India Post Recruitment 2022: 98083 ಹುದ್ದೆಗಳಿವೆ, ತ್ವರಿತವಾಗಿ ಅರ್ಜಿ ಸಲ್ಲಿಸಿ
ಬೆಂಗಳೂರು ನ.4: ಭಾರತೀಯ ಅಂಚೆ ಇಲಾಖೆ 2022ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಇಲಾಖೆಯಿಂದ ಅಂಚೆ ಕಚೇರಿಯಲ್ಲಿ ಖಾಲಿ ಇರುವ 98083ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮಾಡಿಕೊಳ್ಳುವುದಾಗಿ ತಿಳಿಸಿದೆ.
ಈ ನೇಮಕಾತಿ ಪ್ರಕ್ರಿಯೆಯೂ ರಾಷ್ಟ್ರಾದ್ಯಂತ 23 ವೃತ್ತದ (ಸರ್ಕಲ್) ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಒಳಗೊಂಡಿದ್ದು, ಆದಷ್ಟು ಶೀಘ್ರವೇ ಅವುಗಳ ಭರ್ತಿ ಕಾರ್ಯ ನಡೆಯಲಿದೆ. ದೇಶಾದ್ಯಂತ ಪೋಸ್ಟ್‌ಮನ್, ಮೇಲ್ ಗಾರ್ಡ್ ಸೇರಿದಂತೆ ಒಟ್ಟು 98,083 ವಿವಿಧ ಖಾಲಿ ಹುದ್ದೆಗಳಿಗೆ ಅರ್ಹ ಆಸಕ್ತರು ಅರ್ಜಿ ಸಲ್ಲಿಬಹುದಾಗಿದೆ.
ದೇಶಾದ್ಯಂತ ಪೋಸ್ಟಲ್, ಪೋಸ್ಟ್ ಮನ್, ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ವಿವಿಧ ಖಾಲಿ ಹುದ್ದೆಗಳಿಗೆ ಅರ್ಹ ಆಸಕ್ತರು ಅರ್ಜಿ ಸಲ್ಲಿಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಬೇಕಾದ ಮಾನದಂಡಗಳು, ಅರ್ಹತೆಗಳು ಏನು? ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು?. ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧ ಏನಿದೆ? ಎಂಬುದರ ಮಾಹಿತಿ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿ ಪಡೆದುಕೊಳ್ಳಬಹುದು.
ಸಂಸ್ಥೆ ಹೆಸರು: ಭಾರತೀಯ ಅಂಚೆ
ಒಟ್ಟು ಹುದ್ದೆ: 98083
ಹುದ್ದೆ ಹೆಸರು: Postman, Mail Guard & MTS
ಹುದ್ದೆ ತಾಣ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 2022.

ಯಾವ ಹುದ್ದೆಗಳು ಖಾಲಿ ಇವೆ?
* ಪೋಸ್ಟಮನ್: 59,099
* ಮೇಲ್ ಗಾರ್ಡ್ ಹುದ್ದೆ: 1445
* ಮಲ್ಟಿ ಟಾಸ್ಕಿಂಗ್ (ಎಂಟಿಎಸ್) : 37,539
ದೇಶಾದ್ಯಂತ ಖಾಲಿ ಇರುವ ಪೋಸ್ಟಮನ್ ಹುದ್ದೆಗಳು
* ಆಂಧ್ರಪ್ರದೇಶ ವೃತ್ತ- 2,289 ಖಾಲಿ ಹುದ್ದೆಗಳು
* ಅಸ್ಸಾಂ ವೃತ್ತ- 934 ಹುದ್ದೆಗಳು
* ಬಿಹಾರ ವೃತ್ತ- 1851 ಹುದ್ದೆಗಳು
* ಛತ್ತೀಸ್‌ಗಢ ವೃತ್ತ- 613 ಹುದ್ದೆಗಳು
* ದೆಹಲಿ ವೃತ್ತ- 2,903 ಹುದ್ದೆಗಳು
* ಗುಜರಾತ್ ಸರ್ಕಲ್- 4,524 ಹುದ್ದೆಗಳು
* ಹರಿಯಾಣ ವೃತ್ತ- 1,043 ಹುದ್ದೆಗಳು
* ಹಿಮಾಚಲ ಪ್ರದೇಶ ವೃತ್ತ- 423 ಹುದ್ದೆಗಳು
* ಜಮ್ಮು ಮತ್ತು ಕಾಶ್ಮೀರ ವೃತ್ತ- 395 ಹುದ್ದೆಗಳು
* ಜಾರ್ಖಂಡ್ - 889 ಹುದ್ದೆಗಳು
* ಕರ್ನಾಟಕ ವೃತ್ತ- 3,887 ಹುದ್ದೆಗಳು
* ಕೇರಳ ವೃತ್ತ- 2,930 ಹುದ್ದೆಗಳು
* ಮಧ್ಯಪ್ರದೇಶ ವೃತ್ತ- 2,062 ಹುದ್ದೆಗಳು
* ಮಹಾರಾಷ್ಟ್ರ ವೃತ್ತ - 9,884 ಹುದ್ದೆಗಳು
* ಈಶಾನ್ಯ ರಾಜ್ಯಗಳು - 581 ಹುದ್ದೆಗಳು
* ಒಡಿಶಾ ಸರ್ಕಲ್ - 1,352 ಹುದ್ದೆಗಳು
* ಪಂಜಾಬ್ ವೃತ್ತ- 1,824 ಹುದ್ದೆಗಳು
* ರಾಜಸ್ಥಾನ ವೃತ್ತ - 2,135 ಹುದ್ದೆಗಳು
* ತಮಿಳುನಾಡು ವೃತ್ತ - 6,130 ಹುದ್ದೆಗಳು
* ತೆಲಂಗಾಣ ವೃತ್ತ- 1,553 ಹುದ್ದೆಗಳು
* ಉತ್ತರಾಖಂಡ ವೃತ್ತ - 674 ಹುದ್ದೆಗಳು
* ಉತ್ತರ ಪ್ರದೇಶ ವೃತ್ತ - 4,992 ಹುದ್ದೆಗಳು
* ಪಶ್ಚಿಮ ಬಂಗಾಳ ವೃತ್ತ - 5,231 ಹುದ್ದೆಗಳು
ಮೇಲ್‌ಗಾರ್ಡ್ ಖಾಲಿ ಹುದ್ದೆಗಳ ಮಾಹಿತಿ
* ಆಂಧ್ರ ಪ್ರದೇಶ- 108 ಹುದ್ದೆಗಳು
* ಅಸ್ಸಾಂ- 73 ಹುದ್ದೆಗಳು
* ಬಿಹಾರ- 95 ಹುದ್ದೆಗಳು
* ಛತ್ತೀಸ್‌ಗಢ- 16 ಹುದ್ದೆಗಳು
* ದೆಹಲಿ- 20 ಹುದ್ದೆಗಳು
* ಗುಜರಾತ್- 74 ಹುದ್ದೆಗಳು
* ಹರಿಯಾಣ- 24 ಹುದ್ದೆಗಳು
* ಹಿಮಾಚಲ ಪ್ರದೇಶ- 07 ಹುದ್ದೆಗಳು
* ಜಾರ್ಖಂಡ್- 14 ಹುದ್ದೆಗಳು
* ಕರ್ನಾಟಕ- 90 ಹುದ್ದೆಗಳು
* ಕೇರಳ- 74 ಹುದ್ದೆಗಳು
* ಮಧ್ಯಪ್ರದೇಶ- 52 ಹುದ್ದೆಗಳು
* ಮಹಾರಾಷ್ಟ್ರ- 147 ಹುದ್ದೆಗಳು
* ಒಡಿಶಾ- 70 ಹುದ್ದೆಗಳು
* ಪಂಜಾಬ್- 29 ಹುದ್ದೆಗಳು
* ರಾಜಸ್ಥಾನ- 63 ಹುದ್ದೆಗಳು
* ತಮಿಳುನಾಡು- 128 ಹುದ್ದೆಗಳು
* ತೆಲಂಗಾಣ - 82 ಹುದ್ದೆಗಳು
* ಉತ್ತರಾಖಂಡ- 08 ಹುದ್ದೆಗಳು
* ಉತ್ತರ ಪ್ರದೇಶ- 116 ಹುದ್ದೆಗಳು
* ಪಶ್ಚಿಮ ಬಂಗಾಳ - 155 ಹುದ್ದೆಗಳು

