Karnataka High Court Recruitment 2023: 13 ಖಾಲಿ ಹುದ್ದೆಗಳಿಗೆ ಫೆ.25ರೊಳಗೆ ಅರ್ಜಿ ಹಾಕಿ
ಕರ್ನಾಟಕ ರಾಜ್ಯ ಹೈ ಕೋರ್ಟ್ ನಲ್ಲಿ ಖಾಲಿ ಇರುವ 13 ಹುದ್ದೆಗಳ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನ. ಬೆಂಗಳೂರಿನಲ್ಲಿ ಕೆಲಸ ಮಾಡಲಿಚ್ಛಿಸುವವರು ಫೆ. 25 ರೊಳಗೆ ಅರ್ಜಿ ಸಲ್ಲಿಸುವ ವಿಧಾನ, ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 07: ಕರ್ನಾಟಕ ರಾಜ್ಯ ಹೈ ಕೋರ್ಟ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಫೆಬ್ರವರಿ 25 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಕರ್ನಾಟಕ ಉಚ್ಛ ನ್ಯಾಯಾಲಯ (ಹೈಕೋರ್ಟ್) ದಲ್ಲಿ ಒಟ್ಟು 13 ಕಾನೂನು ಕ್ಲರ್ಕ್ ಹಾಗೂ ಸಂಶೋಧನಾ ಸಹಾಯಕರು (ರಿಸರ್ಚ್ ಅಸಿಸ್ಟೆಂಟ್) ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿ ಪ್ರಕ್ರಿಯೆ ಆರಂಭಿಸಿರುವ ಹೈಕೋರ್ಟ್ ಅರ್ಹರಿಂದ ಅರ್ಜಿ ಕರೆದಿದೆ.
ರಾಜ್ಯ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲೇ ಉದ್ಯೋಗ ಮಾಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಸೇರಿದಂತೆ ಮುಂತಾದ ಅಗತ್ಯ ಮಾಹಿತಿ ತಿಳಿದುಕೊಳ್ಳಿ.

ಹುದ್ದೆಯ ಮಾಹಿತಿ
ಸಂಸ್ಥೆ - ಕರ್ನಾಟಕ ಹೈಕೋರ್ಟ್
ಎಷ್ಟು ಹುದ್ದೆ - ಒಟ್ಟು 13
ಹುದ್ದೆ ಹೆಸರು - ಲಾ ಕ್ಲರ್ಕ್ ಮತ್ತು ರಿಸರ್ಚ್ ಅಸಿಸ್ಟೆಂಟ್
ಉದ್ಯೋಗ ಸ್ಥಳ - ಬೆಂಗಳೂರು
ಶೈಕ್ಷಣಿಕ ಅರ್ಹತೆ
ರಾಜ್ಯ ಹೈಕೋರ್ಟ್ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಾನೂನು ಪದವಿ ಪಡೆದಿರಬೇಕು ಎಂದು ತಿಳಿಸಿದೆ.
ವಯಸ್ಸು ಎಷ್ಟಿರಬೇಕು?
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಇದೇ ವರ್ಷ 2023 ಫೆಬ್ರವರಿ 25ಕ್ಕೆ ಗರಿಷ್ಠ 30 ವರ್ಷ ದಾಟಿರಬಾರದು. ಇನ್ನೂ ಮೀಸಲಾತಿ ಅನುಸಾರವಾಗಿ ವಯಸ್ಸಿನ ಸಡಿಲಿಕೆ ಇರುತ್ತದೆ.

ವೇತನ- ಅರ್ಜಿ ಶುಲ್ಕದ ವಿವರ
ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 25 ಸಾವಿರ ರೂಪಾಯಿ ಇರಲಿದೆ. ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವುದೇ ರೀತಿ ಶುಲ್ಕ ಪಾವತಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಆಯ್ಕೆ ಹೇಗೆ?
ಶೈಕ್ಷಣಿಕ ದಾಖಲೆಗಳು, ಸಾಧನೆ ಜೊತೆಗೆ ಪ್ರಮಾಣೀಕೃತ ದಾಖಲೆಗಳನ್ನು ಪರಿಶೀಲಿಸಿ ನಂತರ ಅಭ್ಯರ್ಥಿಗಳ ನೇರ ಸಂದರ್ಶನ ಇರಲಿದೆ. ಇನ್ನೂ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಆದ್ದರಿಂದ ಕೂಡಲೇ ಆಸಕ್ತರು ಅಧಿಕೃತ ವೆಬ್‌ಸೈಟ್ https://recruitmenthck.kar.nic.in/hck/lra/home.php ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.












Click it and Unblock the Notifications