Dr Bro: ಗೊ ಪ್ರವಾಸ ನೇಮಕಾತಿ: 'ಡಾ ಬ್ರೋ' ಜೊತೆಗೆ ಕೆಲಸ ಮಾಡಲು ಇಲ್ಲಿದೆ ಅವಕಾಶ

ಬೆಂಗಳೂರು, ಸೆಪ್ಟಂಬರ್ 06: ಖ್ಯಾತ ಯುಟ್ಯೂಬರ್ ಡಾ.ಬ್ರೋ ಯಾರಿಗೇತಾನೆ ಗೊತ್ತಿಲ್ಲ ಹೇಳಿ. ಗಗನ್ ಶ್ರಿನಿವಾಸ್ ಇವರು ಟ್ರಾವೆಲ್ ವ್ಲಾಗರ್ ಆಗಿದ್ದು, ತಮ್ಮ ಯುಟ್ಯೂಬರ್ ವಿಡಿಯೋಗಳಿಂದಲೇ ಜನಪ್ರಿಯ. ನಮಸ್ಕಾರ ದೇವ್ರು ಎಂದು ಹೇಳುತ್ತಲೇ ವಿಡಿಯೋ ಆರಂಭಿಸುವ ಇವರು ಅನೇಕ ದೇಶಗಳನ್ನು ಸುತ್ತಿದ್ದಾರೆ. ಇವರು ಇತ್ತೀಚೆಗೆ 'Go ಪ್ರವಾಸ' (Go Pravasa) ಎಂಬ ಸಂಸ್ಥೆ ತೆರೆದಿದ್ದಾರೆ. ಈ ಸಂಸ್ಥೆ ಬೆಂಗಳೂರಿನಲ್ಲಿದ್ದು, ಇದಕ್ಕೆ ಅರ್ಹರನ್ನು ನೇಮಕ ಮಾಡಿಕೊಳ್ಳಲು ಡಾ.ಬ್ರೋ ಮುಂದಾಗಿದ್ದಾರೆ.

ಹೌದು, ಕನ್ನಡಿಗರಿಗೆ ದೇಶ, ವಿದೇಶ ಸಂಸ್ಕೃತಿ, ಜೀವನ, ಆಹಾರ ಪದ್ಧತಿ, ಅಭಿವೃದ್ಧಿ, ಕೌತುಕಗಳನ್ನೆಲ್ಲ ಮೊಬೈಲ್ ಮೂಲಕವೇ ತೋರಿಸುವ ಡಾ.ಬ್ರೋ ವೀಕ್ಷಕರಿಗೆ ಅಚ್ಚುಮೆಚ್ಚು. ತಮ್ಮ ವಿಶಿಷ್ಟ ಸಂಭಾಷಣೆ, ವಿವರಣೆ ಮತ್ತು ವಿಡಿಯೋಗಳ ಮೂಲಕ ಮನೆ ಮಾತಾಗಿದ್ದಾರೆ. ನೀವು ಡಾ.ಬ್ರೊ ಜೊತೆಗೆ ಕೆಲಸ ಮಾಡಲು ಬಯಸಿದ್ದರೆ ಅದಕ್ಕೆ ಸೂಕ್ತ ಅವಕಾಶ ಈಗ ಒದಗಿಬಂದಿದೆ.

Gopravasa Job Recruitment Well Opportunity To Work With Youtuber Dr Bro

'Go ಪ್ರವಾಸ'ದಲ್ಲಿ ಯಾವೆಲ್ಲ ಹುದ್ದೆಗಳಿವೆ

ಖ್ಯಾತೆ ಕನ್ನಡ ಯುಟ್ಯೂಬರ್ ಡಾ.ಬ್ರೋ ಜೊತೆಗೆ ದೇಶ ಸುತ್ತಬಹುದಾಗಿದೆ. ಅವರ 'Go ಪ್ರವಾಸ' ಕಂಪನಿಯಲ್ಲಿನ '

