ಮೈಸೂರಿನಲ್ಲಿ ಸೆ.19ರಂದು ಉದ್ಯೋಗ ಮೇಳ

ಬೆಂಗಳೂರು, ಸೆಪ್ಟೆಂಬರ್ 08 : ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸೆಪ್ಟೆಂಬರ್ 19ರಂದು ಮೈಸೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದೆ. ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮೈಸೂರು ನಗರದ ಎನ್.ಆರ್.ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿ ಆವರಣದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಹಾಗೂ ನೇರ ಸಂದರ್ಶನ ನಡೆಯಲಿದೆ.

ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವ-ವಿಳಾಸ ವುಳ್ಳ ಸ್ವಂತ-ಪರಿಚಯ ಪತ್ರ (Bio-Data) ದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಿದೆ. ಪ್ರವೇಶ ಉಚಿತವಾಗಿದೆ.

Job fair and walk in interview in Mysuru on Sep 19

ಯುಟಿಎಲ್ ಟೆಕ್ನಾಲಜಿ, ನಂ.19/6 ಅಶೋಕಪುರಂ ಸ್ಕೂಲ್ ರಸ್ತೆ, ಇಂಡಸ್ಟ್ರೀಯಲ್ ಸಬ್‍ಆರ್ಬ ಯಶಂವಂತಪುರಂ, ಬೆಂಗಳೂರು-22 ಇವರಿಂದ ರಿಲೇನ್ಸ್ ರಿಟೇಲ್ (ಲಿ). ಕಂಪನಿಯಲ್ಲಿ 800 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ : ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಪ್ಲೊಮಾ, ಬಿಎ, ಬಿಕಾಂ, ಬಿಬಿಎ, ಎಂಎ, ಎಂಕಾಂ, ಎಂಬಿಎ, ಎಂಎಫ್‍ಎ ವಿದ್ಯಾರ್ಹತೆ ಹೊಂದಿರುವವರು ಪಾಲ್ಗೊಳ್ಳಬಹುದಾಗಿದೆ. ವೇತನ 8,900 ರಿಂದ 14,000 ರೂ.ಗಳು.

ಮುತ್ತೋಟ್ ಪೀನ್ ಕಾರ್ಪ ಕಂಪನಿಯಲ್ಲಿ 200 ಹುದ್ದೆಗಳಿವೆ. ಬಿಎ, ಬಿಕಾಂ, ಬಿಬಿಎ, ಎಂಎ, ಎಂಕಾಂ, ಎಂಬಿಎ, ಎಂಎಫ್‍ಎ ಆದವರು ಪಾಲ್ಗೊಳ್ಳಬಹುದಾಗಿದೆ. ವೇತನ 13,800 ರೂ.ಗಳು.

ಐಸಿಟಿಎಸ್‍ಎಂಎಸ್ ಕಂಪನಿಯಲ್ಲಿ 300 ಹುದ್ದೆಗಳಿವೆ ಐಟಿಐ, ಡಿಪ್ಲೊಮಾ (ಇಸಿಇ, ಇಇಇ) ಈ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರು. ವೇತನ 14,000 ರೂ.ಗಳು.

ಹೆಚ್ಚಿನ ಮಾಹಿತಿಗಾಗಿ ಡಿ.ಎಂ.ರಾಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ಅವರನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+