ಕರ್ನಾಟಕ ಬ್ಯಾಂಕ್ ನೇಮಕಾತಿ; ಮಂಗಳೂರಿನಲ್ಲಿ ಕೆಲಸ
ಬೆಂಗಳೂರು, ಜೂನ್ 12 : ಕರ್ನಾಟಕ ಬ್ಯಾಂಕ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 20/6/2020ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Recommended Video
ಗುತ್ತಿಗೆ ಆಧಾರದ ಮೇಲೆ ಮಂಗಳೂರಿನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 20 ರಿಂದ 50 ಸಾವಿರದ ತನಕ ವೇತನ ನೀಡಲಾಗುತ್ತದೆ.
ಸಿಸ್ಟಮ್ ಆರ್ಕಿಟೆಕ್ಟ್ 1, ಟೆಕ್ ಲೀಡ್ (ಎಐ/ಎಂಎಲ್/ಅನಲಿಟಿಕ್ಸ್) 1, ಪ್ರಾಜೆಕ್ಟ್ ಹೆಡ್ 1, ಮುಖ್ಯಸ್ಥ (ಫಿನ್‌ಟೆಕ್ partnership) 1, ಮುಖ್ಯಸ್ಥ (ಡಿಜಿಟಲ್ ಮಾರ್ಕೆಟಿಂಗ್) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

1/6/2020ಕ್ಕೆ ಸರಿಯಾಗಿ ಗರಿಷ್ಠ 35 ವರ್ಷ ವಯೋಮಿತಿ ಮೀರದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ ಬಿಇ/ಎಂಸಿಎ/ಎಂಬಿಎ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ಇದರ ಜೊತೆಗೆ 10 ರಿಂದ 12 ವರ್ಷಗಳ ಕಾರ್ಯಾನುಭವ ಸಂಬಂಧಿಸಿದ ವಿಭಾಗದಲ್ಲಿ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಮತ್ತು ಇತ್ತೀಚಿನ ಕಲರ್ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ನಿಗದಿತ ದಿನಾಂಕದೊಳಗೆ ಇ-ಮೇಲ್ ಕಳಿಸಬೇಕು. ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಇ-ಮೇಲ್ ವಿಳಾಸ : [email protected]












Click it and Unblock the Notifications