10,00,000 ಉದ್ಯೋಗ ಭರವಸೆ ನೀಡಿದ್ದ ರಾಹುಲ್ ಗಾಂಧಿ ವಿದೇಶದಲ್ಲಿ ಮಸ್ತಿ: ಬಿಜೆಪಿ
ಬೆಂಗಳೂರು, ಡಿಸೆಂಬರ್ 02: ಕರ್ನಾಟಕದಲ್ಲಿ ಇತ್ತೀಚೆಗೆ ಕರೆದ ಇಲಾಖೆಗಳ ನೇಮಕಾತಿ ಆಹ್ವಾನ ಹೊರತುಪಡಿಸಿದರೆ ಕೆಲವು ವರ್ಷಗಳಿಂದ ಸುಸೂತ್ರವಾಗಿ ಸರ್ಕಾರಿ ನೇಮಕಾತಿಗಳನ್ನು ನಡೆಸಲಾಗಿತ್ತು. ಖಾಲಿ ಇರುವ ಲಕ್ಷಾಂತರ ಹುದ್ದೆಗಳ ನೇಮಕಾತಿ ನಡೆಸಬೇಕು. ನಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕೆಂದು ಆಗ್ರಹಿಸಿ ನಿರುದ್ಯೋಗಿಗಳು ಎರಡನೇ ಬಾರಿ ಬೀದಿಗೆ ಇಳಿದಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಕೆಲಸವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಭರವಸೆ ನೀಡಿದ ಸರ್ಕಾರ, ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ಜರಿದಿದೆ.
ಉದ್ಯೋಗಕ್ಕಾಗಿ ಕರ್ನಾಟಕದ ಯುವಜನತೆ ಎರಡನೇ ಬಾರಿ ಬೀದಿಗಿಳಿದಿದ್ದಾರೆ ಎಂದು ಕರ್ನಾಟಕ ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದೆ. "ಕರ್ನಾಟಕದ 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಾಂಗ್ರೆಸ್ ನೀಡಲಿದೆ' ಎಂಬ ರಾಹುಲ್ ಗಾಂಧಿ ಅವರು ಚುನಾವಣಾ ಪೂರ್ವ ನೀಡಿದ್ದ ಭರವಸೆಯ ವಿಡಿಯೋವನ್ನು ಪೋಸ್ಟ್ ಮಾಡಿ ಟಾಂಗ್ ನೀಡಲಾಗಿದೆ.

ಅಂದು ಅಧಿಕಾರಕ್ಕಾಗಿ 2.5 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಯುವಕರಿಗೆ ಸುಳ್ಳು ಭರವಸೆ ಕೊಟ್ಟು ಓಡಿಹೋದ ಸಂಸದ ರಾಹುಲ್ ಗಾಂಧಿ ಅವರುವಿದೇಶಿ ಪ್ರವಾಸದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಬಿಜೆಪಿ ಗಂಭೀರವಾದ ಆರೋಪ ಮಾಡಿದೆ.
ಇತ್ತ ರಾಜ್ಯದ ಕುರ್ಚಿ ಕಾಳಗದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬ್ರೇಕ್‌ಫಾಸ್ಟ್ ರಾಜಕಾರಣ ಮಾಡುವುದು ನಾಟಿಕೋಳಿ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ. ಕಾಂಗ್ರೆಸ್ ಗೆ ಅಧಿಕಾರದ ಚಿಂತೆ ಯುವಕರಿಗೆ ಒಂದು ಹೊತ್ತು ಊಟಕ್ಕಾಗಿ ಉದ್ಯೋಗ ಅವಕಾಶದ ಚಿಂತೆ... ಎಂದು ಸರ್ಕಾರದ ಆಡಳಿತವನ್ನು, ನಿದ್ಯೋಗಿಗಳ ಬಗ್ಗೆ ಇರುವ ಕಾಂಗ್ರೆಸ್ ನಾಯಕರ ತಾತ್ಸಾರವನ್ನು ಬಿಜೆಪಿ ಖಂಡಿಸಿದೆ.
ಉದ್ಯೋಗಕ್ಕಾಗಿ ಕರ್ನಾಟಕದ ಯುವಜನತೆ ಎರಡನೇ ಬಾರಿ ಬೀದಿಗಿಳಿದಿದ್ದಾರೆ.
— BJP Karnataka (@BJP4Karnataka) December 2, 2025
ಅಧಿಕಾರಕ್ಕಾಗಿ 2.5 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಯುವಕರಿಗೆ ಸುಳ್ಳು ಭರವಸೆ ಕೊಟ್ಟು ಓಡಿಹೋದ @RahulGandhi ಯವರು ವಿದೇಶಿ ಪ್ರವಾಸದಲ್ಲಿ ಮಜಾ ಮಾಡುತ್ತಿದ್ದಾರೆ
ಇತ್ತ ರಾಜ್ಯದ ಕುರ್ಚಿ ಕಾಳಗದಲ್ಲಿರುವ ಸಿಎಂ @siddaramaiah… pic.twitter.com/uHl2i3k5uy
ನಿರುದ್ಯೋಗಿಗಳು ಸರ್ಕಾರಿ ನೇಮಕಾತಿ ಆಗದ್ದನ್ನು ಖಂಡಿಸಿ, ನೇಮಕಾತಿಗೆ ಆಗ್ರಹಿಸಿ ಧಾರವಾಡ ಚಲೋಗೆ ಕರೆ ನೀಡಿದ್ದರು. ರಾಜ್ಯದ ವಿವಿಧ ಮೂಲಗಳ ಜನರು ಬಂದು ಬೆಂಬಲಿಸುವಂತೆ ಕೋರಲಾಗಿತ್ತು. ಆದರೆ ಪ್ರತಿಭಟನೆ ನಡೆಯುವಾಗ ಧರಣಿನಿರತರನ್ನು ಬಂಧಿಸುವ ಮೂಲಕ ಸರ್ಕಾರ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕಲು ಮುಂದಾಗಿದೆ. ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಬಳಸಿಕೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದರು.












Click it and Unblock the Notifications