India Post GDS Recruitment 2023: ಅಂಚೆ ಇಲಾಖೆಯಲ್ಲಿ 30,041 ಹುದ್ದೆಗಳ ನೇಮಕಾತಿ- ಅರ್ಜಿ ಸಲ್ಲಿಸುವ ವಿಧಾನ, ಸಂಬಳ, ವಿವರ
ನವದೆಹಲಿ, ಆಗಸ್ಟ್ 04: 30,041 ಗ್ರಾಮೀಣ ಅಂಚೆ ಕಾರ್ಯನಿರ್ವಾಹಕರ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಭಾರತೀಯ ಅಂಚೆ ಇಲಾಖೆ ಆರಂಭಿಸಿದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಆಗಸ್ಟ್ 3 (ಗುರುವಾರ) ರಂದು ಪ್ರಾರಂಭವಾಗಿದೆ. ಇದು ಆಗಸ್ಟ್ 23 ರಂದು ಕೊನೆಗೊಳ್ಳುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಯ ಮಾನದಂಡಗಳೇನು?
ಅರ್ಜಿದಾರರು ಭಾರತೀಯ ಪೌರತ್ವ ಹೊಂದಿರಬೇಕು. 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 8 ರಿಂದ 40 ವರ್ಷಗಳ ನಡುವಿನ ವಯಸ್ಸು ಹೊಂದಿರಬೇಕು.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದೆ ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.
ಆಸಕ್ತ ಅಭ್ಯರ್ಥಿಗಳು ಜುಲೈ 31 ರ ಅಧಿಸೂಚನೆಯ ಪ್ರಕಾರ, indiapostgdsonline.gov.in ನಲ್ಲಿ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು
'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಬೇಕು
ಇದು ವಲಯವನ್ನು ಆಯ್ಕೆ ಮಾಡುವ, ನೋಂದಣಿ ಸಂಖ್ಯೆಯನ್ನು ನಮೂದಿಸುವ ಪುಟವನ್ನು ತೆರೆಯುತ್ತದೆ
ನಂತರ ದಾಖಲೆಗಳು, ಫೋಟೊಗಳು ಮತ್ತು ಸಹಿಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ
ಅರ್ಜಿ ಶುಲ್ಕವನ್ನು ಪಾವತಿಸಲು ಅಭ್ಯರ್ಥಿಗಳನ್ನು ಕೇಳಲಾಗುತ್ತದೆ
ಶುಲ್ಕ ಪಾವತಿಸಿದ ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು
ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡುವುದು ಉತ್ತಮ ವಿಧಾನವಾಗಿದೆ

ಪ್ರಿಂಟ್ ಔಟ್ ತೆಗೆದುಕೊಳ್ಳವುದು ಸೂಕ್ತವಾಗಿದೆ
ಈ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಗೊಂಡವರಿಗೆ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಬಿಪಿಎಂ) ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ) ಹುದ್ದೆಗಳನ್ನು ನೀಡಲಾಗುತ್ತಿದೆ. ಅಧಿಸೂಚನೆ ಪ್ರಕಾರ, ಬಿಪಿಎಂ ಪೋಸ್ಟ್‌ಗಳಿಗೆ ಸಮಯ ಸಂಬಂಧಿತ ನಿರಂತರ ಭತ್ಯೆ ಪ್ರಕಾರ ಸಂಬಳ ಪಾವತಿಸಲಾಗುವುದು, ಇದು ₹ 12,000ರಿಂದ ₹ 29,380 ರ ನಡುವೆ ಇರುತ್ತದೆ. ಎಬಿಪಿಎಂಗೆ, ವೇತನ ಶ್ರೇಣಿ ₹ 10,000ರಿಂದ ₹ 24,470 ರ ವರೆಗೆ ಇದೆ.
ಸರ್ಕಾರಿ ಉದ್ಯೋಗವಾಗಿರುವುದರಿಂದ, ಜಿಡಿಎಸ್ ಪಿಂಚಣಿ, ಗ್ರಾಚ್ಯುಟಿ ಮತ್ತು ವೈದ್ಯಕೀಯ ಸೌಲಭ್ಯಗಳಂತಹ ಹೆಚ್ಚುವರಿ ಪ್ರಯೋಜನಗಳಿಗೆ ಅರ್ಹವಾಗಿರುತ್ತದೆ. ಅವರಿಗೆ ತುಟ್ಟಿ ಭತ್ಯೆ (ಡಿಎ) ಕೂಡ ನೀಡಲಾಗುವುದು.

ಖಾಲಿ ಹುದ್ದೆಗಳನ್ನು ಸಾಮಾನ್ಯ, ಇಡ್ಬೂಎಸ್, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ವಿವಿಧ ವರ್ಗಗಳಲ್ಲಿ ಹಂಚಲಾಗುತ್ತದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹ 100 ಆಗಿದ್ದು, ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.












Click it and Unblock the Notifications