ಉದ್ಯೋಗವಕಾಶ: 13 ಪ್ರಾದೇಶಿಕ ಸೇನಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ನವದೆಹಲಿ, ಜುಲೈ 02: ಭಾರತೀಯ ಸೇನೆಯು 13 ಪ್ರಾದೇಶಿಕ ಭೂ ಸೇನಾ ಅಧಿಕಾರಿ (ಟೆರಿಟೋರಿಯಲ್ ಆರ್ಮಿ ಆಫೀಸರ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅರ್ಜಿ ಸಲ್ಲಿಸಲು ಜುಲೈ 30, 2022 ಕೊನೆಯ ದಿನಾಂಕವಾಗಿದೆ.
ಭಾರತೀಯ ಸೇನಾ ನೇಮಕಾತಿ 2022ರ ಅಡಿಯಲ್ಲಿ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.
ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್, jointerritorialarmy.gov.in ಮೂಲಕ ಹೇಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಅರ್ಹತೆ, ವೇತನ ಮತ್ತು ಇತರೆ ವಿವರವನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತೀಯ ಸೇನಾ ನೇಮಕಾತಿ 2022 ವಿವರಗಳು:
* ಹುದ್ದೆ: ಪ್ರಾದೇಶಿಕ ಸೇನಾ ಅಧಿಕಾರಿ
* ಹುದ್ದೆಯ ಸಂಖ್ಯೆ: 13 (ಪುರುಷ - 12 ಮತ್ತು ಸ್ತ್ರೀ - 01)
* ವೇತನ ಶ್ರೇಣಿ: 56,100 - 1,77,500/- ಹಂತ -10
* ಭಾರತೀಯ ಸೇನಾ ನೇಮಕಾತಿ 2022 ಅರ್ಹತಾ ಮಾನದಂಡ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು.
* ವಯಸ್ಸಿನ ಮಿತಿ: 18 ರಿಂದ 42 ವರ್ಷಗಳು
* ಭಾರತೀಯ ಸೇನಾ ನೇಮಕಾತಿ 2022 ಅರ್ಜಿ ಶುಲ್ಕ: ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಎಲ್ಲ ಅಭ್ಯರ್ಥಿಗಳಿಗೆ 200 ರೂಪಾಯಿ ಅನ್ನು ನಿಗದಿಪಡಿಸಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ ಹೇಗೆ?:
* ಅರ್ಹ ಅಭ್ಯರ್ಥಿಗಳು Jointerritorialarmy.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
* ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: ಜುಲೈ 01, 2022
* ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 30, 2022
* ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಜುಲೈ 30, 2022
* ಲಿಖಿತ ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್ 25, 2022
ಭಾರತೀಯ ಸೇನಾ ನೇಮಕಾತಿ 2022 ಆಯ್ಕೆ ಪ್ರಕ್ರಿಯೆ:
* ಲಿಖಿತ ಪರೀಕ್ಷೆ ನಂತರ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರದಲ್ಲಿ ಆಯಾ ಪ್ರಾದೇಶಿಕ ಆರ್ಮಿ ಗ್ರೂಪ್ ಹೆಡ್‌ಕ್ವಾರ್ಟರ್‌ನಿಂದ ಪ್ರಾಥಮಿಕ ಸಂದರ್ಶನ ಮಂಡಳಿ (PIB) ಮೂಲಕ ಸ್ಕ್ರೀನಿಂಗ್ ಆಯ್ಕೆಯನ್ನು ಆಧರಿಸಿರುತ್ತದೆ.












Click it and Unblock the Notifications