ಶಿವಮೊಗ್ಗ, ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ, ವಿವರಗಳು
ಶಿವಮೊಗ್ಗ, ಜೂನ್ 23: ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಹುದ್ದೆ, ಕೊನೆಯ ದಿನಾಂಕ ಮುಂತಾದ ವಿವರಗಳು ಇಲ್ಲಿವೆ.
ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಜೂನ್ 24ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.

ಪ್ರಾಣಿ ಆಹಾರ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಔಷಧ ಹಾಗೂ ವಿಷಶಾಸ್ತ್ರ ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-200872 ಹಾಗೂ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in ಅನ್ನು ಸಂಪರ್ಕಿಸಬಹುದು.
ನೇರ ಸಂದರ್ಶನ ಜೂನ್ 24ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸಂದರ್ಶನ ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇಲ್ಲಿ ನಡೆಯಲಿದೆ. ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‍ಇಟಿ) ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ. 56,700 ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000 ವೇತನ ನೀಡಲಾಗುತ್ತದೆ.
ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ: 2024-25ನೇ ಸಾಲಿಗೆ ಬಳ್ಳಾರಿ ತಾಲ್ಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೊಳಗಲ್ಲು ಮತ್ತು ಬಿಐಟಿಎಂ ಹತ್ತಿರದ ಅಲ್ಲಿಪುರ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಮಾಹಿತಿ ನೀಡಿದ್ದಾರೆ. ಕನ್ನಡ, ಇಂಗ್ಲೀಷ್, ಉರ್ದು, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಬಿ.ಎ, ಬಿ.ಇಡಿ, ಬಿ.ಎಸ್.ಸಿ, ಬಿ..ಇ.ಡಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಜೂನ್ 26ರ ಒಳಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೊಳಗಲ್ಲು ಮತ್ತು ಬಿಐಟಿಎಂ ಹತ್ತಿರದ ಅಲ್ಲಿಪುರ ಶಾಲೆಗಳ ಪ್ರಾಂಶುಪಾಲರನ್ನು 7353346069 ಅಥವಾ ನಗರದ ಜೋಳದರಾಶಿ ರಂಗಮಂದಿರ ಬಳಿಯ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಚೇರಿಯನ್ನು ದೂರವಾಣಿ ಸಂಖ್ಯೆ 08392200125 ಮೂಲಕ ಸಂಪರ್ಕಿಸಬಹುದು.












Click it and Unblock the Notifications