Get Updates
Get notified of breaking news, exclusive insights, and must-see stories!

Job Fair: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಉದ್ಯೋಗ ಮೇಳ!

International Job Fair In Bengaluru: ರಾಜ್ಯದಲ್ಲಿ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡುತ್ತಲಿರುತ್ತವೆ. ಆದರೆ, ಇದೀಗ ಬೆಂಗಳೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ಧರಿಸಿದೆ. ಹಾಗಾದ್ರೆ ಯಾವಾಗ ಹಾಗೂ ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯರಿ.

ಮುಂದಿನ 2026 ಜನವರಿಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ಧರಿಸಿದೆ. ಭಾರತದ ಹೊರಗಿನ ಕಂಪನಿಗಳಲ್ಲಿ ಕೌಶಲ್ಯಪೂರ್ಣ ಕಾರ್ಮಿಕರ ನೇಮಕಾತಿಗೆ ಅನುಕೂಲ ಆಗುವಂತೆ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಭಾರತದ ಹೊರಗಿನ ವಿದೇಶಿ ಕಂಪನಿಗಳಲ್ಲಿ ಕೌಶಲ್ಯಪೂರ್ಣ ಕಾರ್ಮಿಕರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಾಯ ಆಗುವಂತೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

Karnataka Government to Host First-Ever International Job Fair in January 2026 at Bengaluru

ಅದರಲ್ಲೂ ವಿಶೇಷವಾಗಿ ಯುರೋಪಿಯನ್, ಗಲ್ಫ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ದಾದಿಯರು, ಆರೈಕೆದಾರರು (ಪ್ಯಾರಾಮೆಡಿಕಲ್ ಸಿಬ್ಬಂದಿ), ಪ್ಲಂಬರ್‌ಗಳು, ಬಡಗಿಗಳು, ಮೆಕ್ಯಾನಿಕ್‌ಗಳು ಮತ್ತು ಇತರ ನುರಿತ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಈ ಹುದ್ದೆಗಳ ನೇಮಕಾತಿಗೆ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಇದರಿಂದ ಖಾಲಿ ಇರುವ ಹಾಗೂ ಉದ್ಯೋಗ ಹುಡುಕಾಟದಲ್ಲಿರುವ ಈ ಕೊರ್ಸ್‌ಗಳನ್ನು ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಉತ್ತಮ ಅವಕಾಶ ಅಂತಲೇ ಹಳಬಹುದು.

ಈ ಬಗ್ಗೆ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅಬರು ಮಾತನಾಡಿದ್ದು, ಭಾರತವು ಪ್ರಬಲ ಮಾನವ ಸಂಪನ್ಮೂಲವನ್ನು ಹೊಂದಿದೆ. ಅನೇಕ ದೇಶಗಳಲ್ಲಿ ಕೌಶಲ್ಯಪೂರ್ಣ ಕಾರ್ಮಿಕರಿಗೆ ಹೆಚ್ಚು ಬೇಡಿಕೆ ಇದೆ. ನುರಿತ ಕಾರ್ಮಿಕರ ಹುಡುಕಾಟದಲ್ಲಿರುವ ವಿವಿಧ ವಿದೇಶಗಳಲ್ಲಿನ ಕಂಪನಿಗಳನ್ನು ತಲುಪುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಿದ್ದೇವೆ. ಜನವರಿ 2026ರಲ್ಲಿ ಬೆಂಗಳೂರಿನಲ್ಲಿ ನಾವು ಮೆಗಾ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದ್ದೇವೆ ಎಂದು ಹೇಳಿದರು ಅಂತಾ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಅಲ್ಲದೆ, ಇದೇ ವೇಳೆ ಮಾತು ಮುಂದುವರೆಸಿದ ಅವರು ಇಲಾಖೆಯು ಈಗ ಕಾನ್ಸುಲೇಟ್‌ಗಳನ್ನು ಸಂಪರ್ಕಿಸುತ್ತಿದೆ. ಕಂಪನಿಗಳು ಮತ್ತು ಏಜೆನ್ಸಿಗಳನ್ನು ಇಮೇಲ್ ಮೂಲಕ ಸಂಪರ್ಕಿಸುತ್ತಿದೆ ಮತ್ತು ಕೆಲವು ದೇಶಗಳಲ್ಲಿ ರೋಡ್‌ಶೋಗಳನ್ನು ನಡೆಸಲಾಗುತ್ತಿದೆ. ಜೊತೆಗೆ ಕೇರಳ ಮಾದರಿಯಿಂದ ಪ್ರೇರಣೆ ಪಡೆದುಕೊಂಡು ಕರ್ನಾಟಕದಲ್ಲಿ ತರಬೇತಿ ಪಡೆದ ದಾದಿಯರು ಭಾರತದ ಹೊರಗೆ ಉದ್ಯೋಗಗಳನ್ನು ಗಿಟ್ಟಿಕೊಳ್ಳಬಹುದಾಂತಹ ನರ್ಸಿಂಗ್ ಸಮಾವೇಶವನ್ನು ಆಯೋಜಿಸುತ್ತಿದ್ದೇವೆ ಅಂತಲೂ ಹೇಳಿದರು ಅಂತಾ ವರದಿಯಾಗಿದೆ.

