Job News in Kannada: ಇಸ್ರೋದಲ್ಲಿ ಉದ್ಯೋಗಗಳು ಖಾಲಿ ಇವೆ, ಜುಲೈ 14ರ ಒಳಗೆ ಅರ್ಜಿ ಸಲ್ಲಿಸಿ, ವಿವರ
ಬೆಂಗಳೂರು, ಜೂನ್ 30: ನೀವು ಬಾಹ್ಯಾಕಾಶ ವಲಯದಲ್ಲಿ ಉದ್ಯೋಗ ಮಾಡುವ ಕನಸು ಕಾಣುತ್ತಿದ್ದರೆ, ನಿಮಗೊಂದು ಉತ್ತಮ ಅವಕಾಶ ಒದಗಿ ಬಂದಿದೆ. 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)' ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಈ ಕೆಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೊನೆ ದಿನಾಂಕ, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದು ನೇಮಕಾತಿ ಮಾಹಿತಿ ಇಲ್ಲಿದೆ.
'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ, ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಜುಲೈ 14 ರೊಳಗೆ ಆನ್‌ಲೈನ್ ಮೂಲಕ ಸೂಕ್ತ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಬೇಕು. ಈ ಮೂಲಕ ಕನಸಿನ ಕೆಲಸವನ್ನು ಪಡೆದುಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಇಸ್ರೋ ತನ್ನಲ್ಲಿ ಖಾಲಿ ಇರುವ ಒಟ್ಟು 39 ವಿಜ್ಞಾನಿ/ಎಂಜಿನಿಯರ್ ಹುದ್ದೆಗಳು ಖಾಲಿವೆ ನಿಯಮಾನುಸಾರ ಈ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. ಇಸ್ರೋ ಅಧಿಕೃತ ಜಾಲತಾಣ (isro.gov.in) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ, ವಿದ್ಯಾರ್ಹತೆ ವಿವರ ಮುಂದಿದೆ.
ವಿದ್ಯಾಥರ್ಹತೆ ಏನಿರಬೇಕು?
ಅರ್ಜಿ ಸಲ್ಲಿಸಲು ಇಚ್ಚಿಸುವ ಅಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ಕನಿಷ್ಠ ಶೇಕಡಾ 65 ಅಂಕ ಸಹಿತ ಹುದ್ದೆಗೆ ಅಗತ್ಯವಾದ ಎಂಜಿನಿಯರಿಂಗ್ ದಪವಿ (ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಅಥವಾ ಕಂಪ್ಯೂಟರ್ ಸೈನ್ಸ್) ಬಿಇ/ಬಿಟೆಕ್ ಅಥವಾ ತತ್ಸಮಾನ ಪದವಿ ಅಥವಾ ಸಿಜಿಪಿಎ 6.84/10 ಅನ್ನು ಪಡೆದಿರಬೇಕು ಎಂದು ತಿಳಿಸಲಾಗಿದೆ. ಈ ಅರ್ಹ ಇದ್ದವರು ಕೂಡಲೇ ಅರ್ಜಿ ಸಲ್ಲಿಸಬೇಕು.
ವಯಸ್ಸಿನ ಮಿತಿ
ಇಸ್ರೋ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಕೆ ಕೊನೆ ದಿನಾಂಕಕ್ಕೆ ಸರಿಯಾಗಿ (ಜುಲೈ 14) ಆಸಕ್ತ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯಸ್ಸಾಗಿರಬೇಕು. ಇನ್ನೂ ಜಾತಿ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗ ಗರಿಷ್ಟ ವಯೋಮಿತಿ 33 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 31 ವರ್ಷ, ಮಾಜಿ ಸೈನಿಕರು, ದಿವ್ಯಾಂಗರಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನಗಳು, ವಿವರ
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಇಸ್ರೋ ವೆಬ್‌ಸೈಟ್ isro.gov.in ಗೆ ಭೇಟಿ ನೀಡಬೇಕು. ಇದೇ ಮೊದಲ ಬಾರಿಗೆ ನೀವು ಈ ಲಿಂಕ್ ಬಳಸುತ್ತಿದ್ದರೆ ಇಮೇಲ್, ಮೊಬೈಲ್ ಸಂಖ್ಯೆ ಸಹಿತ ಲಾಗಿನ್ ಆಗಬೇಕು. ಅಲ್ಲಿ ಕೇಳಲಾಗುವ ಅಗತ್ಯ ವಿವರಗಳನ್ನು, ಸೂಕ್ತ ದಾಖಲಾತಿ ಸಮೇತ ನೀವು ಅರ್ಜಿ ಸಲ್ಲಿಸಬೇಕು. ಬಳಿಕ ನಿಗದಿತ ಸ್ಥಳದಲ್ಲಿ ಕೇಳಲಾಗುವ ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಸಂಬಂಧಿತ ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಅಪ್ಲೋಡ್ ಮಾಡಬೇಕು. ನಂತರ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಕಟ್ಟಬೇಕು. ಕೊನೆ ದಿನಾಂಕ ವರೆಗೆ ಕಾಯದೇ ಈಗಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಳಿಕ ಅದರ ಅರ್ಜಿ ಪ್ರತಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಬೇಕು.












Click it and Unblock the Notifications