ಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು

ಬೆಂಗಳೂರು, ಸೆಪ್ಟೆಂಬರ್ 28; ಕರ್ನಾಟಕದ ವಿವಿಧ ಇಲಾಖೆಗಳಿಗೆ ಒಟ್ಟು ಮಂಜೂರಾಗಿರುವ ಹುದ್ದೆಗಳು ಎಷ್ಟು?. ಇಲಾಖೆಗಳಲ್ಲಿ ಮಂಜೂರಾಗಿರುವ ಭರ್ತಿಯಾಗಿರುವ ಮತ್ತು ಖಾಲಿ ಇರುವ ಹುದ್ದೆಗಳ ಕುರಿತು ಇಲಾಖಾವಾರು ಮಾಹಿತಿಯನ್ನು ಸರ್ಕಾರ ನೀಡಿದೆ.

ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ಟಿ. ನಾರಾಯಣಸ್ವಾಮಿ ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದರು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡುವ ಸಂಬಂಧ ಸರ್ಕಾರವು ಕಳೆದ 5 ವರ್ಷಗಳಲ್ಲಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸರ್ಕಾರವು ಅಧಿಸೂಚನೆ ಹೊರಡಿಸಿದೆ?.

ಕರ್ನಾಟಕ ಲೋಕಸೇವಾ ಆಯೋಗದ ವಿಳಂಬ ಧೋರಣೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?. ಬಂದಿದ್ದಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲು ಕೈಗೊಂಡಿರುವ ಕ್ರಮಗಳೇನು? ಎಂದು ಪ್ರಶ್ನಿಸಲಾಗಿತ್ತು.

ವಿವಿಧ ಇಲಾಖೆಗಳಿಗೆ ಮಂಜೂರಾಗಿ, ಖಾಲಿ ಇರುವ ಹುದ್ದೆಗಳ ಪೈಕಿ ಗ್ರೂಪ್-ಸಿ ಮತ್ತು ಡಿ ವೃಂದಗಳಲ್ಲಿ ಅಂದಾಜು 82,700 ಹುದ್ದೆಗಳನ್ನು (ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ) ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಕೆಪಿಎಸ್‌ಸಿ ಮೂಲಕ ನೇಮಕಾತಿ

ಕೆಪಿಎಸ್‌ಸಿ ಮೂಲಕ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗವು ಒದಗಿಸಿರುವ ಮಾಹಿತಿ ಅನ್ವಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡುವ ಸಂಬಂಧ ಕಳೆದ 5 ವರ್ಷಗಳಲ್ಲಿ ಒಟ್ಟು 20,747 ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ.

ಆಯೋಗದಲ್ಲಿ ಸಿಬ್ಬಂದಿಯ ತೀವ್ರ ಕೊರತೆಯಿದ್ದರೂ ಸಾರ್ವತ್ರಿಕ ರಜಾ ದಿನಗಳಿಂದೂ ಸಹ ಕಾರ್ಯ ನಿರ್ವಹಿಸಿ ಒಂದೇ ಸಮಯದಲ್ಲಿ ನಿರಂತರವಾಗಿ ಹಲವಾರು ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದ್ದು, ಅತಿ ಶೀಘ್ರವಾಗಿ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೇ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತದೆ. ಆಯೋಗ ಯಾವುದೇ ವಿಳಂಬ ಧೋರಣೆ ಅನುಸರಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಒಟ್ಟು ಮಂಜೂರಾಗಿರುವ ಹುದ್ದೆಗಳ ಸಂಖ್ಯೆ

ಒಟ್ಟು ಮಂಜೂರಾಗಿರುವ ಹುದ್ದೆಗಳ ಸಂಖ್ಯೆ

ಕರ್ನಾಟಕ ಸರ್ಕಾರ ನೀಡಿರುವ ಮಾಹಿತಿ ಅನ್ವಯ ಒಟ್ಟು ಮಂಜೂರಾಗಿರುವ ಹುದ್ದೆಗಳು 7,69,981. ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ 5,11,272 ಮತ್ತು ಖಾಲಿ ಹುದ್ದೆಗಳು 2,58,709.

