IPPB Recruitment 2022: ಅಂಚೆ ಇಲಾಖೆಯಿಂದ 41 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ನವೆಂಬರ್ 07: ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾಲಿ ಇರುವ 41 ಸಹಾಯಕ ವ್ಯವಸ್ಥಾಪಕರು ಮತ್ತು ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಅರ್ಹ ಆಸಕ್ತರು ಅರ್ಜಿ ಸಲ್ಲಿಸಬಹುದು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(IPPB) ಇದು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಡಿ ಬರುವ ಭಾರತೀಯ ಅಂಚೆ ಇಲಾಖೆಯ ವಿಭಾಗವಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಭಾರತೀಯ ಅಂಚೆ ಇಲಾಖೆಯ ಮಾಲೀಕತ್ವದಲ್ಲಿದ್ದು, ಅದು 2022ರ ಹೊತ್ತಿಗೆ 5 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.
ನವೆಂಬರ್ 18ರೊಳಗೆ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತು ಇಲ್ಲಿ ತಿಳಿಯಿರಿ.

ವಿದ್ಯಾರ್ಹತೆ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜರ್ ಹುದ್ದೆಗಳಿಗೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಸಂಸ್ಥೆ/ ಬೋರ್ಡ್ನಿಂದ ಕಡ್ಡಾಯವಾಗಿ ಮಾಹಿತಿ ತಂತ್ರಜ್ಞಾನ (ಇನ್ಫರ್ಮೇಶನ್ ಟೆಕ್ನಾಲಜಿ) ವಿಭಾಗದಲ್ಲಿ ಕಡ್ಡಾಯವಾಗಿ ಬಿಸಿಎ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಸಿಎ, ಎಂಎಸ್‌ಸಿ ಪೂರ್ಣಗೊಳಿಸಿರಬೇಕು.
ಹುದ್ದೆಯ ಮಾಹಿತಿ
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ) 18
ಮ್ಯಾನೇಜರ್ (ಐಟಿ) 13
ಸೀನಿಯರ್ ಮ್ಯಾನೇಜರ್ (ಐಟಿ) 8
ಚೀಫ್ ಮ್ಯಾನೇಜರ್ (ಐಟಿ) 2
ವಯೋಮಿತಿ
ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು 20ರಿಂದ 30ವರ್ಷದೊಳಗಿನವರು, ವ್ಯವಸ್ಥಾಪಕ (ಐಟಿ) ಹುದ್ದೆಗೆ 23-35 ವರ್ಷದೊಳಗಿನ ಅರ್ಹರು, ಹಿರಿಯ ವ್ಯವಸ್ಥಾಪಕ (ಐಟಿ) ಸ್ಥಾನಕ್ಕೆ 26 ರಿಂದ 35 ವರ್ಷದವರು ಹಾಗೂ ಮುಖ್ಯ ವ್ಯವಸ್ಥಾಪಕ ಹುದ್ದೆಗೆ (ಐಟಿ) 29-45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿ ನಿಗದಿತ 750ರೂ. ಶುಲ್ಕವನ್ನು ಪಾವತಿಸಬೇಕು. ನೇಮಕಾತಿ ಅಧಿಸೂಚನೆಯನ್ವಯ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ ಎಂದು ಅಂಚೆ ಇಲಾಖೆ ತಿಳಿಸಿದೆ.











Click it and Unblock the Notifications