Indian Coast Guard Recruitment 2023:ಖಾಲಿ 250 ಹುದ್ದೆ ಭರ್ತಿಗೆ ಆಹ್ವಾನ, ಫೆ.16ರೊಳಗೆ ಅರ್ಜಿ ಸಲ್ಲಿಸಿ
ಭಾರತೀಯ ಕೋಸ್ಟ್ ಗಾರ್ಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಓದಿಕೊಂಡು ಮುಂದಿನ ತಿಂಗಳ ಫೆಬ್ರವರಿ 16ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಬೆಂಗಳೂರು, ಜನವರಿ 27: ಭಾರತೀಯ ಕೋಸ್ಟ್ ಗಾರ್ಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಓದಿಕೊಂಡು ಮುಂದಿನ ತಿಂಗಳ ಫೆಬ್ರವರಿ 16ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಭಾರತೀಯ ಕೋಸ್ಟ್ ಗಾರ್ಡ್ ಅರ್ಜಿ ಸಲ್ಲಿಸುವವರಿಗೆ ಬೇಕಾದ ಅರ್ಹತೆಗಳು, ಹೇಗೆ ಅರ್ಜಿ ಸಲ್ಲಿಬೇಕು, ಹುದ್ದೆಗಳ ಹೆಸರು ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿದೆ ತಿಳಿಯಿರಿ.
ಹುದ್ದೆಗಳ ಸಂಫೂರ್ಣ ವಿವರ
ಸಂಸ್ಥೆ- ಭಾರತೀಯ ಕೋಸ್ಟ್ ಗಾರ್ಡ್
ನಾವಿಕ (ಸಾಮಾನ್ಯ ಕರ್ತವ್ಯ) - 225
ನಾವಿಕ್ (ದೇಶೀಯ ಶಾಖೆ) - 30
ಒಟ್ಟು ಹುದ್ದೆಗಳು- 255
ಉದ್ಯೋಗ ಸ್ಥಳ - ಭಾರತದೆಲ್ಲಡೆ
ಖಾಲಿ ಹುದ್ದೆ ಹೆಸರು- ನಾವಿಕ್
ವೆಬ್‌ಸೈಟ್- https://indiancoastguard.gov.in/

ವಿದ್ಯಾರ್ಹತೆ ಏನು
ನಾವಿಕ (ಸಾಮಾನ್ಯ ಕರ್ತವ್ಯ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಣಿತ ಹಾಗೂ ಭೌತಶಾಸ್ತ್ರದೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇಲ್ಲವೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ ಪಾಸಾಗಿರಬೇಕು.
ನಾವಿಕ (ದೇಶೀಯ ಶಾಖೆ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 10ನೇ ತರಗತಿ ಇಲ್ಲವೇ ತತ್ಸಮಾನ ಪಾಸಾಗಿರಬೇಕು.
ವೇತನ- ವಯೋಮಿತಿ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 22ವಯಸ್ಸು ನಿಗದಿ ಮಾಡಲಾಗಿದೆ. ಕೋಸ್ಟ್ ಗಾರ್ಡ್ ಹುದ್ದೆಗೆ ವೇತನ ಎಷ್ಟು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆ-ಅರ್ಜಿ ಶುಲ್ಕ ಮಾಹಿತಿ
ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎದುರಿಸಬೇಕು. ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ ಆದ ನಂತರ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳು ಒಳಗಾಗಬೇಕಿರುತ್ತದೆ. ಎಸ್‌ಸಿ, ಎಸ್ಟಿ ಅಭ್ಯರ್ಥಿಗಳ ಹೊರತು ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 300 ರೂ. ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಮೊದಲು ನೀವು ಭಾರತೀಯ ಕೋಸ್ಟ್ ಗಾರ್ಡ್ ನ ಅಧಿಕೃತ ವೆಬ್‌ಸೈಟ್ www.indiancoastguard.gov.in ಗೆ ಭೇಟಿ ನೀಡಿ. ನಂತರ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಬ್ಮಿಟ್ ಮಾಡಿದ ನಂತರ ಆ ಅರ್ಜಿ ಫಾರ್ಮ್‌ನ ಡೌನ್‌ಲೋಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅರ್ಜಿ ಸಲ್ಲಿಕೆಯ ಅಧಿಸೂಚನೆ ನೋಡಲು https://joinindiancoastguard.cdac.in/cgept/ ಭೇಟಿ ನೀಡಬಹುದು.












Click it and Unblock the Notifications