ಅಂಚೆ ಇಲಾಖೆ: 12,828 ಜಿಡಿಸಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಈಗಲೇ ಅರ್ಜಿ ಹಾಕಿ
ನವದೆಹಲಿ, ಜೂನ್ 15: ಭಾರತೀಯ ಅಂಚೆ ಇಲಾಖೆಯು ಇತ್ತೀಚೆಗೆ 12,828 ಹುದ್ದೆಗಳ ಭರ್ತಿಗೆ ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಆದರೆ ಆಸಕ್ತರು ಕೊನೆ ದಿನವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಇದೇ ವರ್ಷದ ಆರಂಭದಲ್ಲಿ ಅಂಚೆ ಇಲಾಖೆ ಒಟ್ಟು 40,889 ಹುದ್ದೆಗಳ ನೇಮಕ ಪ್ರಕ್ರಿಯೆ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಈಗಾಗಲೇ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಿತ್ತು.

ಇದಾದ ಬಳಿಕ ಕಳೆದ ತಿಂಗಳ ಮೇ ಮೂರನೇ ವಾರ 12,828 ಗ್ರಾಮೀಣ ಡಾಕ್ ಸೇವಕ (ಜಿಡಿಎಸ್)ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅಂದು ಅರ್ಜಿ ಸಲ್ಲಿಕೆಗೆ ಜೂನ್ 11ರವರೆಗಿನ ಕೊನೆ ದಿನ ಎನ್ನಲಾಗಿತ್ತು. ಇದೀಗ ಕೊನೆ ದಿನವನ್ನು ಜೂನ್ 16ರಿಂದ ಜೂನ್ 23ರವರೆಗೆ ವಿಸ್ತರಣೆ ಮಾಡಲಾಗಿದೆ.
ಅಂಚೆ ಇಲಾಖೆ ಅಧಿಸೂಚನೆ ಪ್ರಕಾರ,ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಮತ್ತು ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ SSLC (10ನೇ ತರಗತಿ) ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಮೇಲೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಉದ್ಯೋಗ ವಿವರ ಹೀಗಿದೆ
* ಹುದ್ದೆ ಹೆಸರು - ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್)
* ಖಾಲಿ ಹುದ್ದೆಗಳ ಸಂಖ್ಯೆ - ಒಟ್ಟು 12,828

ಮಾಸಿಕ ಸಂಬಳ, ವಿದ್ಯಾರ್ಹತೆ ಮಾಹಿತಿ
* ಅಂಚೆ ಕಚೇರಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ - ಮಾಸಿಕ 12,900-29,380 ರೂಪಾಯಿ
* ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ - ಮಾಸಿಕ 10,000-24,470 ರೂಪಾಯಿ
ಅಭ್ಯರ್ಥಿಗೆ ಕನಿಷ್ಠ SSLC (10ನೇ ತರಗತಿ) ಉತ್ತೀರ್ಣ ಆಗಿರಬೇಕು. ಜೊತೆಗೆ ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ಬರಬೇಕು. ಅದಲ್ಲದೇ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದಲು, ಬರುವವರಾಗಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ವಯೋಮಿತಿ ವಿವರ
ವಿಸ್ತರಣೆಯಾದ ದಿನಾಂಕಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಅಭ್ಯರ್ಥಿಗೆ ಗರಿಷ್ಠ 40 ವರ್ಷ ವಯಸ್ಸಿ ಮೀರಿರಬಾರದು. ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ನೆನಪಿಡಬೇಕಾದ ದಿನಾಂಕಗಳು
* ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ - 22 ಮೇ 2023.
* ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 16 ಜೂನ್ 2023.
* ಅರ್ಜಿ ತಿದ್ದುಪಡಿಗೆ ಅವಕಾಶ - ಜೂನ್ 23ರವರೆಗೆ.












Click it and Unblock the Notifications