HESCOM Recruitment: ಹೆಸ್ಕಾಂನಲ್ಲಿ ಖಾಲಿ ಇರುವ 388 ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ
ಹುಬ್ಬಳ್ಳಿ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಸಿಕ್ಕಿದೆ. ಐಟಿಐ (ಎಲೆಕ್ಟ್ರಿಷಿಯನ್) ಪೂರ್ಣಗೊಳಿಸಿದ ಅಭ್ಯರ್ಥಿಗಳು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಯಾವೆಲ್ಲ ಹುದ್ದೆಗಳು ಖಾಲಿ ಇವೆ, ಅರ್ಹತೆಗಳು ಏನು, ಕೊನೆ ದಿನಾಂಕ, ನೇಮಕಾತಿಯ ಎಲ್ಲ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (HESCOM) ಸಂಸ್ಥೆಯಲ್ಲಿ ಖಾಲಿ ಇರುವ 2026ನೇ ಸಾಲಿನ ತರಬೇತಿ (ಟ್ರೈನಿ ಐಟಿಐ ಎಲೆಕ್ಟ್ರಿಷಿಯನ್) ಒಟ್ಟು 388 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೂಡಲೇ ನಿಗದಿತ ದಿನಾಂಕಗೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಸಂಪೂರ್ಣ ವಿವರ
ನೇಮಕಾತಿ ಸಂಸ್ಥೆ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಂಸ್ಥೆ (ಹೆಸ್ಕಾಂ)
ಹುದ್ದೆಗಳು ಹೆಸರು: ಟ್ರೈನಿ (ಐಟಿಐ ಎಲೆಕ್ಟ್ರಿಷಿಯನ್)
ಒಟ್ಟು ಹುದ್ದೆಗಳು: 388
ಪೋಸ್ಟಿಂಗ್: ಹುಬ್ಬಳ್ಳಿ (ಕರ್ನಾಟಕ)
ಅರ್ಜಿ ಸಲ್ಲಿಕೆ ಆರಂಭ: 2026 ಫೆಬ್ರವರಿ 11
ಅರ್ಜಿ ಸಲ್ಲಿಕೆ ಕಡೆಯ ದಿನ: 2026 ಮಾರ್ಚ್ 02
ಶೈಕ್ಷಣಿಕ ಅರ್ಹತೆ ಏನಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ITI (ಎಲೆಕ್ಟ್ರಿಷಿಯನ್) ಪೂರೈಸಿರಬೇಕು. ತಾಂತ್ರಿಕ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಸಂಸ್ಥೆಯ ತರಬೇತಿ ಅವಕಾಶ ಸಿಗಲಿದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 50 ರೂಪಾಯಿ ನಿಗದಿಪಡಿಸಲಾಗಿದೆ. ಇದನ್ನು ಅಭ್ಯರ್ಥಿಗಳು ಡಿಡಿ ಮೂಲಕವೇ ತುಂಬಬೇಕು.
ಆಯ್ಕೆ ಹೇಗೆ?
ಸದರಿ ನೇಮಕಾತಿಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿರುವ ಹೆಸ್ಕಾಂ ಸಲ್ಲಿಕೆಯಾಗುವ ಅರ್ಜಿಗಳ ಶಾರ್ಟ್‌ಲಿಸ್ಟ್ ಮಾಡುತ್ತದೆ. ನಂತರ ಮೆರಿಟ್ ಪಟ್ಟಿ ಪ್ರಕಟಿಸಿ, ದಾಖಲೆಗಳ ಪರಿಶೀಲನೆಗೆ ಆಹ್ವಾನಿಸುತ್ತದೆ. ಲಿಖಿತ ಪರೀಕ್ಷೆ ಇಲ್ಲದೆ ಕೇವಲ ಮೆರಿಟ್ ಆಧಾರಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುವ ಸಾಧ್ಯತೆ ಇದೆ. ಇದು ಹೆಚ್ಚು ಅಂಕ ಗಳಿಸಿರುವ ಅಭ್ಯರ್ಥಿಗಳಿಗೆ ವರದಾನ ಎನ್ನಬಹುದು.
ಮಾಸಿಕ ವೇತನ ಎಷ್ಟು?
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ 9,600 ರೂಪಾಯಿ ವೇತನ ಇರಲಿದೆ. ಉದ್ಯೋಗ ಅನುಭವದೊಂದಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಈ ತರಬೇತಿ ಸಹಾಯಕವಾಗಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೊದಲು ಹೆಸ್ಕಾಂ ಅಧಿಕೃತ ಜಾಲತಾಣ hescom.co.in ಕ್ಕೆ ಭೇಟಿ ನೀಡಬೇಕು. ಅಲ್ಲಿ ಕಾಣುವ "ವೃತ್ತಿ" ಇಲ್ಲವೇ 'ನೇಮಕಾತಿ' ವಿಭಾಗದಲ್ಲಿ ಟ್ರೈನಿ ಐಟಿಐ ಎಲೆಕ್ಟ್ರಿಷಿಯನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಸೂಚನೆ ಓದಿಕೊಂಡು ಅಲ್ಲಿ ಕೇಳಲಾಗುವ ಎಲ್ಲಿ ಮಾಹಿತಿ ನೀಡಬೇಕು. ನಿಮಗೆ ಇರುವ ಶುಲ್ಕ ವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು. ಅರ್ಜಿ ಸಲ್ಲಿಸಿದ ನಂತರ ರಶೀದಿ ಅಥವಾ ಅಪ್ಲಿಕೇಶನ್ ನಂಬರ್ ಸೇವ್ ಮಾಡಿಕೊಳ್ಳಬೇಕು.












Click it and Unblock the Notifications