ಇಂಟರ್‌ನ್ಯಾಷನಲ್‌ ಆಪರೇಷನ್‌ ಎಕ್ಸಿಕ್ಯೂಟಿವ್‌, ಡೊಮೆಸ್ಟಿಕ್‌ ಆಪರೇಷನ್‌ ಎಕ್ಸಿಕ್ಯೂಟಿವ್‌, ವೀಸಾ ಎಕ್ಸ್‌ಪರ್ಟ್ಸ್, ಟಿಕೆಟಿಂಗ್' ಹುದ್ದೆಗಳು ಖಾಲಿ ಇದ್ದು, ಆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಅನುಭವ ಏನಿರಬೇಕು

ಇಂಟರ್‌ನ್ಯಾಷನಲ್‌ ಆಪರೇಷನ್‌ ಎಕ್ಸಿಕ್ಯೂಟಿವ್‌ ಹುದ್ದೆಗೆ ಅಭ್ಯರ್ಥಿಗಳು ಹಾಲಿಡೇ ಪ್ಯಾಕೇಜ್‌ನಲ್ಲಿ ಕೆಲಸ ಮಾಡಿ ಅನುಭವ ಹೊಂದಿರಬೇಕು. ಇನ್ನೂ ಡೊಮೆಸ್ಟಿಕ್‌ ಆಪರೇಷನ್‌ ಎಕ್ಸಿಕ್ಯೂಟಿವ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಹಾಲಿಡೇ ಪ್ಯಾಕೇಜ್‌ನಲ್ಲಿ ಕೆಲಸ ಮಾಡಿ ಅನುಭವ ಇರಬೇಕು. ಅಲ್ಲದೇ ವೀಸಾ ಎಕ್ಸ್‌ಪರ್ಟ್ಸ್ ಹುದ್ದೆಯ ಅಭ್ಯರ್ಥಿಗಳಿಗೆ ಏಷ್ಯಾ ದೇಶಗಳಿಗೆ ವೀಸಾ ನೀಡುವ ತಜ್ಞರು (ಅನುಭವ ಇದ್ದರೆ ಮೊದಲ ಆದ್ಯತೆ ಸಿಗಲಿದೆ), ಟಿಕೆಟಿಂಗ್- ಡೊಮೆಸ್ಟಿಕ್‌/ ಇಂಟರ್‌ನ್ಯಾಷನಲ್‌ /ಆನ್‌ಲೈನ್/ಆಫ್‌ಲೈನ್‌ (ಅನುಭವ ಇರುವವರಿಗೆ ಆದ್ಯತೆ) ನೀಡಲಾಗುವುದು ಎಂದು ಡಾ.ಬ್ರೋ ಅವರು ತಿಳಿಸಿದ್ದಾರೆ.

ವಿದ್ಯಾರ್ಹತೆ ಏನು?

Go ಪ್ರವಾಸ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಟೂರಿಸಂ ಕೋರ್ಸ್‌ನಲ್ಲಿ ದ್ವಿತೀಯ ಪಿಯುಸಿ/ ಪದವಿ ಪಡೆದಿರಬೇಕು. ಅಂಥವರು ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೂರು ಭಾಷೆಗಳಾದ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ ಚೆನ್ನಾಗಿ ಮಾತನಾಡಲು ಬರಬೇಕು.

ಅರ್ಜಿ ಸಲ್ಲಿಕೆ ವಿಧಾನ

ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. Go ಪ್ರವಾಸ ವೆಬ್‌ಸೈಟ್ ಮುಖೇನ (https://gopravasa.com/) ನೀವು ಅರ್ಜಿ ಸಲ್ಲಿಸಬೇಕು. ಅಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಒದಗಿಸಿ ಉದ್ಯೋಗಕ್ಕೆ ಆಯ್ಕೆ ಆದರೆ ನೀವು ಸಹ ಡಾ.ಬ್ರೋ ಜೊತೆಗೆ ಅವರೊಂದಿಗೆ ಕೆಲಸ ಮಾಡಬಹುದು. ಜೊತೆಗೆ ಅವರೊಂದಿಗೆ ದೇಶ, ವಿದೇಶ ಸುತ್ತಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+