Global Massive Lay Offs: ವಿಶ್ವದಾದ್ಯಂತ ಪ್ರತಿಷ್ಠಿತ 23 ಐಟಿ ಕಂಪನಿಗಳಿಂದ ಲಕ್ಷಾಂತರ ಉದ್ಯೋಗ ವಜಾ ಘೋಷಣೆ! ಪಟ್ಟಿ ಇಲ್ಲಿದೆ
Massive Lay Offs: ಭಾರತ ಮಾತ್ರವಲ್ಲದೇ ಜಾಗತಿಕವಾಗಿ ಅನೇಕ ದೇಶಗಳಲ್ಲಿ ಉದ್ಯೋಗ ಕಡಿತ ಹೆಚ್ಚಾಗಿದೆ. ಕೊರೊನಾ ವೇಳೆ ಆರ್ಥಿಕ ಸಮಸ್ಯೆ ಹಾಗೂ ಇತರ ಕಾರಣಗಳಿಂದ ಸಾವಿರಾರು ಮಂದಿ ಪ್ರಮಖ ಕಂಪನಿಗಳಿಂದ ಉದ್ಯೋಗ ಕಳೆದುಕೊಂಡಿದ್ದರು. ಈ ಉದ್ಯೋಗ ವಜಾ 2026ರವರೆಗೂ ಮುಂದುವರಿದಿದೆ. ಇದೀಗ ಅಮೆಜಾನ್, ಇಂಟೆಲ್, ಐಬಿಎಂ, ಗೂಗಲ್, ಮೈಕ್ರೋಸಾಫ್ಟ್, ಮೆಟಾ ಸೇರಿದಂತೆ ಒಟ್ಟು 23 ಕಂಪನಿಗಳಿಂದ ಉದ್ಯೋಗ ವಜಾ ಘೋಷಣೆ ಆಗಿದೆ. ಇದು ಲಕ್ಷಾಂತರ ನೌಕರರಿಗೆ ಆಘಾತ ನೀಡಿದೆ. ಯಾವೆಲ್ಲ ಕಂಪನಿಗಳಲ್ಲಿ ಎಷ್ಟೆಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂಬ ವಿವರ ಇಲ್ಲಿದೆ.
ಕೊರೋನಾವರೆಗೂ ಒಂದು ಹಂತದ ವಜಾಗಳು ನಡೆಯುತ್ತಿದ್ದವು. ಕೋವಿಡ್ ಹಾಗೂ ಅದರ ನಂತರದ ಬೆಳವಣಿಗೆಯಲ್ಲಿ ಉದ್ಯೋಗ ರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮೊದಲು ನೂರರ ಲೆಕ್ಕದಲ್ಲಿ ಉದ್ಯೋಗ ವಜಾ ಆಗುತ್ತಿತ್ತು. ಇದೀಗ ಹತ್ತು ಸಾವಿರ, 50, 70, 80 ಸಾವಿರ ಲೆಕ್ಕದಲ್ಲಿ ಬೃಹತ್ ಉದ್ಯೋಗ ವಜಾಗೆ ಆಯಾ ಕಂಪನಿಗಳು ಮುಂದಾಗಿದೆ. ಈ ವಜಾ ಘೋಷಣೆ ಬಗ್ಗೆ 'ಇಂಡಿಯನ್ ಟೆಕ್ ಆಂಡ್ ಇಂಫ್ರಾ' (@IndianTechGuide) ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಎಲ್ಲ ಕಂಪನಿಗಳಿಂದ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಸಾಧ್ಯತೆ ಇದೆ. ಕೆಲವರು ಭವಿಷ್ಯ ನೆನೆದು ಆತಂಕಗೊಂಡಿದ್ದಾರೆ ಎನ್ನಲಾಗಿದೆ.

ಉದ್ಯೋಗ ವಜಾಗೆ ಪ್ರಮುಖ ಕಾರಣವೇನು?