ಮಲ್ಟಿಟಾಸ್ಕಿಂಗ್ (ಎಂಟಿಎಸ್) ಖಾಲಿ ಹುದ್ದೆಗಳ ಪಟ್ಟಿ
* ಆಂಧ್ರ ಪ್ರದೇಶ- 1,166 ಹುದ್ದೆಗಳು
* ಅಸ್ಸಾಂ- 747 ಹುದ್ದೆಗಳು
* ಬಿಹಾರ- 1,956 ಹುದ್ದೆಗಳು
* ಛತ್ತೀಸ್‌ಗಢ- 346 ಹುದ್ದೆಗಳು
* ದೆಹಲಿ- 2,667 ಹುದ್ದೆಗಳು
* ಗುಜರಾತ್- 2,530 ಹುದ್ದೆಗಳು
* ಹರಿಯಾಣ- 818 ಹುದ್ದೆಗಳು
* ಹಿಮಾಚಲ ಪ್ರದೇಶ- 383 ಹುದ್ದೆಗಳು
* ಜಮ್ಮು ಕಾಶ್ಮೀರ- 401 ಹುದ್ದೆಗಳು
* ಜಾರ್ಖಂಡ್- 600 ಹುದ್ದೆಗಳು
* ಕರ್ನಾಟಕ- 1,754 ಹುದ್ದೆಗಳು
* ಕೇರಳ- 1,424 ಹುದ್ದೆಗಳು
* ಮಧ್ಯಪ್ರದೇಶ- 1,268 ಹುದ್ದೆಗಳು
* ಮಹಾರಾಷ್ಟ್ರ- 5,478 ಹುದ್ದೆಗಳು
* ಈಶಾನ್ಯ ರಾಜ್ಯಗಳು- 358 ಹುದ್ದೆಗಳು
* ಒಡಿಶಾ- 881 ಹುದ್ದೆಗಳು
* ಪಂಜಾಬ್- 1,178 ಹುದ್ದೆಗಳು
* ರಾಜಸ್ಥಾನ- 1,336 ಹುದ್ದೆಗಳು
* ತಮಿಳುನಾಡು- 3,361 ಹುದ್ದೆಗಳು
* ತೆಲಂಗಾಣ- 878 ಹುದ್ದೆಗಳು
* ಉತ್ತರಾಖಂಡ- 399 ಹುದ್ದೆಗಳು
* ಉತ್ತರ ಪ್ರದೇಶ- 3,911 ಹುದ್ದೆಗಳು
* ಪಶ್ಚಿಮ ಬಂಗಾಳ- 3,744 ಹುದ್ದೆಗಳು
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ 100 ರು ಶುಲ್ಕ ವಿಧಿಸಲಾಗುತ್ತದೆ.
ಎಲ್ಲಾ ಮಹಿಳಾ ಅಭ್ಯರ್ಥಿಗಳು, SC/ST ಅಭ್ಯರ್ಥಿಗಳು, PWD ಅಭ್ಯರ್ಥಿಗಳು ಮತ್ತು ಮಂಗಳಮುಖಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆಗೆ ಅರ್ಹತೆ ಏನು?:
ಆಹ್ವಾನಿಸಿರುವ ಈ ಅಂಚೆ ಕಚೇರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು, ಕೆಲವು ಖಾಲಿ ಹುದ್ದೆ ಪಡೆಯಲು ಇಚ್ಛಿಸುವವರು ದ್ವಿತೀಯ ಪಿಯುಸಿ ತೇರ್ಗಡೆ ಆಗಿರಬೇಕು. ಪ್ರತಿ ಹುದ್ದೆಗೂ ಭಿನ್ನತೆಯ ವಿದ್ಯಾರ್ಹತೆ ಇದ್ದು, ಅಭ್ಯರ್ಥಿಗಳು ಶೈಕ್ಷಣಿಕ ಅಗತ್ಯತೆ ಅನುಗುಣವಾಗಿ ಮೊದಲು ಅರ್ಜಿ ಸಲ್ಲಿಕೆ ವಿಧಾನ ಖಚಿತಪಡಿಸಿಕೊಂಡು ಸಲ್ಲಿಸಬೇಕು. 18 ರಿಂದ 32ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಭಾರತೀಯ ಅಂಚೆ ಇಲಾಖೆ ತಿಳಿಸಿದೆ.












Click it and Unblock the Notifications