ಕರ್ನಾಟಕ ಬ್ಯಾಂಕ್‌ನಲ್ಲಿ ಹಲವು ಹುದ್ದೆಗಳು ಖಾಲಿಯಿವೆ; ಫೆ. 15ರೊಳಗೆ ಅರ್ಜಿ ಸಲ್ಲಿಸಿ
ಕರ್ನಾಟಕ ಬ್ಯಾಂಕ್ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಫೆಬ್ರವರಿ 15 ರ ಒಳಗೆ ಅರ್ಜಿ ಸಲ್ಲಿಸಬಹುದು.
ಬೆಂಗಳೂರು, ಫೆಬ್ರವರಿ. 12: ಹೊಸ ಬ್ಯಾಂಕ್ ಉದ್ಯೋಗಗಳಿಗಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಶುಭ ಸುದ್ದಿಯಿದ್ದು, ಕರ್ನಾಟಕ ಬ್ಯಾಂಕ್ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸನ್ನು ಹೊಂದಿರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.
ಕರ್ನಾಟಕ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್ @karnatakabank.com ನಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಡೇಟಾ ಸೈಂಟಿಸ್ಟ್, ಡೇಟಾ ಇಂಜಿನಿಯರ್, ಸ್ಪೆಷಲ್ ಐಟಿ ಆಫೀಸರ್, ಸ್ಟ್ರಾಟಜಿ ಮತ್ತು ಪೋರ್ಟ್ಫೋಲಿಯೋ ಅನಲಿಸ್ಟ್, ಡೇಟಾ ಸಿಸ್ಟಮ್ ಆರ್ಕಿಟೆಕ್ಟ್, ಸಿಸ್ಟಮ್ ಆರ್ಕಿಟೆಕ್ಟ್, ಪ್ರಾಜೆಕ್ಟ್ ಹೆಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಲಾಗಿದೆ.
ಬ್ಯಾಂಕ್ ನೇಮಕಾತಿ ಅಧಿಸೂಚನೆಯನ್ನು 9ನೇ ಫೆಬ್ರವರಿ 2023 ರಂದು ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಅರ್ಹರಾಗಿರುವ ಅಭ್ಯರ್ಥಿಗಳು ತಮ್ಮ ವಿವರವಾದ ರೆಸ್ಯೂಮ್ ಅನ್ನು ಮೇಲ್ ಮೂಲಕ [email protected] ಗೆ 15ನೇ ಫೆಬ್ರವರಿ 2023ರ ಒಳಗೆ ಕಳುಹಿಸಬೇಕು.

ರೆಸ್ಯೂಮ್‌ನಲ್ಲಿ ಹುಟ್ಟಿದ ದಿನಾಂಕ (ವಯಸ್ಸಿನೊಂದಿಗೆ), ಅಭ್ಯರ್ಥಿಯ ಫೋಟೋ, ವೈವಾಹಿಕ ಸ್ಥಿತಿ, ವಿದ್ಯಾರ್ಹತೆ/ಗಳು, ಉದ್ಯೋಗದ ಅನುಭವ , ಭಾಗವಹಿಸಿದ ತರಬೇತಿ ಕಾರ್ಯಕ್ರಮಗಳು, ವೈಯಕ್ತಿಕ ಕೌಶಲ್ಯಗಳು, ಪ್ರಸ್ತುತ ಮತ್ತು ನಿರೀಕ್ಷಿತ ವೇತನ ಇತ್ಯಾದಿಗಳಂತಹ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರಬೇಕು. ಜೊತೆಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸಿದ ಹುದ್ದೆಗೆ ಸಂಬಂಧಿಸಿದ ಕೆಲಸದ ಅನುಭವದ ಪ್ರಮಾಣಪತ್ರಗಳನ್ನು ರೆಸ್ಯೂಮ್ ಜೊತೆಗೆ ಸಲ್ಲಿಸಬೇಕು.
*ಹುದ್ದೆಗಳು*
ಡೇಟಾ ಸೈಂಟಿಸ್ಟ್, ಡೇಟಾ ಇಂಜಿನಿಯರ್, ಸ್ಪೆಷಲ್ ಐಟಿ ಆಫೀಸರ್, ಸ್ಟ್ರಾಟಜಿ ಮತ್ತು ಪೋರ್ಟ್ಫೋಲಿಯೋ ಅನಲಿಸ್ಟ್, ಡೇಟಾ ಸಿಸ್ಟಮ್ ಆರ್ಕಿಟೆಕ್ಟ್, ಸಿಸ್ಟಮ್ ಆರ್ಕಿಟೆಕ್ಟ್, ಪ್ರಾಜೆಕ್ಟ್ ಹೆಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ
*ಶೈಕ್ಷಣಿಕ ಅರ್ಹತೆ*
ಬೇರೆ ಬೇರೆ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ವಿಭಿನ್ನವಾಗಿರುತ್ತದೆ. ಅದರಂತೆ B.Sc, B.Tech/BE, MA, ME/M.Tech, MBA/PGDM, MCA ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
*ವಯಸ್ಸಿನ ಮಿತಿ*
ಕರ್ಣಾಟಕ ಬ್ಯಾಂಕ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿಯು ಪೋಸ್ಟ್‌ಗೆ ಅನುಗುಣವಾಗಿ ಬದಲಾಗುತ್ತದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು.
*ಆಯ್ಕೆ ಪ್ರಕ್ರಿಯೆ*
ಅರ್ಹತಾ ಮಾನದಂಡಗಳ ಆಧಾರದ ಮೇಲೆ ಕರ್ಣಾಟಕ ಬ್ಯಾಂಕ್ ನೇಮಕಾತಿ 2023 ಕ್ಕೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಆಕಾಂಕ್ಷಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದ ಸ್ಥಳವು ಬೆಂಗಳೂರು ಅಥವಾ ಬ್ಯಾಂಕ್ ನಿರ್ಧರಿಸಿದ ಯಾವುದೇ ಸ್ಥಳವಾಗಿರಬಹುದು. ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ*
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು [email protected] ಗೆ ಭೇಟಿ ನೀಡಬೇಕು.












Click it and Unblock the Notifications