ಕೊಪ್ಪಳ, ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ. ಅರ್ಜಿ ಸಲ್ಲಿಸಿ
ಬೆಂಗಳೂರು, ಫೆಬ್ರವರಿ 29; ಕೊಪ್ಪಳ ಮತ್ತು ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಶಿವಮೊಗ್ಗದಲ್ಲಿ ಅಪರ ಸರ್ಕಾರಿ ವಕೀಲರ ನೇಮಾಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಭದ್ರಾವತಿ ತಾಲೂಕಿನ ಹಿರಿಯ ಶ್ರೇಣಿ ನಾಯಾಲಯಕ್ಕೆ ಸರ್ಕಾರಿ ವಕೀಲರ ನೇಮಕ ಮಾಡಲು 7 ವರ್ಷಗಳ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ ಅರ್ಹ ನ್ಯಾಯವಾದಿಗಳಿಂದ ಅರ್ಜಿ ಕರೆಯಲಾಗಿದೆ.

ಆಸಕ್ತರು ತಮ್ಮ ವೈಯುಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ಧಪಡಿಸಿ ಮಾರ್ಚ್ 11ರೊಳಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನ್ಯಾಯಾಂಗ ಶಾಖೆಯ ದೂರವಾಣಿ ಸಂಖ್ಯೆ 08182-221100/ 221010ಗಳನ್ನು ಸಂಪರ್ಕಿಸುವುದು.
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ: ಕೊಪ್ಪಳ ತಾಲ್ಲೂಕಿನ ದದೇಗಲ್‌ನ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಒಂದು ತಾತ್ಕಾಲಿಕ ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಈ ಹುದ್ದೆಗೆ ಪ್ರಥಮ ದರ್ಜೆಯಲ್ಲಿ ಬಿಇ ಅಥವಾ ಎಂ.ಟೆಕ್ ಇನ್ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಹೊಂದಿದ ಆಸಕ್ತ ಆಕಾಂಕ್ಷಿಗಳು ಮಾರ್ಚ್ 4ರೊಳಗೆ ಕೊಪ್ಪಳ ಜಿಟಿಟಿಸಿ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್, ದದೇಗಲ್ ಕಾರ್ಯಾಲಯ ಅಥವಾ ವಿಭಾಗದ ಮುಖ್ಯಸ್ಥರಾದ ಮೌನೇಶ್ ಅವರನ್ನು ಮೊಬೈಲ್ ಸಂಖ್ಯೆ 7507094445 ಮೂಲಕ ಸಂಪರ್ಕಿಸಬಹುದು.
ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಿ: ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು ಮೇ 2ರಿಂದ ಆರಂಭವಾಗಲಿದೆ. ತೋಟಗಾರಿಕೆ ತರಬೇತಿ ಕೇಂದ್ರ, ಸೋಮನಹಳ್ಳಿ ಕಾವಲ್, ಹಾಸನ ಜಿಲ್ಲೆಯಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಈ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಏಪ್ರಿಲ್ 1ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಬೆಳಗ್ಗೆ 10 ರಿಂದ ಸಂಜೆ 5.30 ರೊಳಗೆ ಸಂಪರ್ಕಿಸಬಹುದಾಗಿದೆ. ಇಲ್ಲವೇ ವೆಬ್‌ಸೈಟ್‌ಗೆ ಭೇಟಿ ನೀಡಿ. https://horticulturedir.karnataka.gov.in
ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಛಾಪಾಕಾಗದ, ತಂದೆ/ ತಾಯಿ/ ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್‍ಟಿಸಿ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ ತಾಯಿಯವರ ಒಪ್ಪಿಗೆ ಪತ್ರ) ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿಗೆ ಖುದ್ದು ಸಲ್ಲಿಸತಕ್ಕದ್ದು.












Click it and Unblock the Notifications