ಮಂಜೂರಾಗಿ, ಖಾಲಿ ಇರುವ ಹುದ್ದೆಗಳ ಪೈಕಿ ಗ್ರೂಪ್-ಸಿ ಮತ್ತು ಡಿ ವೃಂದಗಳಲ್ಲಿ ಅಂದಾಜು 82,700 ಹುದ್ದೆಗಳನ್ನು (ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ) ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ.

ಸರ್ಕಾರ ನೀಡಿರುವ ಇಲಾಖಾವಾರು ಮಾಹಿತಿ

ಸರ್ಕಾರ ನೀಡಿರುವ ಇಲಾಖಾವಾರು ಮಾಹಿತಿ

ಕರ್ನಾಟಕ ಸರ್ಕಾರ 2022-23ನೇ ಸಾಲಿನ ಇಲಾಖಾವಾರು ಮಂಜೂರಾದ, ಖಾಲಿ ಹಾಗೂ ಭರ್ತಿಯಾದ ಹುದ್ದೆಗಳನ್ನು ನೀಡಿದೆ. ಕೃಷಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 10,324. ಭರ್ತಿಯಾದ ಹುದ್ದೆಗಳು 4008 ಮತ್ತು ಖಾಲಿ ಹುದ್ದೆಗಳು 6,316. ಇನ್ನು ಪಶುಸಂಗೋಪನೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 18,553. ಭರ್ತಿಯಾದ ಹುದ್ದೆಗಳು 8,581, ಖಾಲಿ ಹುದ್ದೆಗಳು 9,972 ಆಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಮಂಜೂರಾದ ಹುದ್ದೆಗಳು 15,287. ಭರ್ತಿಯಾದ ಹುದ್ದೆಗಳು 7224, ಖಾಲಿ ಹುದ್ದೆಗಳು 8063. ಸಹಕಾರ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 7,196. ಭರ್ತಿಯಾದ ಹುದ್ದೆಗಳು 2,458, ಖಾಲಿ ಹುದ್ದೆಗಳು 4,738. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮಂಜೂರಾದ ಹುದ್ದೆಗಳು 10,986. ಭರ್ತಿಯಾದ ಹುದ್ದೆಗಳು 5,248 ಮತ್ತು ಖಾಲಿ ಹುದ್ದೆಗಳು 5,738 ಆಗಿದೆ.

ಇಲಾಖಾವಾರು ಮಾಹಿತಿ ಹೀಗಿದೆ

ಇಲಾಖಾವಾರು ಮಾಹಿತಿ ಹೀಗಿದೆ

ಕರ್ನಾಟಕ ಸರ್ಕಾರದ ಮಾಹಿತಿ ಅನ್ವಯ ಇ-ಆಡಳಿತ ಇಲಾಖೆಯಲ್ಲಿ 77 ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು 2, ಖಾಲಿ ಹುದ್ದೆಗಳು 75. ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ 12 ಮಂಜೂರಾದ ಹುದ್ದೆಗಳು, 8 ಭರ್ತಿಯಾದ ಹುದ್ದೆಗಳು, 4 ಖಾಲಿ ಹುದ್ದೆಗಳು. ಇಂಧನ ಇಲಾಖೆಯಲ್ಲಿ 425 ಮಂಜೂರಾದ ಹುದ್ದೆಗಳು. ಭರ್ತಿಯಾದ ಹುದ್ದೆಗಳು 207, 245 ಖಾಲಿ ಹುದ್ದೆಗಳು. ಆರ್ಥಿಕ ಇಲಾಖೆಯಲ್ಲಿ 18,892 ಮಂಜೂರಾದ ಹುದ್ದೆಗಳು, 10,113ಭರ್ತಿಯಾದ ಹುದ್ದೆಗಳು ಮತ್ತು 8,779 ಖಾಲಿ ಹುದ್ದೆಗಳು. ಮೀನುಗಾರಿಕೆ ಇಲಾಖೆಯಲ್ಲಿ 1401 ಮಂಜೂರಾದ ಹುದ್ದೆಗಳು, 624 ಭರ್ತಿಯಾದ ಹುದ್ದೆಗಳು, 777 ಖಾಲಿ ಹುದ್ದೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+