ಕಲ್ಯಾಣ ಕರ್ನಾಟಕ; ಅಗ್ನಿಪಥ್ ಸೇನಾ ನೇಮಕಾತಿಗೆ ನೋಂದಣಿ ಆರಂಭ

ಕೊಪ್ಪಳ, ಮಾರ್ಚ್ 04: ಕೇಂದ್ರ ಸರ್ಕಾರ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಆಕರ್ಷಕ ನೇಮಕಾತಿ ಯೋಜನೆಯನ್ನು ಜಾರಿಗೊಳಿಸಿದೆ. ಅಗ್ನಿಪಥ್ ಹೆಸರಿನ ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ಸ್ ಎಂದು ಕರೆಯಲಾಗುತ್ತದೆ.

ಅಗ್ನಿಪಥ್ ಯೋಜನೆಯಡಿ ಕರ್ನಾಟಕದ ಬೆಳಗಾವಿಯ ಸೇನಾ ನೇಮಕಾತಿ ಕಛೇರಿಯಿಂದ ಆನ್‌ಲೈನ್ ಮೂಲಕ ಅಭ್ಯರ್ಥಿಗಳ ನೋಂದಣಿ ಆರಂಭವಾಗಿದೆ. ಇದಕ್ಕಾಗಿ ಭಾರತೀಯ ಸೇನಾ ವೆಬ್‌ಸೈಟ್ Joinindianarmy.nic.in ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು.

Kalyana Karnataka Agniveer Recruitment Registration Apply Till March 22

ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರ ನೇಮಕಾತಿ ವಲಯದ ಬೆಳಗಾವಿಯ ಸೇನಾ ನೇಮಕಾತಿ ಅಧಿಕಾರಿಗಳ ಮೂಲಕ ಅಗ್ನಿಪಥ್ ಸೇನಾ ನೇಮಕಾತಿಗೆ ಆನ್‌ಲೈನ್ ನೋಂದಣಿ ಮಾರ್ಚ್ 22ರ ತನ ನಡೆಸಲಾಗುತ್ತಿದೆ.

ವಿದ್ಯಾರ್ಹತೆ ವಿವರ: ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮೆನ್ (10 ನೇ ತರಗತಿ ಉತ್ತಿರ್ಣ ಹಾಗೂ 8ನೇ ತರಗತಿ ಉತ್ತೀರ್ಣ ಪ್ರತ್ಯೇಕ ಶ್ರೇಣಿ).

ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್, ಸ್ಟೋರ್ ಕೀಪರ್ ಟೆಕ್ನಿಕಲ್ ವರ್ಗಗಳಲ್ಲಿಯೂ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ವಯೋಮಿತಿ, ವಿದ್ಯಾರ್ಹತೆ, ಇತರೆ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ನು ಗಮನಿಸಬಹುದು.

ಅಗ್ನಿವೀರ್‌ಗಳಿಗೆ ಮೂರು ಸೇವೆಗಳಲ್ಲಿ ಅನ್ವಯವಾಗುವಂತೆ ಅಪಾಯ ಮತ್ತು ಕಷ್ಟದ ಭತ್ಯೆಗಳೊಂದಿಗೆ ಆಕರ್ಷಕ ಕಸ್ಟಮೈಸ್ ಮಾಡಿದ ಮಾಸಿಕ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಈ ಯೋಜನೆ ಸಶಸ್ತ್ರ ಪಡೆಗಳಲ್ಲಿ ಯುವ ಮತ್ತು ಅನುಭವಿ ಸಿಬ್ಬಂದಿಗಳ ನಡುವೆ ಉತ್ತಮ ಸಮತೋಲನವನ್ನು ಖಾತ್ರಿಪಡಿಸುವ ಮೂಲಕ ಹೆಚ್ಚು ಯುವ ಮತ್ತು ತಾಂತ್ರಿಕವಾಗಿ ನೈಪುಣ್ಯತೆ ಹೊಂದಿದ ಅಭ್ಯರ್ಥಿಗಳ ಗುರುತಿಸುವಿಕೆಗೆ ಸಹಕಾರಿ.

4 ವರ್ಷಗಳ ನಿಶ್ಚಿತ ಅವಧಿಯು ಪೂರ್ಣಗೊಂಡ ನಂತರ, ಅಗ್ನಿವೀರ್‌ಗಳಿಗೆ ಒಂದು ಬಾರಿ 'ಸೇವಾನಿಧಿ' ಪ್ಯಾಕೇಜ್ ಅನ್ನು ಪಾವತಿಸಲಾಗುತ್ತದೆ. ಅದು ಅವರ ಕೊಡುಗೆಯನ್ನು ಒಳಗೊಂಡಿರುತ್ತದೆ ಮತ್ತು ಅದರ ಮೇಲಿನ ಸಂಚಿತ ಬಡ್ಡಿ ಮತ್ತು ಅವರ ಕೊಡುಗೆಯ ಸಂಚಿತ ಮೊತ್ತಕ್ಕೆ ಸಮಾನವಾದ ಸರ್ಕಾರದಿಂದ ಹೊಂದಾಣಿಕೆಯ ಕೊಡುಗೆಯನ್ನು ಒಳಗೊಂಡಿರುತ್ತದೆ.

'ಸೇವಾ ನಿಧಿ' ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ. ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಯಾವುದೇ ಅರ್ಹತೆ ಇರುವುದಿಲ್ಲ. ಅಗ್ನಿವೀರ್‌ಗಳಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅವರ ನಿಶ್ಚಿತ ಅವಧಿಗೆ 48 ಲಕ್ಷ ರೂ.ಗಳ ಕೊಡುಗೆ ರಹಿತ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+