ಜೂನ್ 12ರಂದು ಬಿಡದಿಯಲ್ಲಿ ಉದ್ಯೋಗ ಮೇಳ
ರಾಮನಗರ, ಜೂನ್ 10: ಜಿಲ್ಲೆಯ ಬಿಡದಿ ಕೈಗಾರಿಕಾ ವಲಯದಲ್ಲಿರುವ ಪ್ರತಿಷ್ಠಿತ ಕಂಪನಿಗಳು ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜೂ.12 ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಬಿಡದಿ ಪಟ್ಟಣದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು, ಆಸಕ್ತರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಜೊತೆಗ ಹಾಜರಾಗಬಹುದು.
ಸಿಡಿಸಿ, ಎನ್ಐಟಿ ಫೌಂಡೇಷನ್ ಕೊಕೊ ಕೋಲಾ ಕಂಪನಿ ಸಹಯೋಗದೊಂದಿಗೆ ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಟ್ಟಣದ ನೆಲ್ಲಿಗುಡ್ಡ ಕೆರೆ ರಸ್ತೆಯ, ಆಕ್ಸಿಸ್ ಬ್ಯಾಂಕ್ ಮುಂಭಾಗದ, ಎಸ್.ವಿ.ಬಿ ಆರ್ಕೀಡ್‌ನ ಎರಡನೇ ಮಹಡಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಟಿತ ಕಂಪನಿಗಳಾದ ಮುತ್ತೂಟ್ ಫೈನಾಸ್ಸ್, ಹೆಚ್. ಡಿ. ಎಫ್. ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್. ಡಿ. ಬಿ ಫೈನಾನ್ಸ್, ಲೀವ್ ಪೂರ್, ಅಲಿಸ್ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ವಿದ್ಯಾರ್ಹತೆ; ಉದ್ಯೋಗ ಮೇಳದಲ್ಲಿ ಭಾಗವಹಿಸಲು ಬಯಸುವವರು ಪಿಯುಸಿ, ಐಟಿಐ, ಬಿಇ, ಡಿಪ್ಲೊಮಾ, ಬಿಎ, ಬಿಬಿಎಂ, ಮತ್ತು ಬಿಕಾಂ ಸೇರಿದಂತೆ ಯಾವುದೇ ಪದವಿ ಪಡೆದಿರಬೇಕು. ಉದ್ಯೋಗಕ್ಕಾಗಿ ಮೇಳದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ದಾಖಲಾತಿಗಳು; ಬಿಡದಿಯಲ್ಲಿ ನಡೆಯುವ ಈ ಉದ್ಯೋಗ ಮೇಳಕ್ಕೆ ಬರುವವರು ರೆಸ್ಯೂಮ್, ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಮೂಲ ಮತ್ತು ನಕಲು ಪ್ರತಿ, 2 ಪಾಸ್‌ಪೋರ್ಟ್ ಅಳತೆಯ ಫೋಟೋ ( ಐದು ಸೆಟ್) ತರಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಉದ್ಯೋಗ ಮೇಳದ ಹೆಚ್ಚಿನ ಮಾಹಿತಿಗಾಗಿ 6366633748, 6361777597 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಉದ್ಯೋಗ ಮೇಳದ ಆಯೋಜಕರು ಆಸಕ್ತ ಉದ್ಯೋಗಾಂಕ್ಷಿಗಳಲ್ಲಿ ಮನವಿ ಮಾಡಿದ್ದಾರೆ.
ನೇರ ನೇಮಕಾತಿ; ಬೆಂಗಳೂರಿನ ಚಾಮರಾಜಪೇಟೆ ಬಿ. ಕೆ. ಮರಿಯಪ್ಪ ಧರ್ಮಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನವಾಗಿದೆ. ಸಂಸ್ಥೆಯಲ್ಲಿ ಒಟ್ಟು10 ಹುದ್ದೆಗಳಿವೆ. ಕಂಪ್ಯೂಟರ್ ಜ್ಞಾನವುಳ್ಳ ಮ್ಯಾನೇಜರ್ (1), ಆಫೀಸ್ ಅಸಿಸ್ಟೆಂಟ್ (1), ಅಡುಗೆ ಭಟ್ಟ (1), ಸಹಾಯಕ ಅಡುಗೆ ಭಟ್ಟ (1), ಪುರುಷ ಕೇರ್ ಟೇಕರ್ (1), ಮಹಿಳಾ ಕೇರ್ ಟೇಕರ್ (1), ಚಾಲಕರು (1), ಸೆಕ್ಯೂರಿಟಿ ಗಾರ್ಡ್ (2) ಮಹಿಳಾ ವಾರ್ಡರ್ (1) ಹುದ್ದೆಗಳಿವೆ.
ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ತೆಗೆದುಕೊಂಡು, ಬಿ.ಕೆ ಮರಿಯಪ್ಪ ಧರ್ಮಸಂಸ್ಥೆ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ -560018 . ಈ ವಿಳಾಸಕ್ಕೆ ಸಲ್ಲಿಸಬೇಕಾಗಿದೆ.











Click it and Unblock the Notifications