Anganwadi Recruitment: ಈ ಜಿಲ್ಲೆಯಲ್ಲಿ 196 ಹುದ್ದೆಗಳ ನೇಮಕಾತಿ, SSLC ಪಾಸಾದವರು ಅರ್ಜಿ ಹಾಕಿ
ಬೆಂಗಳೂರು, ಆಗಸ್ಟ್ 30: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ವ್ಯಾಪ್ತಿಯಲ್ಲಿ ಅನೇಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಅರ್ಹರು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಸರ್ಕಾರಿ ಉದ್ಯೋಗ ಪಡೆಯುವ ಆಸಕ್ತಿ ಹೊಂದಿದ ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತನ್ನಲ್ಲಿ ಖಾಲಿ ಇರುವ ಒಟ್ಟು 196 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತರು ಸೆಪ್ಟೆಂಬರ್ 19ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಇತ್ತೀಚೆಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸ್ವೀಕರಿಸುವ ವ್ಯವಸ್ಥೆ ಜಾರಿ ಮಾಡಿದ್ದರಿಂದ ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಹಾಕಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳು, ಮಾಸಿಕ ವೇತನ, ವಿದ್ಯಾರ್ಹತೆ, ನೇಮಕಾತಿ ಹೇಗೆ? ಜಿಲ್ಲೆಯಲ್ಲಿ ಎಲ್ಲೆಲ್ಲಿ ಉದ್ಯೋಗಗಳು ಖಾಲಿ ಇವೆ? ಎಂಬೆಲ್ಲ ಮಾಹಿತಿ ಇಲ್ಲಿ ತಿಳಿದುಕೊಳ್ಳಬಹುದು. ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸುವು ಉತ್ತಮ ಮಾರ್ಗವು ಆಗಿದೆ.
ಅಂಗನವಾಡಿ ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ
ಹುದ್ದೆಗಳ ಹೆಸರು: ಅಂಗನವಾಡಿ ಸಹಾಯಕಿ, ಕಾರ್ಯಕರ್ತೆ
ಅಂಗನವಾಡಿ ಕಾರ್ಯಕರ್ತೆ- 46
ಅಂಗನವಾಡಿ ಸಹಾಯಕಿ- 150
ಒಟ್ಟು ಹುದ್ದೆಗಳು: 196
ಪೋಸ್ಟಿಂಗ್: ಗದಗ ಜಿಲ್ಲೆ ವ್ಯಾಪ್ತಿ
ಅರ್ಜಿ ಸಲ್ಲಿಕೆ ಹೇಗೆ: ಆನ್‌ಲೈನ್ ಮೂಲಕ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟಂಬರ್ 17 ಮತ್ತು 19
ಗದಗ ಜಿಲ್ಲೆ ವ್ಯಾಪ್ತಿಯಲ್ಲಿ ಖಾಲಿ ಹುದ್ದೆಗಳ ಮಾಹಿತಿ
ಗದಗ- 45
ರೋಣ- 35
ಮುಂಡರಗಿ- 29
ನರಗುಂದ- 17
ಶಿರಹಟ್ಟಿ- 70

ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆರ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಕಡ್ಡಾಯವಾಗಿ 10ನೇ ತರಗತಿ, ಪಿಯುಸಿ, ಡಿಪ್ಲೊಮಾ ಪಾಸಾಗಿರಬೇಕು. ಇನ್ನೂ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಪಿಯುಸಿ ಆಗಿರಬೇಕು ಎಂದು ಇಲಾಖೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯಸ್ಸಿನ ಮಿತಿ ಎಷ್ಟಿರಬೇಕು?
ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳುವಂತೆ ನೇಮಕಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 19 ವರ್ಷ ಹಾಗೂ ಗರಿಷ್ಠ 35 ವಯಸ್ಸು ಇರಬೇಕು ಎಂದು ನಿಗದಿ ಮಾಡಲಾಗಿದೆ. ಈ ಪೈಕಿ ಅರ್ಜಿ ಸಲ್ಲಿಸುವ PWD ಅಭ್ಯರ್ಥಿಗಳಿಗೆ ಮಾತ್ರವೇ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಯಾವ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ಇರುವುದಿಲ್ಲ, ಇದು ಸಂಪೂರ್ಣ ಉಚಿತವಾಗಿರಲಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕಗಳ ವಿವರ
ನರಗುಂದ ಮತ್ತು ಮುಂಡರಗಿ ವಿಭಾಗ ಅಂಗನಡವಾಡಿಗಳಿಗೆ ಅರ್ಜಿ ಸಲ್ಲಿಸುವವರಿಗೆ ಸೆಪ್ಟೆಂಬರ್ 19 ಕೊನೆಯ ದಿನವಾಗಿದೆ.ಇ ಗದಗ, ಶಿರಹಟ್ಟಿ ಹಾಗೂ ರೋಣ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಸೆಪ್ಟೆಂಬರ್ 17 ಅರ್ಜಿ ಸಲ್ಲಿಕೆಯ ಕಡೆಯ ದಿನವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು https://karnemakaone.kar.nic.in/abcd/home.aspx ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಿದೆ.












Click it and Unblock the Notifications