Nokia: 1.26 ಲಕ್ಷ ಟೆಲಿಕಾಂ ನುರಿತ ಯುವಕರಿಗೆ ಉದ್ಯೋಗ: ಕೌನ್ಸಿಲ್
ಬೆಂಗಳೂರು, ಜುಲೈ 18: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಟೆಲಿಕಾಂ ತಂತ್ರಜ್ಞಾನದಲ್ಲಿ ತರಬೇತಿ ಪಡೆದ ಸುಮಾರು 1.26 ಲಕ್ಷ ಯುವಕರು ಉದ್ಯೋಗ ಪಡೆಯಲಿದ್ದಾರೆ ಎಂದು ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ನ ಉನ್ನತ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅಹಮದಾಬಾದ್‌ನ ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (TSSC) ಕೌಶಲ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಫಿನ್ನಿಶ್ ಟೆಲಿಕಾಂ ಗೇರ್ ತಯಾರಕ ನೋಕಿಯಾ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (TSSC) ಪ್ರಸ್ತಕ ಆರ್ಥಿಕ ವರ್ಷದಲ್ಲಿ 1.26 ಲಕ್ಷ ಯುವಕರಿಗೆ ತರಬೇತಿ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸಲಿದೆ. ಹೀಗಾಗಿ ಅವರೆಲ್ಲರು ಉದ್ಯಮದಿಂದ ಉದ್ಯೋಗಿಯಾಗಲಿದ್ದಾರೆ ಎಂದು ಹೊಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಬದಿಯಲ್ಲಿ ಟಿಎಸ್‌ಎಸ್ಸಿ ಯ ಮುಖ್ಯಸ್ಥರಾದ ಅರವಿಂದ್ ಬಾಲಿ ಹೇಳಿದರು.
ಸ್ಕಿಲ್ ಲ್ಯಾಬ್‌ನಿಂದ ಉದ್ಯೋಗ ನೀಡುವ ಗುರಿ
ಐಟಿಐ ಕುಬೇರ್‌ನಗರದಲ್ಲಿರುವ ಸೆಂಟರ್ ಆಫ್ ಎಕ್ಸ್‌ಲೆನ್ಸ್ (CoE) ಅಭ್ಯರ್ಥಿಗಳಿಗೆ 5G ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡಲು ಸ್ಕಿಲ್ ಲ್ಯಾಬ್ ನಿರ್ಮಾಣ ಮಾಡಲಾಗುತ್ತಿದೆ. ಈ ಕೌಶಲ್ಯ ಕೇಂದ್ರವು ತರಬೇತಿ ಪೂರ್ಣಗೊಂಡ 4-6 ವಾರಗಳಲ್ಲಿ ಕನಿಷ್ಠ 70 ಪ್ರತಿಶತದಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ. ಯೋಜನೆ ಆರಂಭಿಕ ಮೊದಲ ವರ್ಷವೇ ಸುಮಾರು 300 ಅಭ್ಯರ್ಥಿಗಳು ಕಾರ್ಯಕ್ರಮದ ಲಾಭ ಪಡೆಯಲಿದ್ದಾರೆ ಎಂದರು.

ನೋಕಿಯ (Nokia) ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯ ಭಾಗವಾಗಿ ಕಂಪನಿಯು ಸೆಂಟರ್ ಆಫ್ ಎಕ್ಸ್‌ಲೆನ್ಸ್ ನೌಕರರಿಗಾಗಿ ಮೂಲಸೌಕರ್ಯ, ಉಪಕರಣಗಳು ಮತ್ತು ತರಬೇತಿಯಲ್ಲಿ ಅಧಿಕ ಹೂಡಿಕೆ ಮಾಡಲು ನಿರ್ಧರಿಸಿದೆ. ಇದರಿಂದ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಅನುಕೂಲ ದೊರೆಯಲಿದೆ.
ಪ್ರಧಾನಮಂತ್ರಿಯವರ ಡಿಜಿಟಲ್ ಭಾರತ್‌ನ ದೂರದೃಷ್ಟಿಗೆ ಪೂರಕವಾದ ಯೋಜನೆ ಇದಾಗಿದೆ. ಟೆಲಿಕಾಂ ತಂತ್ರಜ್ಞಾನಗಳಲ್ಲಿ ಹೊಸತನಕ್ಕೆ ತುಡಿಯುವ ನೋಕಿಯಾ (Nokia) ಮುಂಚೂಣಿಯಲ್ಲಿದೆ. 5G ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡಲು ತಾಂತ್ರಿಕವಾಗಿ ನುರಿತ ಮಾನವಶಕ್ತಿ ಅಭಿವೃದ್ಧಿಪಡಿಸಲು ಹೂಡಿಕೆ ಮಾಡಲಾಗುತ್ತಿದೆ ಎಂದು ನೋಕಿಯಾ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಮಿತ್ ಮಾರ್ವಾಹ್ ತಿಳಿಸಿದರು.
Nokia ಮೂಲಸೌಕರ್ಯ, ಉಪಕರಣಗಳು ಮತ್ತು ತರಬೇತಿಯಲ್ಲಿ ಹೂಡಿಕೆ ಮಾಡಿದೆ. ಈ ಕೇಂದ್ರವನ್ನು ಗುಜರಾತ್‌ನ ಕಾರ್ಮಿಕ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸಚಿವ ಬಲ್ವಂತಸಿಂಗ್ ರಜಪೂತ್ ಉದ್ಘಾಟಿಸಿದರು.












Click it and Unblock the Notifications