ಕರ್ನಾಟಕವು ಡಿಪ್ಲೊಮಾ ಮತ್ತು ಅಲ್ಪಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನೀಡುವ ಸರ್ಕಾರಿ ಪರಿಕರ ಕೊಠಡಿ ಮತ್ತು ತರಬೇತಿ ಕೇಂದ್ರವನ್ನು ಸಹ ಹೊಂದಿದೆ. ಎರಡು ಜಿಟಿಟಿಸಿ ಕೇಂದ್ರಗಳಲ್ಲಿ ಜರ್ಮನ್ ಪ್ರಯೋಗಾಲಯಗಳನ್ನು ಪ್ರಾರಂಭ ಮಾಡಲು ನಮಗೆ ಅನುಮೋದನೆ ಸಿಕ್ಕಿದೆ. ಅಲ್ಲಿ ಜರ್ಮನ್ ಭಾಷೆಯನ್ನು ಕೂಡ ಕಲಿಸಲಾಗುತ್ತದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳು ನೇಮಕಾತಿಗೆ ಮೊದಲು ಒಂದು ವರ್ಷದ ಭಾಷಾ ತರಬೇತಿಯನ್ನು ಪಡೆಯುತ್ತಾರೆ. ಈ ತರಬೇತಿಯನ್ನು ಒದಗಿಸಲು, ಇಲಾಖೆಯು ಸೂಕ್ತ ಏಜೆನ್ಸಿಗಳಿಂದ ಟೆಂಡರ್‌ಗಳನ್ನು ಆಹ್ವಾನ ಮಾಡುತ್ತದೆ. ತರಬೇತಿಯು ಮೂಲಭೂತ ಭಾಷಾ ಕಲಿಕೆಗೆ ಸೀಮಿತ ಆಗಿಲ್ಲ. ಅವರು ರೋಗಿಗಳು ಮತ್ತು ವೃದ್ಧರೊಂದಿಗೆ ಸಂವಹನ ನಡೆಸುವುದರಿಂದ, ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಅವರಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಪರೀಕ್ಷೆಗಳನ್ನು ನಡೆಸಲಾಗುವುದು ಮತ್ತು ಭಾಷಾ ಪ್ರಾವೀಣ್ಯತೆಯ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು. ಒಟ್ಟಿನಲ್ಲಿ ಹೇಳುವುದಾದರೆ ಈ ಮಹತ್ವದ ನಿರ್ಧಾರದಿಂದ ಇಂತಹ ಕೋರ್ಸ್‌ಗಳನ್ನು ಮಾಡಿಕೊಂಡು ಉದ್ಯೋಗ ಹುಡುಕಾಟದಲ್ಲಿರುವವರಿಗೆ ತುಂಬಾ ಸಹಾಯಕ ಆಗಲಿದೆ ಅಂತಕೇ ಹೇಳಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+