ಸಾಫ್ಟ್‌ವೇರ್ ಅಭಿವೃದ್ಧಿ, ತಂತ್ರಜ್ಞಾನ ಕ್ಷೇತ್ರದ ದೈತ್ಯ ಐಟಿ ಕಂಪನಿಗಳು ನೂತನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆಯಲ್ಲಿ ಆಸಕ್ತಿ ತೋರಿಸುತ್ತಿವೆ. ಈಗಾಗಲೇ ಅನೇಕ ಕಂಪನಿಗಳು ಹಂತ ಹಂತವಾಗಿ ಎಐ ಟೆಕ್ ಅಳವಡಿಸಿಕೊಳ್ಳುವ ಮೂಲಕ ಎಚ್‌ಆರ್ ವಿಭಾಗ, ಮಾರ್ಕೆಟಿಂಗ್ ಸೇರಿದಂತೆ ಪ್ರಮುಖ ವಿಭಾಗದ ನೌಕರರನ್ನು ವಜಾಗೊಳಿಸಿ ಗೇಟ್ ಪಾಸ್ ನೀಡಿವೆ. ಕೆಲವೆಡೆ ಉದ್ಯೋಗ ಗುಂಪಿನ ಪುನರ್ ಸ್ಥಾಪನೆ, ಆದಾಯ ಕಡಿಮೆ, ನಿರ್ವಹಣೆ ವೆಚ್ಚ ಹೆಚ್ಚಳ ಹಾಗೂ ಇತರ ಕಾರಣಗಳಿಂದಲೂ ಉದ್ಯೋಗ ವಜಾ ಮಾಡುತ್ತಿರುವುದಾಗಿ ತಿಳಿಸಿದೆ. ಆದರೆ ಎಐ ಬಂದ ಮೇಲಂತೂ ಬೃಹತ್ ಉದ್ಯೋಗ ವಜಾ ಪ್ರಮಾಣ ಹೆಚ್ಚಾಗಿರುವುದಂತೂ ಸತ್ಯ.
ಪ್ರತಿಷ್ಠತಿ 23 ಕಂಪನಿಗಳಿಂದ ಬೃಹತ್ ವಜಾ ಘೋಷಣೆ, ಪಟ್ಟಿ
1. ಯುಪಿಎಸ್: 78,000 ಉದ್ಯೋಗಿಗಳು
2. ಅಮೆಜಾನ್: 30,000 ಉದ್ಯೋಗಿಗಳು
3 .ಇಂಟೆಲ್: 25,000 ನೌಕರರು
4. ನಿಸ್ಸಾನ್: 20,000 ನೌಕರರು
5. ನೆಸ್ಲೆ: 16,000 ನೌಕರರು
6. ಮೈಕ್ರೋಸಾಫ್ಟ್: 15,000 ಉದ್ಯೋಗಿಗಳು
7. ಬಾಷ್: 13,000 ಉದ್ಯೋಗಿಗಳು
8. ವೆರಿಝೋನ್: 13,000 ಉದ್ಯೋಗಿಗಳು
9. ಡೆಲ್: 12,000 ನೌಕರರು
10. ಆಕ್ಸೆಂಚರ್: 11,000 ನೌಕರರು
11. ಫೋರ್ಡ್: 11,000 ನೌಕರರು
12. ನೊವೊ ನಾರ್ಡಿಸ್ಕ್: 9,000 ಉದ್ಯೋಗಿಗಳು
13. ಮೈಕ್ರೋಸಾಫ್ಟ್: 7,000 ನೌಕರರು
14. ಪಿಡಬ್ಲ್ಯೂಸಿ: 5,600 ನೌಕರರು
15. ಸೇಲ್ಸ್‌ಫೋರ್ಸ್: 4,000 ಉದ್ಯೋಗಿಗಳು
16. ಐಬಿಎಂ: 2,700 ಉದ್ಯೋಗಿಗಳು
17. ಅಮೇರಿಕನ್ ಏರ್‌ಲೈನ್ಸ್: 2,700 ಉದ್ಯೋಗಿಗಳು
18. ಪ್ಯಾರಾಮೌಂಟ್: 2,000 ನೌಕರರು
19. ಗುರಿ: 1,800 ಉದ್ಯೋಗಿಗಳು
20. ಜನರಲ್ ಮೋಟಾರ್ಸ್: 1,500 ನೌಕರರು
21. ಅನ್ವಯಿಕ ಸಾಮಗ್ರಿಗಳು: 1,444 ನೌಕರರು
22. ಕ್ರೋಗರ್: 1,000 ಉದ್ಯೋಗಿಗಳು
23. ಮೆಟಾ: 1,000 ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ.












Click it and Unblock the Notifications