಿ: 36 ಹುದ್ದೆಗಳು.
* ಚಾಲಕ ತಂತ್ರ: 82 ಹುದ್ದೆಗಳು
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ
* ಪ್ರಥಮ ದರ್ಜೆ ಸಹಾಯಕರು: 7
* ದ್ವಿತೀಯ ದರ್ಜೆ ಸಹಾಯಕರು: 7
* ಶೀಘ್ರಲಿಪಿಗಾರರು: 43
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಹುದ್ದೆಗಳೆಷ್ಟು?
* ಸಹಾಯಕ ಅಧೀಕ್ಷಕರ ಹುದ್ದೆ - 03
* ವೀಕ್ಷಕರ ಹುದ್ದೆ - 197
* ದ್ವಿತೀಯ ದರ್ಜೆ ಬೋಧಕರ ಹುದ್ದೆ - 22
(ಈ ಹುದ್ದೆಗಳು ನೇರ ನೇಮಕಾತಿ ಮೂಲಕ ಭರ್ತಿ ಆಗಲಿವೆ)
ಈ ಮೇಲಿನವು ಸೇರಿದಂತೆ ಆರ್ಥಿಕ ಇಲಾಖೆಯು ಸಾವಿರಾರು ಹುದ್ದೆಗಳಿಗೆ ಅನುಮೋದನೆ ನೀಡಿದ್ದು, ಅಧಿಸೂಚನೆ ಆದಷ್ಟು ಶೀಘ್ರವೇ ಹೊರಡಲಿದೆ. ಈ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶೀಘ್ರವೇ ಸಿಹಿ ಸುದ್ದಿ ನೀಡಲಿದೆ.












Click it and Unblock the Notifications