IRCTC Job alert: ಭರ್ಜರಿ ಉದ್ಯೋಗಾವಕಾಶ, ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ! 67000 ವೇತನ, ವಿವರ
IRCTC Recruitment 2025: ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡಕುತ್ತಿರುವವರಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (IRCTC) ಭರ್ಜರಿ ಉದ್ಯೋಗ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಸೂಕ್ತ ದಾಖಲಾತಿಗಳ ಜೊತೆಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವ್ಯಾಪ್ತಿಯಲ್ಲಿ ಹಲವು ಉದ್ಯೋಗಿಗಳು ಖಾಲಿ ಇವೆ. ಇವುಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 25ರೊಳಗೆ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಇತರ ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಬಹುದು. ವಿದ್ಯಾರ್ಹತೆ, ವೇತನ, ವಯೋಮಿತಿ ಇನ್ನಿತರ ಪೂರ್ಣ ಮಾಹಿತಿ ಇಲ್ಲಿ ಓದಿ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)
ಹುದ್ದೆಗಳು: ವ್ಯವಸ್ಥಾಪಕ, ಸಹಾಯಕ ವ್ಯವಸ್ಥಪಾಕ, ಇತರೆ
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನಾಂಖ: ಏಪ್ರಿಲ್ 25
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ: 55
ಮಾಸಿಕ ವೇತನ: 67000 ರೂಪಾಯಿ.
ವಿದ್ಯಾರ್ಹತೆ ಮಾಹಿತಿ
ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಹುದ್ದೆಗಳನ್ನು ಸೇರಬಯಸುವವರು ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪದವಿ, ಬಿಎಸ್‌ಸಿ, ಬಿಟೆಕ್ ಅಥವಾ ಬಿಐ ಪದವಿ ಪಡೆದಿರಬೇಕು.
ವಯೋಮಿತಿ
IRCTC ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷ ವಯಸ್ಸಾಗಿರಬೇಕು. ಈಗಾಗಲೇ ಬೇರೆ ಬೇರೆ ರಂಗದಲ್ಲಿ ಕೆಲಸ ಮಾಡಿದ ಅರ್ಹರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ಆಯಾ ಜಾತಿ ಅಭ್ಯರ್ಥಿಗಳಿಗೆ ಒಂದಷ್ಟು ಸಡಿಲಿಕೆ ಸಿಗಲಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ. ಬದಲಾಗಿ ಅರ್ಜಿ ಸಲ್ಲಿಸಿದವರ ಅರ್ಹತೆಯನ್ನು ಮತ್ತು ದಾಖಲೆಗಳ ಪರಿಶೀಲನೆ, ಸಂದರ್ಶನ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದಾಖಲಾತಿ ಪರಿಶೀಲನೆ ವೇಳೆ ಒಂದು ಪಟ್ಟಿ ಸಿದ್ದಪಡಿಸಲಾಗುತ್ತದೆ. ಇದರಲ್ಲಿ ಆಯ್ಕೆ ಆದವರಿಗೆ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಕೂಡಲೇ ನೀವು IRCTC ಯ ಅಧಿಕೃತ ವೆಬ್‌ಸೈಟ್ https://irctc.com/ ಗೆ ಭೇಟಿ ನೀಡಬೇಕು. ಅಲ್ಲಿ ಕೊಡಲಾದ ಮಾಹಿತಿ ಸರಿಯಾಗಿ ಓದಿಕೊಂಡು, ಸೂಕ್ತ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 25 ರ ಕೊನೆಯ ದಿನದವರೆಗೆ ಕಾಯದೇ ಇಂದೇ ಅರ್ಜಿ ಸಲ್ಲಿಸಿ. ನಿಮಗೆ ಆಹ್ವಾನ ಬಂದಾಗ ಎಲ್ಲ ಸೂಕ್ತ ದಾಖಲೆಗಳನ್ನು ಪರೀಲನೆಗೆ ಒಯ್ಯಬೇಕಿದೆ.












Click it and Unblock the Notifications