ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ ಖಾಲಿ ಇದೆ
ಶಿವಮೊಗ್ಗ, ಅಕ್ಟೋಬರ್ 08; ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡುತ್ತಾರೆ. ಈಗ ನಿಲ್ದಾಣಕ್ಕೆ ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಾಂತ್ರಿಕ ಸಿಬ್ಬಂದಿ (ಗುತ್ತಿಗೆ ಆಧಾರದ ಮೇಲೆ) ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಬೆಂಗಳೂರಿನ ಕೆಎಸ್‌ಐಐಡಿಸಿಯಲ್ಲಿ 13/10/2023ರಂದು ಬೆಳಗ್ಗೆ 9 ಗಂಟೆಯಿಂದ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಏಕೀಕೃತ ವೇತನದ ಮೇಲೆ 1 ವರ್ಷದ ಅವಧಿಗೆ ಗುತ್ತಿಗೆಯ ಮೇಲೆ ವಿವಿಧ ಸಿಬ್ಬಂದಿಯನ್ನು ನೇಮಿಸಲು ಪ್ರಸ್ತಾಪಿಸಲಾಗಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಗುತ್ತಿಗೆಯ ಅವಧಿಯನ್ನು ಅವಶ್ಯಕತೆಗೆ ಅನುಗುಣವಾಗಿ ಇನ್ನೊಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ವಿದ್ಯಾರ್ಹತೆ/ ಅಂಕಪಟ್ಟಿ ಮತ್ತು ಅನುಭವದ ವಿವರಗಳೊಂದಿಗೆ ಹಾಜರಾಗಬಹುದು. ಕೆಎಸ್‌ಐಐಡಿಸಿ ಮಾನದಂಡಗಳ ಅನುಸಾರ ಇತರೆ ಭತ್ಯೆಗಳು, ಟಿಎ, ಡಿಎಗಳು ಅನ್ವಯಿಸುತ್ತವೆ.
ಆಯ್ದ ಸಿಬ್ಬಂದಿಯನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿಯೋಜನೆ ಮಾಡಲಾಗುತ್ತದೆ. ಯಾವುದೇ ಸ್ಪಷ್ಟನೆಗಾಗಿ ಮೊಬೈಲ್ ಸಂಖ್ಯೆ 9845833566 ಅನ್ನು ಸಂಪರ್ಕಿಸುವಂತೆ ಕರೆ ನೀಡಲಾಗಿದೆ.
ಹುದ್ದೆಗಳ ವಿವರ; ವಿಮಾನ ನಿಲ್ದಾಣದ ನಿರ್ದೇಶಕರು (1 ಹುದ್ದೆ). ವೇತನ 1,25,000 ರೂ.ಗಳು. ಕನಿಷ್ಠ ವಯೋಮಿತಿ 36 ವರ್ಷಗಳು. ಅಭ್ಯರ್ಥಿಗಳು ಬಿಜಿನೆಸ್, ಏವಿಯೇಷನ್ ಆಡ್ಮಿನಿಸ್ಟೇಷನ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು. ಕಾರ್ಯನಿರ್ವಾಹಕ, ವೃತ್ತಿಪರ ಮಟ್ಟದ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ 7 ವರ್ಷಗಳ ಅನುಭವ ಇರಬೇಕು.
ಅಭ್ಯರ್ಥಿಯು ಅರ್ಹ ಚಾಲನಾ ದಾಖಲಾತಿಗಳೊಂದಿಗೆ ರಾಜ್ಯ ಚಾಲಕರ ಪರವಾನಗಿಯನ್ನು ಹೊಂದಿರಬೇಕು. ಪೈಲಟ್ ಪರವಾನಗಿಗೆ ಸಹ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಈ ವಿಷಯಲ್ಲಿ ಪರಿಣತಿಯನ್ನು ಹೊಂದಿರಬೇಕು
* ಡಿಜಿಸಿಎ ಅನುಸಾರ ಫ್ಲೈಟ್ ಸೇಫ್ಟಿ ಡಾಕ್ಯುಮೆಂಟೇಶನ್ ಸಿಸ್ಟಮ್ ಅನ್ನು ಅನುಷ್ಠಾನಗೊಳಿಸುವುದು ಮತ್ತು ನಿರ್ವಹಿಸುವುದು
* ಟರ್ಮಿನಲ್ ಸಿಸ್ಟಮ್ಸ್ ಮತ್ತು ಲ್ಯಾಂಡ್ ಸೈಡ್ ಸೌಲಭ್ಯಗಳಲ್ಲಿ ಜ್ಞಾನ
* ಗ್ರೌಂಡ್ ಟ್ರಾನ್ಸ್ ಪೊರ್ಟೇಷನ್ ಟರ್ಮಿನಲ್ ಮತ್ತು ಏರ್‌ಸೈಡ್ ಕಾರ್ಯಾಚರಣೆಗಳ ಏಕೀಕರಣ
* ಏರೋಸ್ಪೇಸ್ ಡೊಮಿನಿಯನ್‌ನಲ್ಲಿ ಸಿಸ್ಟಮ್ಸ್ ಸುರಕ್ಷತೆ ಅಗತ್ಯತೆಗಳ ಅಭಿವೃದ್ಧಿ ಮತ್ತು ವಿಮರ್ಶೆ
* ಏರ್ ಟ್ರಾಫಿಕ್ ನಿಯಂತ್ರಣ ಕಾರ್ಯವಿಧಾನದ ಕಾರ್ಯಾಚರಣೆಗಳು
* ಏರ್ ಕ್ರಾಫ್ಟ್ ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಯ ಕೈಪಿಡಿಗಳು, ಡಿಜಿಸಿಎ ಅನುಮೋದನೆಯನ್ನು ಪಡೆದ ನಂತರ ಪರಿಷ್ಕರಣೆ ತಿದ್ದುಪಡಿಗಳ ಸಂಯೋಜನೆ.
ಭದ್ರತಾ ಮುಖ್ಯಸ್ಥ (ಒಂದು ಹುದ್ದೆ). ವೇತನ 75,000 ರೂ.ಗಳು. ಕನಿಷ್ಠ ವಯೋಮಿತಿ 36 ವರ್ಷಗಳು. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಂತರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ವಾಯುಯಾನ ಭದ್ರತಾ ನಿಯಮಗಳ ಜ್ಞಾನ ಹೊಂದಿರಬೇಕು.
ವಿಮಾನ ನಿಲ್ದಾಣದ ವಾಯುಯಾನ ಭದ್ರತಾ ಕಾರ್ಯಾಚರಣೆಗಳಲ್ಲಿ ಸಾಕಷ್ಟು ಅನುಭವ. ಪೊಲೀಸ್ ಭದ್ರತೆ, ಗುಪ್ತಚರ, ತನಿಖಾ ಸಂಸ್ಥೆಗಳು ಮತ್ತು ಸೈಬರ್ ಭದ್ರತೆಯಂತಹ ಇತರ ಭದ್ರತೆ ಸಂಬಂಧಿತ ಜಾರಿ ಕ್ಷೇತ್ರದಲ್ಲಿ ಅನುಭವ. ಭದ್ರತಾ ವ್ಯವಸ್ಥೆಗಳ ಜ್ಞಾನ ಮತ್ತು ಪ್ರವೇಶ ನಿಯಂತ್ರಣ, ಗ್ರೌಂಡ್ ಮತ್ತು ವಿಮಾನದ ಭದ್ರತೆ, ಕಂಪ್ಯೂಟರ್ ಸಾಕ್ಷರತೆ, ವಿಮಾನ ನಿಲ್ದಾಣದಿಂದ ಭದ್ರತಾ ಅಧಿಕಾರಿಯಾಗಿ 5 ವರ್ಷಗಳ ಅನುಭವ ಹೊಂದಿರಬೇಕು.












Click it and Unblock the Notifications