ಎಚ್ಎಂಟಿಯಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 1: ಎಚ್ ಎಂಟಿ (ಹಿಂದೂಸ್ತಾನ್ ಮಷೀನ್ ಟೂಲ್ಸ್) ಲಿಮಿಟೆಡ್ ನಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್ ಹಾಗೂ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಚ್ ಎಂಟಿ ಲಿಮಿಟೆಡ್ ನ ಉದ್ಯೋಗ ಮಾಹಿತಿ

ಒಟ್ಟು ಹುದ್ದೆಗಳು: 12
ಹುದ್ದೆಗಳ ವಿವರ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸೇಲ್ಸ್ ಮತ್ತು ಸರ್ವೀಸ್)
ಮ್ಯಾನೇಜರ್ (ಸೇಲ್ಸ್ ಮತ್ತು ಸರ್ವೀಸ್)
ಡೆಪ್ಯುಟಿ ಮ್ಯಾನೇಜರ್ ( ಸೇಲ್ಸ್ ಮತ್ತು ಸರ್ವೀಸ್)
ಉದ್ಯೋಗ ಸ್ಥಳ: ಕರ್ನಾಟಕ
ವಯೋಮಿತಿ ವಿವರ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ( ಸೇಲ್ಸ್ ಮತ್ತು ಸರ್ವೀಸ್)- 37 ವರ್ಷ
ಮ್ಯಾನೇಜರ್ ( ಸೇಲ್ಸ್ ಮತ್ತು ಸರ್ವೀಸ್)- 35 ವರ್ಷ
ಡೆಪ್ಯುಟಿ ಮ್ಯಾನೇಜರ್ ( ಸೇಲ್ಸ್ ಮತ್ತು ಸರ್ವೀಸ್)- 33 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು ಮತ್ತು ಎಂಬಿಎ (ಮಾರ್ಕೆಟಿಂಗ್) ಮಾಡಿದವರಿಗೆ ಆದ್ಯತೆ.
ಆಯ್ಕೆ ವಿಧಾನ : ಶೈಕ್ಷಣಿಕ ಪರೀಕ್ಷೆಗಳ ಅಂಕ, ಈ ಹಿಂದಿನ ಸೇವಾ ದಾಖಲೆಗಳು ಹಾಗೂ ಸಂದರ್ಶನದಲ್ಲಿ ತೆಗೆದುಕೊಳ್ಳುವ ಅಂಕದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆ ದಿನ: 18-8-2017
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications