ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್; 48 ಹುದ್ದೆಗೆ ಅರ್ಜಿ ಹಾಕಿ

ಬೆಂಗಳೂರು, ಮಾರ್ಚ್ 17 : ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 16/4/2020 ಕೊನೆಯ ದಿನವಾಗಿದೆ.

ಕರ್ನಾಟಕದಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.

ಲೆಕ್ಕಾಧಿಕಾರಿ 5, ಹಿರಿಯ ಲೆಕ್ಕಾಧಿಕಾರಿ 3, ಪ್ರಥಮ ದರ್ಜೆ ಸಹಾಯಕರು 7, ಕಿರಿಯ ಕ್ಷೇತ್ರಾಧಿಕಾರಿ 9, ಬೆರಳಚ್ಚುಗಾರ/ ಗಣಕಯಂತ್ರ ನಿರ್ವಾಹಕರು 7, ಸಹಾಯಕರು 4, ಜವಾನರು 13 ಸೇರಿದಂತೆ 43 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

Co Operative Agricultural Rural Development Bank Recruitment

ಆಸಕ್ತ ಅಭ್ಯರ್ಥಿಗಳು 16/3/2020 ರಿಂದ 16/4/2020ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 17/4/2020 ಕೊನೆಯ ದಿನವಾಗಿದೆ.

ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಕಾಂ/ಬಿಬಿಎಂ/ಬಿಬಿಎ/ಬಿಸಿಎ/ಪದವಿ ಪಡೆದಿರಬೇಕು. ಹಿರಿಯ ಲೆಕ್ಕಾಧಿಕಾರಿ ಮತ್ತು ಎಫ್‌ಡಿಎ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರ ಹುದ್ದೆಗೆ ದ್ವಿತೀಯ ಪಿಯುಸಿ, ಸಹಾಯಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ಜವಾನ ಹುದ್ದೆಗೆ 8ನೇ ತರಗತಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ 40 ವರ್ಷ ದಾಟಿರಬಾರದು. ಅರ್ಜಿ ಸಲ್ಲಿಸುವವರು 500 ರೂ. ಶುಲ್ಕ ಮತ್ತು 30 ರೂ. ಅಂಚೆ ಶುಲ್ಕವನ್ನು ಯಾವುದೇ ವಿದ್ಯುನ್ಮಾನ ಅಂಚೆ ಕಚೇರಿಯಲ್ಲಿ ಪಾವತಿ ಮಾಡಬಹುದು.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+