ಇಸ್ರೋದಲ್ಲಿ ಕ್ಲರ್ಕ್, ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜುಲೈ 17 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹಾಗೂ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
311 ಅಸಿಸ್ಟೆಂಟ್, 02 ಕ್ಲರ್ಕ್ ಒಟ್ಟು 313 ಹುದ್ದೆಗಳಿಗೆ ಆನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 31, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆ ಎಲ್ಲಿ?: ಭಾರತದಾದ್ಯಂತ
* 311 ಅಸಿಸ್ಟೆಂಟ್
1. ವಿದ್ಯಾರ್ಹತೆ: ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್ ನಲ್ಲಿ ಯಾವುದಾದರೂ ಪದವಿಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿರಬೇಕು.
2. ವೇತನ: 25000 ರು. ತಿಂಗಳಿಗೆ.
3. ವಯೋಮಿತಿ: 31/07/2017ಕ್ಕೆ ಅನ್ವಯವಾಗುವಂತೆ 18 ರಿಂದ 26 ವರ್ಷ
* ಕ್ಲರ್ಕ್
1. ವಿದ್ಯಾರ್ಹತೆ: ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್ ನಲ್ಲಿ ಯಾವುದಾದರೂ ಪದವಿಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿರಬೇಕು.
2.ವೇತನ: 25000 ರು. ತಿಂಗಳಿಗೆ.
3. ವಯೋಮಿತಿ: 31/07/2017ಕ್ಕೆ ಅನ್ವಯವಾಗುವಂತೆ 18 ರಿಂದ 26 ವರ್ಷ
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ಮೂಲಕ ಎರಡು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

Click it and Unblock the Notifications