Government Job Alert: ಭರ್ಜರಿ ನೇಮಕಾತಿ! ಡಿ.5ರಂದು ನೇರ ಸಂದರ್ಶನ, ₹1.50 ಲಕ್ಷ ಮಾಸಿಕ ವೇತನ
Suvarna Arogya Trust Recruitment: ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಡಿಸೆಂಬರ್ 5 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ದಾಖಲಾತಿ ಸಮೇತ ಭಾಗವಹಿಸಬಹುದು.
ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಸೀನಿಯರ್ ಎಕ್ಸಿಕ್ಯೂಟಿವ್ ಡಾಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ನೇಮಕಾತಿ, ವೇತನ, ವಿದ್ಯಾರ್ಹತೆ ವಿವರ ಇಲ್ಲಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
ಹುದ್ದೆಗಳ ಹೆಸರು: ಹಿರಿಯ ಕಾರ್ಯನಿರ್ವಾಹಕ ವೈದ್ಯರು
ಒಟ್ಟು ಹುದ್ದೆಗಳು: 35
ಉದ್ಯೋಗ ಸ್ಥಳ: ಬೆಂಗಳೂರು
ಮಾಸಿಕ ವೇತನ: 45,000 ರೂ.ನಿಂದ 1,50,000 ರೂ.
ಸಂದರ್ಶನ: ಡಿಸೆಂಬರ್ 05
ವಿದ್ಯಾರ್ಹತೆ ಏನಿರಬೇಕು?
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯದಲ್ಲಿ ಬಿಡಿಎಸ್, ಬಿಇ/ ಬಿ.ಟೆಕ್, ಎಂಪಿಎಚ್, ಎಂಬಿಬಿಎಸ್, ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಪದವಿ ಪಡೆದಿರಬೇಕು. ಸಂದರ್ಶನದಲ್ಲಿ ಹಾಜರಾಗುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಬರಬೇಕು.
ವಾಕ್‌ಇನ್ ಇಂಟರ್‌ವ್ಯೂವ್
ಇದಕ್ಕೆ ಅರ್ಜಿ ಸಲ್ಲಿಕೆ ಇರುವುದಿಲ್ಲ. ಬದಲಾಗಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಸಂದರ್ಶನ ದಿವಸ ಬೆಳಗ್ಗೆ 10:30 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ಸಂದರ್ಶನವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, 7 ನೇ ಮಹಡಿ, ಬೆಂಗಳೂರು - 560023 ಇಲ್ಲಿ ನಡೆಯುತ್ತದೆ. ಉದ್ಯೋಗಾಕಾಂಕ್ಷಿಗಳು ತಪ್ಪದೇ ಹಾಜರಾಗುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications