Agniveer Army Result 2025: ಅಗ್ನಿವೀರ ನೇಮಕಾತಿ ಪರೀಕ್ಷೆ ಫಲಿತಾಂಶ ಬಿಡುಗಡೆ ಲಿಂಕ್! ಡೌನ್‌ಲೋಡ್ ಹೇಗೆ? ವಿವರ
ಬೆಂಗಳೂರು, ಜುಲೈ 20: ಭಾರತೀಯ ಸೇನೆಯು 'ಅಗ್ನಿವೀರ' ನೇಮಕಾತಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಸುಮಾರು 25000 ಹುದ್ದೆಗಳ ನೇಮಕಾತಿ ಇದಾಗಿದ್ದು, ಈಗಾಗಲೇ ಜೂನ್ 30 ರಿಂದ ಜುಲೈ 10 ರವರೆಗೆ ಪರೀಕ್ಷೆಗಳು ನಡೆದಿವೆ. 'ಅಗ್ನಿವೀರ' ನೇಮಕಾತಿ ಪರೀಕ್ಷೆಯ ಫಲಿತಾಂಶ 2025 ಅಧಿಕೃತ ವೆಬ್‌ಸೈಟ್‌ನಲ್ಲಿ joinindianarmy.nic.in ಪ್ರಕಟಗೊಳ್ಳಲಿದೆ. ಫಲಿತಾಂಶ ಪರಿಶೀಲನೆ, ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ವಿಧಾನಗಳು, ಲಿಂಕ್ ಇಲ್ಲಿದೆ.
ಅಗ್ನಿವೀರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ 2025 ಹಾಜರಾದ ಅಭ್ಯರ್ಥಿಗಳು ಹೆಚ್ಚು ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಭಾರತೀಯ ಸೇನೆಯಿಂದ ಫಲಿತಾಂಶ ಪ್ರಕಟವಾಗಲಿದೆ. ಅಗ್ನಿವೀರ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಅನ್ನು ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು, ಬಂಗಾಳಿ, ಉರ್ದು, ಪಂಜಾಬಿ, ಒಡಿಯಾ, ಗುಜರಾತಿ, ಅಸ್ಸಾಮಿ ಮತ್ತು ಮರಾಠಿ ಸೇರಿ 13 ಭಾಷೆಗಳಲ್ಲಿ ನಡೆದಿತ್ತು. ಬೃಹತ್ ನೇಮಕಾತಿ ಇದಾಗಿದೆ.

ಈ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳು ಇದ್ದವು. ಪರೀಕ್ಷೆ ಸಂಪೂಣ್ ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಅಗ್ನಿವೀರ ಅಭ್ಯರ್ಥಿಗಳು ಒಂದು ಗಂಟೆಯಲ್ಲಿ 50 ಪ್ರಶ್ನೆಗಳಿಗೆ ಅಥವಾ ಎರಡು ಗಂಟೆಗಳಲ್ಲಿ 100 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸದ್ಯ ಅವರೆಲ್ಲ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಫಲಿತಾಂಶ ಪರಿಶೀಲನೆ ಹೇಗೆ?, ಇಲ್ಲಿವೆ ವಿಧಾನಗಳು
* ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ 2025 ಬಿಡುಗಡೆ ಆಗುತ್ತಿದ್ದಂತೆ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಬೇಕು.
* ಮುಖಪುಟದಲ್ಲಿ ಲಭ್ಯವಿರುವ ಭಾರತೀಯ ಸೇನೆಯ ಅಗ್ನಿವೀರ್ ಫಲಿತಾಂಶ 2025 ಲಿಂಕ್ ತೆರೆಯಬೇಕು.
* ಬಳಿಕ ಅಲ್ಲಿ ನಿಮ್ಮ ಲಾಗಿನ್ ವಿವರ ಹಾಕಿ, ಒಳ ಪ್ರವೇಶಿಸಬೇಕು.
* ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಕಾಣುತ್ತದೆ.
* ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಬೇಕು
* ಭವಿಷ್ಯದ ಅಗತ್ಯತೆಗಾಗಿ ಫಲಿತಾಂಶದ ಒಂದು ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಬೇಕು.












Click it and Unblock the Notifications